Advertisement

ಮನುಷ್ಯರ ಮೇಲೆಯೇ ಔಷಧ ಪ್ರಯೋಗಿಸಿದ ವಿದೇಶಿ ಕಂಪನಿ

06:00 AM Apr 22, 2018 | Team Udayavani |

ಜೈಪುರ: ಆಘಾತಕಾರಿ ಬೆಳವಣಿಗೆಯಲ್ಲಿ ರಾಜಸ್ಥಾನದ ಚುರು ಮತ್ತು ಭರತ್‌ಪುರ ಜಿಲ್ಲೆಗಳ ಜನರಿಗೆ ವಿದೇಶಿ ಕಂಪನಿ ಕಾನೂನುಬಾಹಿರವಾಗಿ ಔಷಧವನ್ನು ಪ್ರಯೋಗಿಸಿದ್ದು, ಮಾ.19ರಂದು ನಡೆದಿದ್ದ ಈ ಕುಕೃತ್ಯ ಶನಿವಾರ ಬೆಳಕಿಗೆ ಬಂದಿದೆ. ಜತೆಗೆ ಭಾರತದ ಔಷಧ ಮಹಾನಿರ್ದೇಶನಾಲಯ (ಡಿಸಿಜಿಐ) ತಜ್ಞರ ತಂಡವನ್ನು ಜೈಪುರಕ್ಕೆ ಕಳುಹಿಸಿದೆ.

Advertisement

ಜೈಪುರದ ಖಾಸಗಿ ಆಸ್ಪತ್ರೆಯಲ್ಲಿ ವಿದೇಶಿ ಕಂಪನಿಯೊಂದು ಪ್ರಾಣಿಗಳಿಗೆ ನೀಡಬೇಕಾದ ಔಷಧವನ್ನು ಭರತಪುರ, ಚುರು ಜಿಲ್ಲೆಗಳ ಜನರಿಗೆ ನೀಡಿ ಪ್ರಯೋಗ ನಡೆಸಿದೆ. ಅಲ್ಲದೆ ಈ ಪ್ರಯೋಗ ನಡೆಸಿದ ಆಸ್ಪತ್ರೆ ಕನಿಷ್ಠ 50 ಹಾಸಿಗೆಗಳ ಸೌಲಭ್ಯವನ್ನೂ ಹೊಂದಿರಲಿಲ್ಲ ಎಂಬ ಅಂಶ ಬೆಳಕಿಗೆ ಬಂದಿದೆ. ನಿಯಮ ಬಾಹಿರ ಔಷಧ ಪ್ರಯೋಗಕ್ಕೆ ಒಳಗಾದ 21 ಮಂದಿ ಈಗ ಅನಾರೋಗ್ಯಕ್ಕೆ ಗುರಿಯಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ದುರಂತವೆಂದರೆ ಈ ಪ್ರಯೋಗ ಒಪ್ಪಿಕೊಳ್ಳಲು ಪ್ರತಿಯೊಬ್ಬರಿಗೂ 500 ರೂ. ನೀಡಲಾಗಿತ್ತು ಎಂದು ಚಿಕಿತ್ಸೆ ಪಡೆಯುತ್ತಿರುವವರು ಹೇಳಿದ್ದಾರೆ. 

3 ಸದಸ್ಯರ ಸಮಿತಿ: ಈ ಕೃತ್ಯದ ವಿರುದ್ಧ ತನಿಖೆ ನಡೆಸಲು ರಾಜಸ್ಥಾನ ಆರೋಗ್ಯ ಸಚಿವ ಕಾಲಿ ಕದಂ ಸರಾಫ್, ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ನೇತೃತ್ವದಲ್ಲಿ ಮೂವರು ಸದಸ್ಯರ ಸಮಿತಿ ರಚಿಸಿದ್ದಾರೆ. ಅಕ್ರಮ ಕಂಡುಬಂದಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ. 

ನಿಯಮಗಳೇನು?: ಯಾವುದೇ ಹೊಸ ಔಷಧಗಳನ್ನು ಪ್ರಾಣಿಗಳ ಮೇಲೆಯೇ ಪ್ರಯೋಗಿಸಬೇಕು.  ಔಷಧ ಪ್ರಯೋಗ (ಕ್ಲಿನಿಕಲ್‌ ಟ್ರಯಲ್‌)ನಡೆಸುವ ಮೊದಲು ವ್ಯಕ್ತಿ, ಕುಟುಂಬ ಸದಸ್ಯರಿಗೆ ಅದರ ಮಾಹಿತಿ ನೀಡಬೇಕು. ಲಿಖೀತ ಒಪ್ಪಿಗೆ ಪಡೆದು ಕೊಳ್ಳಬೇಕು. ಕ್ಲಿನಿಕಲ್‌ ಟ್ರಯಲ್‌ ವಿಮೆ ಕುರಿತೂ ವಿವರಿಸಬೇಕು.

Advertisement

Udayavani is now on Telegram. Click here to join our channel and stay updated with the latest news.

Next