Advertisement
ಫೆ.24ರಿಂದ ದಾಳಿ ಶುರುವಾದ ಬಳಿಕ ರಷ್ಯಾದಲ್ಲಿ ಜನರು ಅಗತ್ಯಕ್ಕಿಂತ ಹೆಚ್ಚು ಆಹಾರ- ಬೇಳೆ ಕಾಳುಗಳನ್ನು ಖರೀದಿ ಮಾಡುತ್ತಿದ್ದಾರೆ. ಇದರಿಂದಾಗಿ ಕಾಳಸಂತೆ ಕೋರರು ಪರಿಸ್ಥಿತಿಯ ದುರ್ಲಾಭ ಪಡೆದುಕೊಳ್ಳಬಾರದು ಎಂಬ ಕಾರಣಕ್ಕಾಗಿ ಪುತಿನ್ ಸರಕಾರ ಅಂಗಡಿಗಳಲ್ಲಿ ಜನರಿಗೆ ಬೇಕಾಗುವಷ್ಟೇ ಆಹಾರ ವಸ್ತುಗಳ ಮಾರಾಟ ಮಾಡುವಂತೆ ನಿರ್ಬಂಧ ಹೇರಿದೆೆ ಎಂಬ ಸಮಜಾಯಿಷಿ ಬೆಂಬಲಿಗ ರದ್ದು ಮತ್ತು ಸರಕಾರದ್ದು. ಬ್ರೆಡ್, ಅಕ್ಕಿ, ಮೊಟ್ಟೆ, ಮಾಂಸ ಮತ್ತು ಇತರ ಕೆಲವು ವಸ್ತು ಗಳ ಬೆಲೆಯನ್ನು ಸರಕಾರವೇ ನಿಯಂತ್ರಣ ಮಾಡುತ್ತದೆ. ಹೀಗಾಗಿ ಅವುಗಳನ್ನು ನೀಡುವುದರ ಮೇಲೆ ಮಿತಿ ಹೇರಿಕೆ ಮಾಡಿದ್ದು ಹಲವು ಜಿಜ್ಞಾಸೆಗಳಿಗೆ ಕಾರಣವಾಗಿದೆ.
Related Articles
ರಷ್ಯಾದ ದಾಳಿಯಿಂದ ಖಾರ್ಕಿವ್ ನಗರದ ಮೂಲಸೌಕರ್ಯಗಳು ಅಕ್ಷರಶಃ ನಾಶವಾಗಿದ್ದು, ಅಲ್ಲಿನ ಸುಮಾರು 3 ಲಕ್ಷ ಜನರು, ಜೀವನಕ್ಕೆ ಆಧಾರವಾದ ಆಹಾರ, ನೀರಿನ ಅಭಾವ ಎಂದುರಿಸುತ್ತಿದ್ದಾರೆ. ಈ ನಡುವೆ ರಷ್ಯಾದ ಸೈನಿಕರು ಜನರಿಗೆ ಅಲ್ಪಸ್ವಲ್ಪ ಆಹಾರದ ನೆರವು ನೀಡಲು ಮುಂದೆ ಬಂದರೂ ಖಾರ್ಕಿವ್‌ನ ಜನರು ಸ್ವಾಭಿಮಾನದಿಂದಾಗಿ ನೆರವು ನಿರಾಕರಿಸುತ್ತಿದ್ದಾರೆ ಎಂದು ಆ ನಗರದ ಮೇಯರ್ ಐಹೊರ್ ಕೋಲಿಖೇವ್ ತಿಳಿಸಿದ್ದಾರೆ. ಇಡೀ ನಗರ ಇಂದು ರಷ್ಯಾ ಪಡೆಗಳ ಹಿಡಿತದಲ್ಲಿದೆ. ಅಲ್ಲಿನ ಜನರು, ಅವಕಾಶ ಸಿಕ್ಕಾಗ ತಮ್ಮ ಮನೆಗಳಿಂದ ಹೊರಹೋಗಿ, ದಿನಸಿ ಅಂಗಡಿಗಳನ್ನು ತಡಕಾಡುತ್ತಿದ್ದಾರೆ. ಆದರೆ ಅಂಗಡಿಗಳಲ್ಲಿ ದಿನಸಿ ಖಾಲಿಯಾಗಿದೆ. ಇದು ಅಲ್ಲಿನ ಜನರನ್ನು ಕಂಗಾಲಾಗಿಸಿದೆ ಎಂದು ಸಿಎನ್‌ಎನ್ ಸುದ್ದಿ ಸಂಸ್ಥೆ ತಿಳಿಸಿದೆ.
Advertisement