Advertisement
ಈ ವರ್ಷದ “ಬೆಂಗಳೂರು ಸಾಹಿತ್ಯೋತ್ಸವ’ ಈ ಹಿಂದಿನ ಉತ್ಸವಗಳಂತೆಯೇ ಜರಗಿದೆ. ಮುಕ್ತಾಯಗೊಂಡಿದೆ. ವಾಸ್ತವ ವೇನೆಂದರೆ, ಒಂದು ರೀತಿಯಲ್ಲಿ ರಾಜಕೀಯ ಗ್ರಹಣಕ್ಕೊಳಗಾಗಿ ಭಾಗವಹಿಸಿರುವ ಈ ಬಾರಿಯ ಸಾಹಿತ್ಯಮೇಳದಲ್ಲಿ ಮೇಲುಗೈ ಸಾಧಿಸಿದ್ದು ಪುಸ್ತಕ ಪ್ರಕಾಶಕರು, ಪಂಚತಾರಾ ಸಂಸ್ಕೃತಿಯ ಪ್ರದರ್ಶನ ಪ್ರವೀಣರು ಹಾಗೂ ಗಣ್ಯಾತಿಗಣ್ಯರ ಬಳಗ.
Related Articles
ಕರ್ನಾಟಕದ ರಾಜಧಾನಿಯಲ್ಲೇ ನಡೆಯುವ “ಬೆಂಗಳೂರು ಸಾಹಿತ್ಯೋತ್ಸವ’ದಲ್ಲಿ ಕನ್ನಡದ ಬಗ್ಗೆ ಮಲತಾಯಿ ಧೋರಣೆ ತೋರಿಸಲಾಗುತ್ತಿದೆಯೆಂಬುದು ಯಾರ ಗಮನಕ್ಕೂ ಬೀಳದೆ ಹೋಗಿಲ್ಲ. ಉತ್ಸವದಲ್ಲಿ ಕನ್ನಡದ ಸಾಹಿತ್ಯಕ್ಕೆ ಸಂಬಂಧಿಸಿದಂತೆ, ಕೇವಲ ಸಾಂಕೇತಿಕವಾಗಿ, ಯಾವುದಾದರೂ ಒಂದು ಚರ್ಚೆ/ಸಂವಾದ ಅಥವಾ ಭಾಷಣವಿರುತ್ತದೆ.
Advertisement
ಸಾಹಿತ್ಯ ಹಾಗೂ ಮೋದಿ ವಿರೋಧಿ ಕೂಗುನರೇಂದ್ರ ಮೋದಿಯವರು 2014ರಲ್ಲಿ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಬೆಂಗಳೂರು, ಜೈಪುರ ಅಥವಾ
ಇನ್ನಿತರ ಕಡೆಗಳಲ್ಲಿ ನಡೆಯುವ ಸಾಹಿತ್ಯ ಸಮ್ಮೇಳನ ಅಥವಾ ಉತ್ಸವಗಳು ಮೋದಿ ವಿರೋಧಿ ಹಾಗೂ ಹಿಂದುತ್ವ ವಿರೋಧಿ ಹಾಗೂ “ಫ್ಯಾಸಿಸ್ಟ್ ವಿರೋಧಿ’ ಘೋಷಣೆಗಳಿಗೆ ಅವಕಾಶ ನೀಡುವ ವೇದಿಕೆಗಳಾಗಿ ಪರಿಣಮಿಸಿವೆ! ಈ ಸಾಹಿತ್ಯ ಸಮ್ಮೇಳನ ಅಥವಾ ಉತ್ಸವಗಳಲ್ಲಿ ಬಹುಸಂಖ್ಯೆಯಲ್ಲಿ ಮೆರೆಯುತ್ತಿರುವವರು ಸಮಾಜವಾದ ಹಾಗೂ ಜಾತ್ಯತೀತವಾದದ ಬಗ್ಗೆ ಧ್ವನಿಯೆತ್ತಿ ಮಾತನಾಡುವ ಸೂಪರ್ ಶ್ರೀಮಂತ ಎಡಪಂಥೀಯರು, ಬಂಡವಾಳಶಾಹಿಗಳು ಹಾಗೂ ಫ್ಯೂಡಲ್ ಸಂಸ್ಕೃತಿ ಸಂಪನ್ನ ರೆನ್ನುವುದು ಎಲ್ಲರಿಗೂ ಗೊತ್ತೇ ಇದೆ. ನಮ್ಮ ಕಮ್ಯುನಿಸ್ಟರು ಹಾಗೂ ಎಡಪಂಥೀಯರಲ್ಲಿ ಬಂಡವಾಳಶಾಹಿಗಳು ಹಾಗೂ ಪ್ರಗತಿ ವಿರೋಧಿಗಳೂ ಇದ್ದಾರೆಂಬುದನ್ನು ಅಲ್ಲಗಳೆಯು ವಂತಿಲ್ಲ. ಇಂಥ ಸೂಪರ್ ಸಿರಿವಂತ ಪೀಳಿಗೆಯ ಹಾಗೂ ಆಧುನಿಕ “ಕಾರ್ಪೊರೇಟ್ ಕಮ್ಯೂನಿಸಂ’ನ ಈ ಕಾಲದಲ್ಲಿ ವಾಮಪಂಥೀಯ ಒಲವೆನ್ನುವುದು “ಬದ್ಧತೆ’ಗಿಂತಲೂ ಹೆಚ್ಚಾಗಿ ಒಂದು ಫ್ಯಾಶನ್ನೇ ಆಗಿಬಿಟ್ಟಿದೆ. ಸಮಾಜದ ದುರ್ಬಲ ವರ್ಗಗಳ ಮೇಲಿನ ಕಾಳಜಿಯೆನ್ನುವುದು ಕೇವಲ ವಾಮಪಂಥೀಯರ ಏಕಸ್ವಾಮ್ಯದ ಸೊತ್ತೆಂದು ಹೇಳುವ ಹಾಗಿಲ್ಲ. ಒಂದು ವೇಳೆ ಇದೇ ನಿಜವಾಗಿದ್ದಿದ್ದರೆ ಪಶ್ಚಿಮ ಬಂಗಾಲದಲ್ಲಿ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಬಡತನ ವಿರುತ್ತಿರಲಿಲ್ಲ ಅಥವಾ ಕೇರಳದಲ್ಲಿ ಇಷ್ಟೊಂದು ಹೆಚ್ಚಿನ ಪ್ರಮಾಣದ ನಿರುದ್ಯೋಗವಿರುತ್ತಿರಲಿಲ್ಲ. ಪಶ್ಚಿಮ ಬಂಗಾಲದಲ್ಲಿ ಘೇರಾವ್‌ಗಳಿಗೆ, ಹರತಾಳಗಳಿಗೆ, ನಕ್ಸಲೀಯ ಚಟುವಟಿಕೆಗಳಿಗೆ ಹಾಗೂ ಅಶಿಸ್ತಿನ ಘಟನೆಗಳಿಗೆ ಬೆಂಬಲ ನೀಡುವ ಮೂಲಕ ಅಲ್ಲಿನ ಕೈಗಾರಿಕೆಗಳಿಗೆ ಹಾನಿಯೆಸಗಿದವರು ಮಾರ್ಕ್ಸಿಸ್ಟರು ಹಾಗೂ ಅವರ ಮಿತ್ರರೇ ಅಲ್ಲವೆ? ಇದು ತಪ್ಪು ಎಂದು ಅವರಿಗೆ ಅರಿವಾಗುವಾಗ ತುಂಬಾ ತಡವಾಗಿತ್ತು. ಕುತೂಹಲಕಾರಿ ಸಂಗತಿಯೆಂದರೆ, ಬಲಪಂಥೀಯ ಅಭಿಪ್ರಾ ಯ ಗಳನ್ನು ಹೊಂದಿರುವುದು ಹಾಗೂ ಸಮಾಜವಾದದ ವಿರುದ್ಧ ಮಾತೆತ್ತುವುದು ಮಧ್ಯಮ ವರ್ಗವೇ. ವಾಮ ಪಂಥೀಯರೊಂದಿಗೆ ಹೋಲಿಸಿದಲ್ಲಿ ಬಲಪಂಥೀಯರಲ್ಲಿ ಹೆಚ್ಚಿನವರು ನಿಜಕ್ಕೂ ಉತ್ತಮ ಮಟ್ಟದ ಪ್ರಗತಿಪರರು ಹಾಗೂ ಉದಾರವಾದಿ ಧೋರಣೆಯವರು. ಈ ಬಾರಿಯ ಬೆಂಗಳೂರು ಸಾಹಿತ್ಯೋತ್ಸವಕ್ಕೆ ಜವಾಹರಲಾಲ್ ನೆಹರೂ ವಿ.ವಿ.ಯ ವಿದ್ಯಾರ್ಥಿ ಸಂಘಟನೆಯ ಮಾಜಿ ಅಧ್ಯಕ್ಷ ಕನ್ಹಯ್ಯ ಕುಮಾರ್‌ನನ್ನೂ ಆಹ್ವಾನಿಸಲಾಗಿತ್ತು. ಉತ್ಸವ ಸಂಘಟಕರಿಗೆ ಸಾಹಿತ್ಯಕ್ಕಿಂತಲೂ ರಾಜಕೀಯದಲ್ಲಿ ಹೆಚ್ಚು ಆಸಕ್ತಿ ಎಂಬುದರ ದ್ಯೋತಕ ಇದು. ಕನ್ನಯ್ಯ ಕುಮಾರ್ ಸಾಹಿತ್ಯದಲ್ಲಿ ಕೃಷಿ ಮಾಡಿರುವ ಬಗ್ಗೆ ಹೆಚ್ಚೇನೂ ಮಾಹಿತಿ ಇಲ್ಲ. ಈಚೆಗೆ ಗುಂಡೇಟಿಗೆ ಬಲಿಯಾದ ಪತ್ರಕರ್ತೆ ಗೌರಿ ಲಂಕೇಶ್ ಬಗ್ಗೆ ಚರ್ಚಿಸುವ ಕಾರ್ಯಕ್ರಮವೊಂದನ್ನು ಹಮ್ಮಿಕೊಳ್ಳಲಾಗಿದ್ದುದು ಅರ್ಥಪೂರ್ಣವೇ ಆಗಿತ್ತು. ಆಕೆಯ ತಂದೆ ಪಿ. ಲಂಕೇಶ್ ಮೂಲತಃ ಇಂಗ್ಲಿಷ್ ಅಧ್ಯಾಪಕರಾಗಿದ್ದವರು; ಮುಂದಿನ ದಿನ ಗಳಲ್ಲಿ ಕನ್ನಡ ಪತ್ರಿಕೋದ್ಯಮ ಪ್ರಪಂಚವನ್ನು ಪ್ರವೇಶಿಸಿ ದ ವರು. ಸಚಿತ್ರ ನಿಯತಕಾಲಿಕೆಯಲ್ಲಿ ದೈನಿಕ ಪತ್ರಿಕೆಗಿಂತಲೂ ಹೆಚ್ಚಿನ ಪ್ರತಿಭಾಭಿವ್ಯಕ್ತಿಗೆ ಅವಕಾಶವಿದೆ. ಪತ್ರಿಕೋದ್ಯಮವೆನ್ನು ವುದು ಅವಸರದ ಸಾಹಿತ್ಯ ಎಂಬ ಮಾತೇ ಇದೆ. ಕ್ರಿಕೆಟ್ ಕುರಿತು ಬರೆಯುತ್ತಿದ್ದ ಲೇಖಕ ನಿವೆಲ್ ಕಾರ್ಡಸ್, ಕ್ರಿಕೆಟ್ ಪಂದ್ಯಾವಳಿಯ ವರದಿಗಾರಿಕೆಯಲ್ಲಿ ತಮ್ಮದೇ ಶೈಲಿಯನ್ನು ಮೆರೆದವರು. 1930ರ ಮಧ್ಯಭಾಗದಲ್ಲಿ ವಿಜಯ್ ಮರ್ಚೆಂಟ್ ಹಾಗೂ ಸೈಯದ್ ಮುಷ್ತಾಕ್ ಆಲಿ ಇವರುಗಳು, ಇಂಗ್ಲೆಂಡ್‌ನ ತಾರಾಕ್ರಿಕೆಟಿಗರ ತಂಡದ ವಿರುದ್ಧ ಆಡಿದ ಪಂದ್ಯದಲ್ಲಿ ಒಬ್ಬೊಬ್ಬನೂ ನೂರು ರನ್‌ಗಳನ್ನು ಬಾರಿಸಿದ್ದನ್ನು ನೋಡಿ ಉಭಯತ್ರರನ್ನೂ ಕ್ರಿಕೆಟ್‌ನ ಗದ್ಯ ಹಾಗೂ ಕಾವ್ಯವೆಂದು ಬಣ್ಣಿಸಿದವರು ಕಾರ್ಡಸ್. ಆ ದಿನಗಳಲ್ಲಿ ಹೆಲ್ಮೆಟ್‌ಗಳಾಗಲಿ, ರಕ್ಷಣಾತ್ಮಕ ಸಲಕರಣೆಗಳಾಗಲಿ, ದೊಡ್ಡ ಮೊತ್ತದ ಸಂಭಾವನೆಯಾಗಲಿ ಇರಲಿಲ್ಲ. ಆ ಕಾಲದ ಆಟಗಾರರು, ಹಣ ಹಾಗೂ ಕೀರ್ತಿ ದಾಖಲೆಗಳನ್ನು ಬೆಂಬತ್ತುವ ಇಂದಿನವರಂತಲ್ಲ. ಈ ಮಾತನ್ನು ಪ್ರಸ್ತಾವಿಸಿದ್ದಕ್ಕೆ ಕಾರಣವಿದೆ. ಮೊನ್ನೆಯ ಸಾಹಿತ್ಯೋತ್ಸವದಲ್ಲಿ ಕ್ರಿಕೆಟ್ ಬಗೆಗಿನ ಸಂವಾದ ಕಾರ್ಯಕ್ರಮವೊಂದಿತ್ತು. ಸಾಮಾನ್ಯವಾಗಿ ಬೆಂಗಳೂರು ಸಾಹಿತ್ಯೋತ್ಸವದಂಥ ಗಣ್ಯರ ಅಕ್ಷರ ಮೇಳಗಳಲ್ಲಿ ಇತಿಹಾಸಕಾರ ರಾಮಚಂದ್ರ ಗುಹಾ ಅವರಂಥವರು ಇದ್ದೇ ಇರುತ್ತಾರೆ. ಈ ಬಾರಿ ಇವರ ಜತೆಗೆ ಕರ್ನಾಟಕದವರೇ ಆದ, ಮಾಜಿ ಕಾಂಗ್ರೆಸ್ ಸಚಿವ ಜೈರಾಮ್ ರಮೇಶ್ ಕೂಡ ಇದ್ದರು. ಜೈರಾಮ್ ರಮೇಶ್ ಅವರು ಕೆಲ ಕಾಲ ರಾಜ್ಯ ಯೋಜನಾ ಆಯೋಗದ ಉಪಾಧ್ಯಕ್ಷರಾಗಿದ್ದವರು; ಆದರೆ ಅವರ ಕಣ್ಣು ದಿಲ್ಲಿಯ ಮೇಲಿದ್ದುದರಿಂದ ಈ ಹುದ್ದೆಯಲ್ಲಿ ಅವರು ತೋರಿಸಿದ ಆಸಕ್ತಿ “ಇಲ್ಲ’ ಎನ್ನುವಷ್ಟು ಅಲ್ಪ ಪ್ರಮಾಣದ್ದು. ಭಾಷಣಕಾರರಲ್ಲಿ ಕೆಲವರು, ದೇಶದಲ್ಲಿ ಭಿನ್ನಾಭಿಪ್ರಾಯ ಹತ್ತಿಕ್ಕುವ ಸನ್ನಿವೇಶವಿದೆಯೆಂದು ದೊಡ್ಡ ಗಂಟಲಲ್ಲಿ ಹೇಳಿದರಾದರೂ, ಪ್ರಸ್ತುತಃ ಈ ಸಾಹಿತ್ಯೋತ್ಸವದ ಸಂಘಟಕರೂ ಮಾಡಿದ್ದು ಇದನ್ನೇ ಎಂಬುದನ್ನು ಸ್ವತಃ ಗುರುತಿಸುವಲ್ಲಿ ವಿಫಲರಾದರು. ಯಾಕೆಂದರೆ ಸಂಘಟಕರು ಬಲಪಂಥೀಯರನ್ನು ಅಥವಾ ಯಾರನ್ನು ಅವರು ಉದಾರ ವಾದಿಗಳಲ್ಲವೆಂದು ಪರಿಗಣಿಸಿದ್ದಾರೋ ಅವರನ್ನು – ಈ ಉತ್ಸವದಿಂದ ಅಕ್ಷರಶಃ ಹೊರಗಿಟ್ಟರು. ಈ ಮೂಲಕ “ಸಿದ್ಧಾಂತಗಳ ಘರ್ಷಣೆಯ ಸಾಧ್ಯತೆ’ಯನ್ನು ಸುಲಭವಾಗಿ ನಿವಾರಿಸಿಕೊಂಡರು. ರಾಷ್ಟ್ರೀಯತೆ “ಒಂದು ದೋಷ’ ಎಂಬ ತಪ್ಪು ತಿಳಿವಳಿಕೆ ಸಮ್ಮೇಳನದ ಸಂಘಟಕರು ಹಾಗೂ ಪ್ರತಿನಿಧಿ ಗಳಲ್ಲಿದೆ. ಇದು ನಿಜಕ್ಕೂ ಅಚ್ಚರಿಯ ಸಂಗತಿ. ಹಾಗೆ ನೋಡಿದರೆ ರಾಷ್ಟ್ರೀಯತೆಯ ಕೊರತೆ (ರಾಷ್ಟ್ರ ಪ್ರೇಮದ್ದಲ್ಲ)ಯೇ ದೇಶದಲ್ಲಿಂದು ತಾಂಡವವಾಡುತ್ತಿರುವ ಭ್ರಷ್ಟಾಚಾರ ಹಾಗೂ ಅದಕ್ಷತೆಯಂಥ ಪಿಡುಗುಗಳಿಗೆ ಹಾದಿ ಮಾಡಿಕೊಟ್ಟಿರುವ ಕೆಲವು ಮುಖ್ಯ ಕಾರಣಗಳಲ್ಲೊಂದು. ಜವಾಹರಲಾಲ್ ನೆಹರೂ ವಿ.ವಿ. ಹಾಗೂ ದೇಶದ ಮತ್ತಿತರ ವಿ.ವಿ.ಗಳ ವಿದ್ಯಾರ್ಥಿಗಳ ಒಂದು ವರ್ಗದಲ್ಲಿಂದು “ಆಜಾದಿ’ ಸಂಸ್ಕೃತಿ ಹಾಗೂ ರಾಷ್ಟ್ರವಿರೋಧಿ ಭಾವನೆಗಳು ಹೇಗೆ ಉಲ್ಬಣಗೊಳ್ಳುತ್ತ ಬಂದಿವೆ ಎಂಬುದನ್ನು ಕನ್ಹಯ್ಯರಂಥವರಿಗೆ ನೆನಪಿಸಿಕೊಡಬೇಕಾಗಿದೆ. “ಮೇಡ್
ಇನ್ ಇಂಡಿಯಾ’ ಎಂಬ ಸ್ವದೇಶೀ ಆಂದೋಲನಕ್ಕೆ ಹಾಗೂ ಭಾರತ ನಿರ್ಮಿತ ಉತ್ಪನ್ನಗಳಲ್ಲಿ ಪ್ರಗತಿ ಸಾಧಿಸಬೇಕೆಂಬ ಉದ್ದೇಶಕ್ಕೆ ಬಿಜೆಪಿ ಸರಕಾರ ಒತ್ತಾಸೆ ನೀಡಿದರೆ ಇದನ್ನು ಅಪರಾಧ ಎಂದು ಹೇಳುವುದಕ್ಕಾಗುತ್ತದೆಯೆ? ಅಮೆರಿಕದಲ್ಲಿ ಡೊನಾಲ್ಡ್ ಟ್ರಂಪ್ ಅಧ್ಯಕ್ಷರಾಗುವ ಪೂರ್ವದಲ್ಲೇ ಅಲ್ಲಿನ ಜನರು ಇಂಥ ಸ್ವದೇಶೀ ಭಾವನೆಯನ್ನು ಪ್ರೋತ್ಸಾಹಿಸುತ್ತಿದ್ದರು. ನಮ್ಮ ದೇಶದಲ್ಲಿ ಪ್ರಾಂತೀಯತೆ, ಕೋಮುವಾದ ಹಾಗೂ ಜಾತೀಯವಾದಗಳ ಅಬ್ಬರ ತಾಳದ ನಡುವೆಯೂ ರಾಷ್ಟ್ರೀಯ ತೆಯ ಭಾವ ಸ್ವಲ್ಪ ಮಟ್ಟಿಗೆ ತಲೆಯೆತ್ತಿದೆಯೆಂಬ ಬಗ್ಗೆ ನಾವು ಸಂತಸ ಪಡಬೇಕು. ರಾಷ್ಟ್ರೀಯತಾಭಾವದ ಕೊರತೆ ಎದ್ದು ತೋರುತ್ತಿರುವ ಜಮ್ಮು ಮತ್ತು ಕಾಶ್ಮೀರದಲ್ಲಿನ ಪರಿಸ್ಥಿತಿ ನೋಡಿ. ಅಲ್ಲಿನ ಜನರು ದೊಡ್ಡ ಸಂಖ್ಯೆಯಲ್ಲಿ ನಮ್ಮ ಸೇನಾ ಪಡೆಗಳನ್ನು ಹೀನಾಯಿಸುವಂತಾಗಿದೆ; ಭಯೋತ್ಪಾದಕರ ಪರವಾಗಿ ಮಾತಾಡುತ್ತ ತಿರುಗುವಂತಾಗಿದೆ. ದೇಶದಲ್ಲಿ ಅಸಹಿಷ್ಣುತೆಯಿದೆ, ಭಿನ್ನಮತವನ್ನು ಹತ್ತಿಕ್ಕಲಾಗು ತ್ತಿದೆ ಎಂದು ಬೆಂಗಳೂರು ಸಾಹಿತ್ಯೋತ್ಸವದಲ್ಲಿ ಆಕ್ಷೇಪ ತೆಗೆದು ಮಾತನಾಡಿದ ಭಾಷಣಕಾರರಿಗೆ ಒಂದು ಮಾತನ್ನು ನೆನಪಿಸಿ ಕೊಡಬೇಕಾಗಿದೆ. ಹೀಗೆ ತಮ್ಮಿಷ್ಟ ಬಂದಂತೆ ಮಾತನಾಡಿದ್ದಕ್ಕಾಗಿ ಯಾರೊಬ್ಬರ ವಿರುದ್ಧವೂ ರಾಜದ್ರೋಹ ಕಾಯ್ದೆಯಡಿ ಕೇಸು ದಾಖಲಿಸಲಾಗಿಲ್ಲ; ಯಾರೊಬ್ಬರ ಗಂಟಲನ್ನೂ ಒತ್ತಿ ಹಿಡಿಯಲಾಗಿಲ್ಲ. ಕನಿಷ್ಠ ಪಕ್ಷ, 2015ರ ಬೆಂಗಳೂರಿನ ಸಾಹಿತ್ಯೋತ್ಸ ವದಲ್ಲಿ, ಲೇಖಕ ವಿಕ್ರಂ ಸೇಥ್ ಅವರು, ಸಾಹಿತ್ಯ ಅಕಾಡೆಮಿ ಹಾಗೂ ಕೇಂದ್ರ ಸರಕಾರದ ಪ್ರಶಸ್ತಿಗಳನ್ನು ಮರಳಿಸಲು ಹೊರಟಿದ್ದ ಸಾಹಿತಿಗಳನ್ನು ತರಾಟೆಗೆ ತೆಗೆದುಕೊಂಡ ಘಟನೆಯಾದರೂ ನಡೆದಿತ್ತು. ಈ ಬಾರಿಯ ಉತ್ಸವದಲ್ಲಿ ಚರ್ಚಿಸಲು ಇಂಥ ವಿಷಯಗಳು/ವಿವಾದಗಳು ಇರಲಿಲ್ಲವೆ? ಅರಕೆರೆ ಜಯರಾಮ್