Advertisement
ಆದರೆ ಸರಕಾರದಿಂದ ಮಂಜೂರಾತಿಗೊಂಡಿ ರುವ ಬಗ್ಗೆ ಯಾವುದೇ ಮಾಹಿತಿ ಇನ್ನೂ ಸಿಕ್ಕಿಲ್ಲ. ಒಂದೆರಡು ವರ್ಷ ಹಿಂದೆ ಇಲಾಖೆಯ ಕೆಲವು ಹಿರಿಯ ಅಧಿಕಾರಿಗಳು ಕಾರ್ನಾಡು ಕೈಗಾರಿಕೆ ಪ್ರದೇಶ ಬಳಿಯ ಹೆದ್ದಾರಿಯ ಪೆಟ್ರೋಲ್ ಬಂಕ್ ಹಿಂಬದಿಯಲ್ಲಿರುವ ಎತ್ತರದ ಪ್ರದೇಶದ ಸುಮಾರು ಒಂದು ಎಕ್ರೆ ಭೂಮಿಯನ್ನು ಇಲಾಖೆಯ ಹಿರಿಯ ಅಧಿಕಾರಿಗಳು ಪರಿಶೀಲಿಸಿ ಸರಕಾರದ ಮುಂದೆ ಪ್ರಸ್ತಾವನೆಯನ್ನು ಶಾಸಕರ ಅನುಮೋದನೆಯೊಂದಿಗೆ ಸಲ್ಲಿಸಿದ್ದರು. ಕಾರ್ಯಾಚರಣೆಗೆ ವಿಳಂಬ ಮೂಲ್ಕಿಯ ಸುತ್ತುಮುತ್ತ ಅಗ್ನಿ ಅವಘಡ ಸಂಭವಿಸಿದರೆ ದೂರದ ಮಂಗಳೂರಿ ನಿಂದ ಅಗ್ನಿಶಾಮಕ ದಳದವರು ಬಂದು ಕಾರ್ಯಾಚರಣೆ ನಡೆಸಬೇಕಿದೆ.
ದೂರದಿಂದ ಅಗ್ನಿಶಾಮಕ ದಳದ ವಾಹನ ಬರುವಾಗ ಸಹಜವಾಗಿ ಕಾರ್ಯಾಚರಣೆಗೆ ವಿಳಂಬವಾಗುತ್ತದೆ. ಆದ್ದರಿಂದ ಮೂಲ್ಕಿ
ತಾಲೂಕು ಕೇಂದ್ರದಲ್ಲಿ ಒಂದು ಘಟಕ ಬೇಕು ಎಂಬುದು ಸಾರ್ವಜನಿಕರ ಆಗ್ರಹ. ಇಲಾಖೆಯ ಮೇಲಧಿಕಾರಿಗಳು ತಿಳಿಸಿದಂತೆ ಇಲ್ಲಿ ಇರುವ ಒಂದು ಎಕ್ರೆ ಭೂಯಿಯಲ್ಲಿ ಅಗ್ನಿಶಾಮಕ ದಳ ಸ್ಥಾಪನೆ ಸಾಧ್ಯವಾಗದು ಕನಿಷ್ಠ ಮೂರು ಎಕ್ರೆ ಪ್ರದೇಶ ಬೇಕು ಎಂಬುದು ಅವರ ಅಭಿಮತ. ಅಗ್ನಿಶಾಮಕ ದಳದ ಕೇಂದ್ರ ಕಡಿಮೆ ಜಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ನಿದರ್ಶನಗಳು ಮಂಗಳೂರಿನ ಕದ್ರಿ,
ಪಾಂಡೇಶ್ವರದಲ್ಲಿ ಇದೆ. ಆದ್ದರಿಂದ ಒಂದೆ ರಡು ವಾಹನದ ಘಟಕ ಸ್ಥಾಪಿಸ ಬಹುದು ಎನ್ನುತ್ತಾರೆ ಸ್ಥಳೀಯ ನಾಗರಿಕರು.
ಸಾರ್ವಜನಿಕರ ಅಸಮಧಾನ ಜನರ ಅತೀ ಅಗತ್ಯದ ಬೇಡಿಕೆಗಳಲ್ಲಿ ಇದು ಪ್ರಮುಖವಾದ ಕಾರಣ ಇದನ್ನು ಪೂರೈಸುವುದು ಸರಕಾರದ ಆದ್ಯ ಕರ್ತವ್ಯ. ಈ ಬಗ್ಗೆ ಇಲಾಖೆ ಸ್ಪಂದಿಸದಿರುವ ಬಗ್ಗೆ ಸಾರ್ವಜನಿಕರು ಅಸಮಧಾನ ವ್ಯಕ್ತಪಡಿಸಿದ್ದಾರೆ. ಏನಿದ್ದರೂ ಅಗ್ನಿಶಾಮಕ ದಳದ ಸ್ಥಾಪನೆಗೆ ಜನ ಪ್ರತಿನಿಧಿಗಳ ಪ್ರಯತ್ನ ನಡೆಯಲೇಬೇಕು ಎಂಬುದು ಜನರ ಒಕ್ಕೊರಳ ಕೂಗು.
Related Articles
ಜನರ ಬೇಡಿಕೆಯಂತೆ ನಾನು ಮೇಲಧಿಕಾರಿಗಳ ಜತೆಗೆ ಸಾಕಷ್ಟುಬಾರಿ ಮಾತನಾಡಿದ್ದೇನೆ. ಇಲ್ಲಿಯ ಕೈಗಾರಿಕೆ ಪ್ರದೇಶದ ಬಳಿ ಅಗ್ನಿಶಾಮಕ ದಳದ ಮೇಲಧಿಕಾರಿಗಳು ಸಮೀಕ್ಷೆ ನಡೆಸಿದ್ದಾರೆ. ಸರಕಾರದ ಮುಂದೆ ಪ್ರಸ್ತಾವನೆ ಇರುವಾಗಲೇ ಘಟಕ ಸ್ಥಾಪನೆಗೆ ಕನಿಷ್ಠ ಮೂರು ಎಕ್ರೆ ನಿವೇಶನ ಬೇಕು ಎಂಬ ಉತ್ತರ ಅಧಿಕಾರಿಗಳಿಂದ ಬಂದಿದೆ. ಆದರೆ ನಾನು ಈಗ ಎರಡು ವಾಹನಳ ಸೇವೆಯಾದರೂ ಅಗತ್ಯ ಇದೆ. ಯೋಜನೆ ಆರಂಭಗೊಳಿಸುವಂತೆ ಪತ್ರ ಬರೆದಿದ್ದೇನೆ. ಪ್ರಸ್ತಾವನೆ ಸರಕಾರದಲ್ಲಿ ಕೈಯಲ್ಲಿದೆ. ನಾನು ಶತಪ್ರಯತ್ನ ಮಾಡಿ ಮೂಲ್ಕಿಗೆ ಈ ಸವಲತ್ತು ದೊರೆಯುವಂತೆ ಶ್ರಮಿಸುವೆ.
*ಉಮಾನಾಥ ಕೋಟ್ಯಾನ್, ಶಾಸಕರು, ಮೂಡುಬಿದಿರೆ
Advertisement
ಸರ್ವೋತ್ತಮ ಅಂಚನ್