Advertisement

ಮತ ಎಣಿಕೆಗೆ ಕೆಲವೇ ದಿನ ಬಾಕಿ : ಚುರುಕುಗೊಂಡ ಸಿದ್ಧತೆ

09:13 PM May 10, 2019 | Team Udayavani |

ಕಾಸರಗೋಡು: ಲೋಕಸಭೆ ಚುನಾವಣೆ ನಡೆದು, ಮತ ಎಣಿಕೆಗೆ ಕೆಲವೇ ದಿನಗಳು ಬಾಕಿಯಿದ್ದು, ಈ ಸಂಬಂಧ ಸಿದ್ಧತೆ ಚುರುಕಿನಿಂದ ನಡೆಯುತ್ತಿದೆ.

Advertisement

ಮತ ಎಣಿಕೆ ಕೇಂದ್ರವಾಗಿರುವ ಪಡನ್ನಕ್ಕಾಡ್‌ ನೆಹರೂ ಕಲಾ-ವಿಜ್ಞಾನ ಕಾಲೇಜಿನಲ್ಲಿ ಮತ ಎಣಿಕೆಯ ದಿನ 250 ಸಿಬ್ಬಂದಿಯನ್ನು ನೇಮಿಸಲಾಗುವುದು ಎಂದು ಜಿಲ್ಲಾ ಚುನಾವಣೆ ಅಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಡಾ| ಡಿ.ಸಜಿತ್‌ ಬಾಬು ತಿಳಿಸಿದರು.

ಕರ್ತವ್ಯದಲ್ಲಿರುವ ಸಿಬಂದಿಗಾಗಿ ಸಮಗ್ರ ತರಬೇತಿ ಮೇ 17ರಂದು ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆಯಲಿದೆ. ಕಾಸರಗೋಡು ಲೋಕಸಭೆ ಕ್ಷೇತ್ರದ 7 ವಿಧಾನಸಭೆ ಕ್ಷೇತ್ರಗಳ ಮತ ಎಣಿಕೆ ಪಡನ್ನಕ್ಕಾಡ್‌ ನೆಹರೂ ಕಾಲೇಜಿನಲ್ಲಿ ಜರುಗುವುದು. ಇದಕ್ಕಾಗಿ ಪ್ರತಿ ವಿಧಾನಸಭೆ ಕ್ಷೇತ್ರದ ಮತಗಣನೆಗೆ ತಲಾ 14 ಮೇಜುಗಳನ್ನು ಇರಿಸಲಾಗುವುದು.

ಏಕಕಾಲಕ್ಕೆ ಪ್ರತಿ ವಿಧಾನಸಭೆ ಕ್ಷೇತ್ರದ ಮತಗಟ್ಟೆ ಹಿನ್ನೆಲೆಯಲ್ಲಿ ಮತ ಎಣಿಕೆ ನಡೆಯಲಿದೆ. ಅನಂತರ ಪ್ರತಿ ಮತಗಟ್ಟೆಯ ಫಲಿತಾಂಶ 17 ಸಿ ಫಾರಂನಲ್ಲಿ ಮಾಹಿತಿ ರೂಪದಲ್ಲಿ ಕೌಂಟಿಂಗ್‌ ಏಜೆಂಟರ ಸಮಕ್ಷದಲ್ಲಿ ಮತಗಣನೆ ಸಿಬಂದಿ ಹೋಲಿಸಿ ನೋಡುವರು. ಆಯಾ ಪೋಲಿಂಗ್‌ ಸ್ಟೇಷನ್‌ ಕುರಿತು ಚುನಾವಣೆ ಅಧಿಕಾರಿ ನೀಡಿರುವ ಮಾಹಿತಿಗಳು 17 ಸಿ ಫಾರಂನ ಮೊದಲ ಭಾಗದಲ್ಲಿ ಇರುವುದು. ಪೋಲಿಂಗ್‌ ಸ್ಟೇಷನ್‌ನ ಹೆಸರು, ನಂಬ್ರ, ಬಳಸಿದ ಮೆಷಿನ್‌ಗಳು, ಒಟ್ಟು ಮತದಾರರು, ಮತಯಂತ್ರದಲ್ಲಿ ದಾಖಲಾದ ಮತಗಳು, ಪೋಲಿಂಗ್‌ ಸ್ಟೇಷನ್‌ನಲ್ಲಿ ಬಳಸಲಾದ ಟೆಂಡರ್ಡ್‌ ಬ್ಯಾಲೆಟ್‌ ಪೇಪರ್‌ಗಳು, ಟೆಸ್ಟ್‌ ವೋಟುಗಳ ಸಂಖ್ಯೆ ಇತ್ಯಾದಿ ಮೂಲಭೂತ ಮಾಹಿತಿಗಳು 17 ಸಿ ಫಾರಂನ ಮೊದಲ ಭಾಗದಲ್ಲಿರುವುದು.

ಎರಡನೇ ಬಾಗದಲ್ಲಿ ಮತ ಗಣನೆ ಕೇಂದ್ರದ ಕೌಂಟಿಂಗ್‌ ಸೂಪರ್‌ ವೈಸರ್‌ ನೋಟ್ಟ ಸಹಿತ ಪ್ರತಿ ಅಭ್ಯರ್ಥಿಗೆ ಲಭಿಸಿದ ಒಟ್ಟು ಮತಗಳನ್ನು ದಾಖಲಿಸುವರು. ಈ ಫಲಿತಾಂಶಕ್ಕೆ ಕೌಂಟಿಂಗ್‌ ಏಜೆಂಟರ ಸಮಕ್ಷಮದಲ್ಲಿ ಕೌಂಟಿಂಗ್‌ ಸೂಪರ್‌ವೈಸರ್‌ ಸಹಿ ಮಾಡಲಿದ್ದಾರೆ. ನಂತರ ಪ್ರತಿ ಮತಗಟ್ಟೆಯ ಫಲಿತಾಂಶ ಗಣನೆ ಮಾಡಿ ಆಯಾ ಸಮಯದಲ್ಲಿ ಸ್ಕಿÅàನ್‌ ನಲ್ಲಿ ಪ್ರಕಟಿಸಲಾಗುವುದು. ಮತಗಣನೆ ಕೇಂದ್ರದಲ್ಲಿ ಉಪಚುನಾವಣೆ ಅಧಿಕಾರಿ, ನಿರೀಕ್ಷಕರು, ಮೈಕ್ರೋ ನಿರೀಕ್ಷಕರು, ಸುರಕ್ಷೆ ಹೊಣೆಯ ಹಿರಿಯ ಅಧಿಕಾರಿಗಳು ಮೊದಲಾದವರು ಇರುವರು.

Advertisement
Advertisement

Udayavani is now on Telegram. Click here to join our channel and stay updated with the latest news.

Next