ಬಳ್ಳಾರಿ: ನಾಟಕ ಕೇವಲ ಮನೋರಂಜನೆಗಲ್ಲ, ಮನೋವಿಕಾಸಕ್ಕೆ ಎಂದು ಸದಾ ಪ್ರತಿಪಾದಿಸುವ ರಂಗತೋರಣ ಸಂಸ್ಥೆ ಆಶ್ರಯದಲ್ಲಿ ನಗರದ ರಾಜ್ ಕುಮಾರ್ ರಸ್ತೆ ಸಾಂಸ್ಕೃತಿಕ ಸಮುಚ್ಛಯ ಬಯಲು ರಂಗಮಂದಿರದಲ್ಲಿ ಡಿ. 1, 2ಹಾಗೂ 3ರಂದು ಮೂರು ದಿನಗಳ ಕಾಲ ರಂಗತೋರಣ-ನೀನಾಸಂ ನಾಟಕಗಳ ಉತ್ಸವವನ್ನು ಹಮ್ಮಿಕೊಳ್ಳಲಾಗಿದೆ ಎಂದು ರಂಗತೋರಣ ಕಾರ್ಯದರ್ಶಿ ಪ್ರಭುದೇವ ಕಪ್ಪಗಲ್ಲು ಹೇಳಿದರು.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಂಗತೋರಣ, ರಮೇಶ ಟ್ರಸ್ಟ್ ಹಾಗೂ ಜೋಳದರಾಶಿ ದೊಡ್ಡನಗೌಡ ಪ್ರತಿಷ್ಠಾನದ ಆಶ್ರಯದಲ್ಲಿ 3ದಿನಗಳ ಕಾಲ ಪ್ರತಿ ದಿನ ಸಂಜೆ 6.15ಕ್ಕೆ ನಾಟಕಗಳ ಉತ್ಸವವನ್ನು ಆಯೋಜಿಸಲಾಗಿದೆ. ವಿಜಯನಗರ ಸಾಮ್ರಾಜ್ಯದ ಕೊನೆ ದಿನಗಳ ಅಳಿಯ ರಾಮರಾಯನ ಕಾಲದ ರಾಜಕೀಯ ಚಿತ್ರಣವಿರುವ ಈ ನಾಟಕವನ್ನುಇತ್ತೀಚೆಗೆ ನಮ್ಮನ್ನಗಲಿದ ಜ್ಞಾನಪೀಠ ಪುರಸ್ಕೃತ ಗಿರೀಶ್ ಕಾರ್ನಾಡ್ ಅವರು ರಚಿಸಿದ್ದು, ಇದು ಅವರ ಕೊನೆಯ ಕೃತಿಯಾಗಿದೆ.
ವಿಜಯಪುರದ ಸುಲ್ತಾನ್‌ನನ್ನು ತನ್ನ ಬಂಧುವಿಗಿಂತಹೆಚ್ಚಾಗಿ ಸಾಕಿದ ವಿಜಯನಗರದ ಅರಸನನ್ನು ನಿರ್ದಾಕ್ಷಿಣ್ಯವಾಗಿ ಸಂಹರಿಸಬೇಕಾದ ಹಾಗೂ ಕಾಳಗದಿಂದಇತಿಹಾಸದಲ್ಲಿ ರಕ್ಕಸ ತಂಗಡಗಿ ಯುದ್ದವೆಂದೇ ದಾಖಲಾಗಿರುವ ಕಥೆಯುಳ್ಳ ಈ ನಾಟಕವನ್ನು ನೀನಾಸಂ ತುಂಬ ಕಲಾತ್ಮಕವಾಗಿ ರಂಗದ ಮೇಲೆತಂದಿದೆ. ನೀನಾಸಂ ರಂಗ ತರಬೇತಿ ಕೇಂದ್ರದ ಪ್ರಾಚಾರ್ಯ ಡಾ ಬಿ.ಆರ್.ವೆಂಕಟರಮಣ ಐತಾಳ್ ನಿರ್ದೇಶಿಸಿದ್ದಾರೆ ಎಂದರು.
ಡಿ. 1ರಂದು ರಾಕ್ಷಸ -ತಂಗಡಿ ನಾಟಕೋತ್ಸವಕ್ಕೆ ವಿಮ್ಸ್ ನಿರ್ದೇಶಕ ಡಾ| ಬಿ. ದೇವಾನಂದ್ ಚಾಲನೆ ನೀಡಲಿದ್ದಾರೆ. ಜೋಳದರಾಶಿ ದೊಡ್ಡನಗೌಡ ಪ್ರತಿಷ್ಠಾನದ ಗೌರವಾಧ್ಯಕ್ಷ ಬಿ. ಸಿದ್ಧನಗೌಡ ಹಾಗೂ ವಿಎಸ್‌ಕೆ ವಿವಿ ಪ್ರದರ್ಶನ ಕಲಾ ವಿಭಾಗ ಮುಖ್ಯಸ್ಥಪ್ರೊ. ಶಾಂತಾ ನಾಯಕ್ ಅತಿಥಿಗಳಾಗಿ ಆಗಮಿಸಲಿದ್ದಾರೆ. ಡಿ. 2ರಂದು ಕರ್ಣ ಸಾಂಗತ್ಯ ನಾಟಕೋತ್ಸವಕ್ಕೆಸುಕೋ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕ ಪರಿಮಳಾಚಾರ್ಯ ಚಾಲನೆ ನೀಡಲಿದ್ದಾರೆ. ಡಿ.3ರಂದು ಪಿಸುಣಾರಿ ಪ್ರೇಮ ಪ್ರಕರಣ ನಾಟಕೋತ್ಸವ ಸಮಾರಂಭ ನಡೆಯಲಿದೆ. ರಂಗತೋರಣ ಸಂಸ್ಥೆಯ ಸ್ವಂತ ನಿರ್ಮಾಣದ ಈನಾಟಕ ಪ್ರದರ್ಶನಗೊಳ್ಳಲಿದೆ. ಈ ನಾಟಕವನ್ನು ನಟ, ನಾಟಕಕಾರ, ನಿರ್ದೇಶಕ ರಾಜೇಂದ್ರ ಕಾರಂತ್ ರಚಿಸಿದ್ದಾರೆ.
ನೀನಾಸಂ ಪದವೀಧರ ಇತ್ತೀಚಿನ ಕುರುಕ್ಷೇತ್ರ ತಿರುಗಾಟದ ನಟ ನಮ್ಮ ಜಿಲ್ಲೆಯಸಿರಿಗೇರಿ ಮಂಜುನಾಥ್ ಅವರು ನಿರ್ದೇಶಿಸಿದ್ದಾರೆ.ಸಮಾರೋಪ ಸಮಾರಂಭದಲ್ಲಿ ವಿಎಸ್‌ಕೆ ವಿ.ವಿ. ಕುಲಸಚಿವೆ ಡಾ| ಬಿ.ಕೆ. ತುಳಸೀಮಾಲ, ರಂಗಾಯಣದ ರಂಗ ಸಮಾಜ ಸದಸ್ಯರಾದ ಶಿವೇಶ್ವರಗೌಡ,ಕಲ್ಲುಕಂಭ, ರಮೇಶ ಟ್ರಸ್ಟ್‌ನ ಅಧ್ಯಕ್ಷಜೋಳದರಾಶಿ ಪೊಂಪನಗೌಡ ಅವರು ಸೇರಿದಂತೆ ವಿವಿಧ ಗಣ್ಯರು ಭಾಗವಹಿಸಲಿದ್ದಾರೆ ಎಂದರು. ಈ ಸಂದರ್ಭದಲ್ಲಿ ರಾಮೇಶ ಟ್ರಸ್ಟ್‌ನ ಅಧ್ಯಕ್ಷ ಜೋಳದರಾಶಿ ಪೊಂಪನಗೌಡ ಇದ್ದರು.