Advertisement

ದಸರಾ ಬೊಂಬೆಗಳ ಆಕರ್ಷಕ ಪ್ರದರ್ಶನ

03:28 PM Sep 21, 2017 | |

ಹಾಸನ: ಶರನ್ನವರಾತ್ರಿಯಲ್ಲಿ ಬೊಂಬೆಗಳ ಪೂಜೆಗೆ ಆದ್ಯತೆ. ಅಂತೆಯೇ ಅರಸೀಕೆರೆ ಪಟ್ಟಣ, ಮಾರುತಿ ನಗರದ ನಿವಾಸಿ ನಿವೃತ್ತ ಶಿಕ್ಷಕ ಕೆ.ಆರ್‌.ಆನಂದ್‌ ಅವರು ತಮ್ಮ ಮನೆಯಲ್ಲಿ ದಸರಾ ಬೊಂಬೆಗಳನ್ನು ಜೋಡಿಸಿ ಗಮನ ಸೆಳೆದಿದ್ದಾರೆ.

Advertisement

ರಾಜಾ ಪ್ರತ್ಯಕ್ಷ ದೇವತಾ ಎಂಬ ಮಾತಿ ನಂತೆ ಚಂದದ ಪಟ್ಟದ ಬೊಂಬೆಗೆ ರಾಜ ರಾಣಿಯರಂತೆ ಅಲಂಕರಿಸಿ ಅಗ್ರಸ್ಥಾನ ದಲ್ಲಿ ಮಂಟಪ ನಿರ್ಮಿಸಿ ಅದರಲ್ಲಿ ಪ್ರತಿಷ್ಟಾಪಿಸಿದ್ದಾರೆ. ನಂತರದ ಸಾಲುಗಳಲ್ಲಿ, ದಶಾವತಾರ, ನವದುರ್ಗೆಯರು, ಅಷ್ಟಲಕ್ಷ್ಮೀ, ಶ್ರೀಕೃಷ್ಣಾವತಾರ, ಕಾಳಿಂಗ ಮರ್ದನ, ಶ್ರೀರಾಮ ಪಟ್ಟಾಭಿಷೇಕ, ದಸರೆಯ ಪ್ರಮುಖ ದೇವತೆಗಳಾದ ದುರ್ಗಿ ಹಾಗೂ ಶಾರದೆಯ ವಿಗ್ರಹ, ಪುಸ್ತಕಗಳು, ವಿವಿಧ ದೇವತೆಗಳ ವಿಗ್ರಹ ಗಳು, ವಿವಾಹ ಮಹೋತ್ಸವ, ವಿವಿಧ ವಾದ್ಯಗಳು, ಪ್ರಾಣಿ ಪಕ್ಷಿಗಳು ಮತ್ತಿತರ ಬೊಂಬೆಗಳನ್ನು ಆಕರ್ಷಕವಾಗಿ ಜೋಡಿಸಿದ್ದಾರೆ.

ಕಳೆದ ಕೆಲವು ವರ್ಷಗಳಿಂದ ವಿಶ್ವ ದಾದ್ಯಂತ ಯೋಗ ದಿನವನ್ನು ಆಚರಿಸುತ್ತಿರುವ ಹಿನ್ನೆಲೆಯಲ್ಲಿ, ಯೋಗ
ದಿನದಂದು ಜರುಗುವ ಸೂರ್ಯ ನಮಸ್ಕಾರವನ್ನು ಬೊಂಬೆಗಳಲ್ಲಿ ನಿರ್ಮಿಸಿರುವುದು ಎಲ್ಲರ ಗಮನ ಸೆಳೆಯುತ್ತದೆ.

ಆನಂದ್‌ ಸ್ವತಃ ಥರ್ಮೋಕೋಲ್‌ ನಿಂದ ನಿರ್ಮಿಸಿರುವ ಗಣೇಶನ ವಿಗ್ರಹ, ಈಶ್ವರ, ಅಂಬಾರಿ ಹೊತ್ತ ಆನೆ, ಅರ್ಜುನ
ನಿಗೆ ಗೀತೋಪದೇಶ ಮಾಡುತ್ತಿರುವ ಕೃಷ್ಣ ಮೊದಲಾದ ಕಲಾಕೃತಿಗಳು ಆಕರ್ಷಕವಾಗಿವೆ. ಕಳೆದ ನಾಲ್ಕು ದಶಕ
ಗಳಿಂದ ಪ್ರತಿವರ್ಷ ನವರಾತ್ರಿಯ ಪಾಡ್ಯದ ದಿನದಿಂದಲೇ ಗೊಂಬೆಗಳನ್ನು ಜೋಡಿಸಿ ಪೂಜಿಸುತ್ತಾ ಬಂದಿದ್ದು, ನವರಾತ್ರಿ ಮುಗಿಯುವ ವರೆಗೂ ಪ್ರತಿ ದಿನ ಸಂಜೆ ಗೊಂಬೆಗಳಿಗೆ ಪೂಜಿಸುತ್ತಾರೆ.

ಹೈಟೆಕ್‌ ಸಂಸ್ಕೃತಿಯಲ್ಲಿ ಬೆಳೆಯುತ್ತಿರುವ ಇಂದಿನ ಪೀಳಿಗೆಯ ಮಕ್ಕಳಿಗೆ ನಮ್ಮ ಸಂಸ್ಕೃತಿ, ಆಚಾರ, ವಿಚಾರ ಮತ್ತು
ಸಂಪ್ರದಾಯವನ್ನು ಪರಿಚಯಿಸಬೇಕಾದ ಇಂದಿನ ಸಂದರ್ಭದಲ್ಲಿ ಪ್ರತಿ ಮನೆಗಳಲ್ಲಿ ಈ ರೀತಿಯ ಆಚರಣೆಗಳನ್ನು
ನಡೆಸುವುದರಿಂದ, ಸನಾತನ ಸಂಪ್ರದಾಯಗಳನ್ನು ಮುಂದಿನ ಪೀಳಿಗೆಗೆ ತಿಳಿಸಬಹುದು ಎಂದು ಆನಂದ್‌ ಪತ್ನಿ
ಶಕುಂತಕಲಾ ಅಭಿಪ್ರಾಯಪಟ್ಟರು.

Advertisement
Advertisement

Udayavani is now on Telegram. Click here to join our channel and stay updated with the latest news.

Next