Advertisement

ಚುನಾವಣಾ ವೆಚ್ಚ: BJP ನಾಯಕನಿಗೆ ಕುರಿಗಳನ್ನು ದಾನ ಮಾಡಿದ ಅಭಿಮಾನಿ

09:11 PM Apr 09, 2023 | Team Udayavani |

ಕುಷ್ಟಗಿ: ತಾಲೂಕಿನ ಕಳಮಳ್ಳಿ ಗ್ರಾಮದಲ್ಲಿ ಬಿಜೆಪಿ ಸಂಭಾವ್ಯ ಅಭ್ಯರ್ಥಿ ದೊಡ್ಡನಗೌಡ ಪಾಟೀಲ ಅವರು ಪ್ರಚಾರದ ಸಂದರ್ಭದಲ್ಲಿ ಭೀಮಣ್ಣ ಬೇವಿನಾಳ ಅವರು ಎರಡು ಕುರಿಗಳನ್ನು ಚುನಾವಣಾ ವೆಚ್ಚಕ್ಕಾಗಿ ದಾನ ಮಾಡಿದರು.

Advertisement

ಅಭಿಮಾನಿ ಭೀಮಣ್ಣ ಬೇವಿನಾಳ ಅವರಿಂದ ಎರಡು ಕುರಿಗಳನ್ನು ಸ್ವೀಕರಿಸಿದ ದೊಡ್ಡನಗೌಡ ಪಾಟೀಲ ಅವರು, ಚುನಾವಣಾ ವೆಚ್ಚಕ್ಕಾಗಿ ಕುರಿಗಳನ್ನು ನೀಡಿರುವುದು ನನ್ನ ಆತ್ಮಸ್ಥೈರ್ಯ ವೃದ್ದಿಸಿದೆ. ಭೀಮಣ್ಣ ಬೇವಿನಾಳ ಅವರಿಂದ ಕುರಿಗಳನ್ನು ಚುನಾವಣಾ ವೆಚ್ಚಕ್ಕಾಗಿ ಎರಡು ಕುರಿಗಳನ್ನು ಸಂತೋಷದಿಂದ ಸ್ವೀಕರಿಸಿದ್ದೇನೆ. ಸ್ವೀಕರಿಸುವಾಗ ಅಶ್ಚರಿ, ರೋಮಾಂಚನಾ ಎರಡೂ ಒಮ್ಮೆಲೆ ಆದವು. ನನಗೆ ಕ್ಷೇತ್ರದ ಜನರು ಏನೆಲ್ಲಾ ಪ್ರೀತಿ ತೋರಿಸಲು ಮುಂದಾಗಿದ್ದು ಅವರ ಪ್ರೀತಿಗೆ ಋಣಿಯಾಗಿದ್ದು, ರೈತನ ಕೊಡುಗೆಯಿಂದ ಗೆಲುವಿನ ವಿಶ್ವಾಸ ಮೂಡಿಸಿದೆ ಎಂದರು.

ಈ ವೇಳೆ ಮಾಜಿ ಜಿ.ಪಂ.ಸದಸ್ಯ ಕೆ.ಮಹೇಶ, ಅಶೋಕ ಬಳೂಟಗಿ, ನಾಗರಾಜ ನಂದಾಪೂರ ಮತ್ತೀತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next