Advertisement

ಸುಳ್ಳು ಬಿಲ್ಲು ಅಪವಾದ ದೂರವಾಗಿಸುವುದೇ ಗುರಿ

12:50 AM Feb 05, 2019 | |

ಬೆಂಗಳೂರು: ಸಣ್ಣ ನೀರಾವರಿ ಇಲಾಖೆ ಸುಳ್ಳು ಬಿಲ್ಲು ಬರೆಯುವ ಇಲಾಖೆ ಎಂಬ ಹಣೆಪಟ್ಟಿಯಿಂದ ಮುಕ್ತಗೊಳಿಸುವುದು ನನ್ನ ಗುರಿ ಎಂದು ಸಣ್ಣ ನೀರಾವರಿ ಸಚಿವ ಸಿ.ಎಸ್‌.ಪುಟ್ಟರಾಜು ತಿಳಿಸಿದ್ದಾರೆ.

Advertisement

ಸಣ್ಣ ನೀರಾವರಿ ಗಣತಿ ಮತ್ತು ನೀರಿನಾಸರೆಗಳ ಕುರಿತ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸಣ್ಣ ನೀರಾವರಿ ಇಲಾಖೆ ಎಂದರೆ ಸುಳ್ಳು ಬಿಲ್ಲು ತಯಾರಿಸುವ ಇಲಾಖೆ ಎಂಬ ಆರೋಪವಿದೆ. ಇಂತಹ ಅಪವಾದ ತೊಡೆದು ಹಾಕಲು ನಾನೂ ಸೇರಿ ಎಲ್ಲ ಅಧಿಕಾರಿಗಳು ಬದ್ಧತೆಯಿಂದ ಕೆಲಸ ಮಾಡಬೇಕು ಎಂದು ಹೇಳಿದರು.

ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆಯ ಮಹತ್ವವನ್ನು ಮತ್ತಷ್ಟು ಹೆಚ್ಚಿಸುವ ನಿಟ್ಟಿನಲ್ಲಿ ನೀರಿನಾಸರೆಗಳ ಗಣತಿ ಕಾರ್ಯಕ್ರಮ ಜವಾಬ್ದಾರಿಯುತವಾಗಿ ನಡೆಸಬೇಕು ಎಂದು ತಿಳಿಸಿದರು. ಗಣತಿ ಜವಾಬ್ದಾರಿಯುತವಾಗಿರಬೇಕು. ಇದರಿಂದ ಮುಂದಿನ ದಿನಗಳಲ್ಲಿ ಸಣ್ಣ ನೀರಾವರಿ ಇಲಾಖೆ ಪ್ರತಿ ಗ್ರಾಮದಲ್ಲಿ ಮಹತ್ವದ ಯೋಜನೆ ಹಮ್ಮಿಕೊಳ್ಳಲು ಸಹಕಾರಿಯಾಗಲಿದೆ. ಗಣತಿಯಿಂದ ರಾಜ್ಯದಲ್ಲಿ ಅಂತರ್ಜಲ ಅಭಿವೃದ್ಧಿಗೆ ಪೂರಕವಾದ ಮಾಹಿತಿ ಇಲಾಖೆಗೆ ಲಭ್ಯವಾಗುವಂತಿರಬೇಕು. ಚುನಾವಣೆ ಕಾರಣ ಹೇಳಿ ಯಾವುದೇ ಕಾರಣಕ್ಕೂ ಗಣತಿ ಕಾರ್ಯ ನಿಧಾನಗೊಳಿಸುವ ಕಾರ್ಯ ಆಗಬಾರದು ಎಂದು ಕಿವಿಮಾತು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next