Advertisement

1000 ಜನರಿಗೊಂದು ಕುಡಿವ ನೀರಿನ ಘಟಕ

12:38 PM Jun 18, 2017 | |

ದಾವಣಗೆರೆ: ಸರ್ಕಾರ ಪ್ರತಿ 1000 ಜನರಿಗೆ ಒಂದರಂತೆ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸುವ ಉದ್ದೇಶ ಹೊಂದಿದೆ ಎಂದು ನೀರು ಮತ್ತು ನೈರ್ಮಲ್ಯ ಸಮಿತಿ ಅಧ್ಯಕ್ಷ ಎಸ್‌.ಜಿ. ನಂಜಯ್ಯನಮಠ ಹೇಳಿದ್ದಾರೆ. ಶನಿವಾರ ಜಿಲ್ಲಾ ಪಂಚಾಯತ್‌ ಮಿನಿ ಸಭಾಂಗಣದಲ್ಲಿ ಸಮಿತಿ ಪ್ರಗತಿ ಪರಿಶೀಲನಾ ಸಭೆ ಅಧ್ಯಕ್ಷತೆ ವಹಿಸಿ, ಮಾತನಾಡಿದರು.

Advertisement

ಅಶುದ್ಧ ನೀರು ಸೇವನೆಯಿಂದ ಜನರ ಆರೋಗ್ಯ ಹಾಳಾಗುತ್ತಿದೆ. ಇದನ್ನು ತಡೆಯಲು ರಾಜ್ಯದ ಪ್ರತಿ 1000 ಜನರಿಗೆ ಒಂದರಂತೆ ಶುದ್ಧ ಕುಡಿಯುವ ನೀರಿನ ಘಟಕ ಆರಂಭಿಸಲು ಸರ್ಕಾರ ನಿರ್ಧರಿಸಿದೆ. ಈಗಾಗಲೇ ರಾಜ್ಯದಾದ್ಯಂತ 11 ಸಾವಿರ ಶುದ್ಧ ಕುಡಿಯುವ ನೀರಿನ ಘಟಕ ಮಂಜೂರು ಮಾಡಿದ್ದು 9 ಸಾವಿರ ಘಟಕಗಳ ಸ್ಥಾಪಿಸಲಾಗಿದೆ.

ಸದ್ಯ 8,674 ಘಟಕಗಳು ಕೆಲಸ ಮಾಡುತ್ತಿವೆ. ಇನ್ನೂ 2500 ಘಟಕ ಆರಂಭಿಸಲು ಸರ್ಕಾರ ಯೋಚಿಸಿದೆ. ದಾವಣಗೆರೆ ಜಿಲ್ಲೆಯಲ್ಲಿ 612 ಘಟಕ ಸ್ಥಾಪಿಸಲಾಗಿದೆ. ಪಂಚಾಯತಿಗಳ ಗುಣಮಟ್ಟದ ಕಾರ್ಯಕ್ರಮಗಳಿಗಾಗಿ ರಾಷ್ಟ್ರಮಟ್ಟದಲ್ಲಿ ನಮ್ಮ ರಾಜ್ಯ ಪ್ರಥಮ ಬಹುಮಾನ ಪಡೆದಿದೆ ಎಂದರು.

ಕೆಆರ್‌ಐಡಿಎಲ್‌ ಅಭಿಯಂತರ ಚಂದ್ರಶೇಖರ್‌ ಮಾತನಾಡಿ, ಕೆಆರ್‌ ಐಡಿಎಲ್‌ಗೆ 412 ಶುದ್ಧ ಕುಡಿಯುವ ನೀರಿನ ಘಟಕ ಮಂಜೂರಾಗಿವೆ. ಸಹಕಾರ ಸಂಘದಿಂದ ಮಂಜೂರಾದ 14 ಘಟಕಗಳಿಗೆ ಕೇವಲ 2.5 ಲಕ್ಷ ರೂ. ಬಿಡುಗಡೆ ಆಗಿರುವುದರಿಂದ ಬೇಸ್‌ಮೆಂಟ್‌ ಮಾತ್ರ ಹಾಕಲಾಗಿದೆ. ಆದಷ್ಟು ಬೇಗ ಉಳಿದ ಮೊತ್ತ ಬಿಡುಗಡೆ ಆಗುವಂತೆ ಕ್ರಮ ವಹಿಸುವಂತೆ ಕೋರಿದರು.

ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆಯ ಸಹಾಯಕ ಅಭಿಯಂತರ ಶಿವಕುಮಾರ್‌ ಮಾತನಾಡಿ, ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಡಿ ಒಟ್ಟು 44 ಯೋಜನೆಗಳು ಅನುಮೋದಿಸಲ್ಪಟ್ಟಿದ್ದು, 22 ಯೋಜನೆ ಪೂರ್ಣಗೊಳಿಸಲಾಗಿದೆ. 3 ಮುಕ್ತಾಯ ಹಂತದಲ್ಲಿ 7 ಪ್ರಗತಿಯಲ್ಲಿವೆ. 12 ಮಂಜೂರಾತಿ ಹಂತದಲ್ಲಿವೆ.

Advertisement

44 ಯೋಜನೆಗಳಿಂದ 965 ಜನವಸತಿಗಳು ಪ್ರಯೋಜನ ಪಡೆಯಲಿವೆ ಎಂದು ತಿಳಿಸಿದರು. ಜಿಲ್ಲೆಯಲ್ಲಿ 233 ಗ್ರಾಪಂಗಳಿದ್ದು, ಸತತ 3  ವರ್ಷಗಳ ಬರದ ಕಾರಣ 66 ಹಳ್ಳಿಗಳಿಗೆ ಪ್ರತಿದಿನ 272 ಟ್ಯಾಂಕರ್‌ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ. ಖಾಸಗಿ ಬೋರ್‌ವೆಲ್‌ಗೆ ಮಾಹೆಯಾನ 20 ಸಾವಿರ ರೂ. ಬಾಡಿಗೆಯಂತೆ ಒಟ್ಟು 79 ಖಾಸಗಿ ಬೋರ್‌ವೆಲ್‌ ಬಳಕೆ ಮಾಡಿಕೊಳ್ಳಲಾಗುತ್ತಿದೆ. 

ಇವುಗಳಿಂದಲೇ 60 ಹಳ್ಳಿಗಳಿಗೆ ನೀರು ಸರಬರಾಜು ಮಾಡಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದರು. ಜಿಪಂ ಅಧ್ಯಕ್ಷೆ ಉಮಾ ರಮೇಶ್‌, ಸಮಿತಿಯ ಸದಸ್ಯರಾದ ಜನಾರ್ಧನ್‌, ತಿಪ್ಪೇಸ್ವಾಮಿ(ನೇತಾಜಿ), ಜಿಪಂ ಉಪ ಕಾರ್ಯದರ್ಶಿ ಷಡಾಕ್ಷರಪ್ಪ, ಯೋಜನ ನಿರ್ದೇಶಕ ರಂಗಸ್ವಾಮಿ ಇವಿವಿಧ ಇಲಾಖೆ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.  

Advertisement

Udayavani is now on Telegram. Click here to join our channel and stay updated with the latest news.

Next