Advertisement

Goa; ಒಂದು ಡಜನ್‌ ದೇಸಿ ಮಂಕುರಾಡ್‌ ಮಾವಿನ ಬೆಲೆ 7000 ರೂ.!

11:58 PM Feb 05, 2024 | Team Udayavani |

ಪಣಜಿ: ಗೋವಾದ ದೇಸಿ ಮಾವಿನಹಣ್ಣಿನ ತಳಿಯಾದ ಮಂಕುರಾಡ್‌ ಮಾವಿನಹಣ್ಣುಗಳು ಪಣಜಿ ಮಾರುಕಟ್ಟೆಯಲ್ಲಿ ದಾಖಲೆಯ ಬೆಲೆಗೆ ಮಾರಾಟವಾಗುತ್ತಿದೆ. ಒಂದು ಡಜನ್‌ ಮಂಕುರಾಡ್‌ ಮಾವಿನಹಣ್ಣಿನ ಬೆಲೆ 7,000 ರೂ. ಇದೆ. ಕಳೆದ ವರ್ಷ ಇದೇ ಋತುವಿನಲ್ಲಿ ಡಜನ್‌ಗೆ 6 ಸಾವಿರ ರೂ. ವರೆಗೆ ಮಾರಾಟವಾಗಿತ್ತು. ಸಾಮಾನ್ಯವಾಗಿ ಬೇಸಿಗೆ ಆರಂಭದಲ್ಲಿ ಈ ತಳಿಯ ಮಾವಿನಹಣ್ಣು ಮಾರುಕಟ್ಟೆಗೆ ಬರುತ್ತಿತ್ತು. ಆದರೆ ಈ ವರ್ಷ ಕೊಂಚ ಬೇಗನೇ ಬಂದಿದೆ. “ಸೀಮಿತ ಪ್ರಮಾಣದಲ್ಲಿ ಚಳಿಗಾಲದಲ್ಲೇ ಮಂಕುರಾಡ್‌ ಮಾವಿನಹಣ್ಣುಗಳು ಮಾರುಕಟ್ಟೆಗೆ ಬಂದಿರುವುದರಿಂದ ಬೇಡಿಕೆ ಹೆಚ್ಚಾಗಿದೆ ಎಂದು ವ್ಯಾಪಾರಿಗಳು ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next