ಹೊಸದಿಲ್ಲಿ : ಬಲೂನ್‌ಗಳಲ್ಲಿ ವೀರ್ಯ ತುಂಬುವುದು ವೈದ್ಯಕೀಯವಾಗಿ ಅಸಾಧ್ಯ ಎಂದು @Kaalatheetham ಟ್ವಿಟರ್ ಹ್ಯಾಂಡಲ್‌ನಡಿ “ದಿ ಗುಡ್ ಡಾಕ್ಟರ್’ ಓರ್ವರು ಮಾಡಿರುವ ಸರಣಿ ಟ್ವೀಟ್ ಈಗ ವೈರಲ್ ಆಗಿದೆ.
ಸರ್ಜಿಕಲ್ ಕ್ಯಾಪ್ ತೊಟ್ಟ ಪ್ರೊಫೈಲ್ ಫೋಟೋ ಇರುವ ಈ ಟ್ವೀಟಿಗನ ವೈಯಕ್ತಿಕ ಮಾಹಿತಿ ಪ್ರಕಾರ ಇವರು ಒಬ್ಬ ವೈದ್ಯರಾಗಿದ್ದು ಬಹುತೇಕ ಕರ್ನಾಟಕದವರೆಂದು ತಿಳಿಯಲಾಗಿದೆ.
ಹೋಳಿ ಹಬ್ಬಕ್ಕೆ ಎರಡು ದಿನಗಳಿರುವಾಗ ದಿಲ್ಲಿ ವಿವಿ ಮತ್ತು ದಿಲ್ಲಿಯ ಇತರ ಕಾಲೇಜುಗಳ ವಿದ್ಯಾರ್ಥಿನಿಗಳ ಮೇಲೆ ವೀರ್ಯ ತುಂಬಿದ ಬಲೂನ್ ಎಸೆಯಲಾತೆಂಬ ವಿಷಯ ಭಾರೀ ಕೋಪಾಟೋಪದ ಪ್ರತಿಭಟನೆಗೆ ಕಾರಣವಾಗಿತ್ತು.
ದಿಲ್ಲಿಯ ಪೊಲೀಸ್ ಪ್ರಧಾನ ಕಾರ್ಯಲಯದ ಮುಂದೆ ದಿಲ್ಲಿ ವಿವಿ ಮತ್ತು ಇತರ ಕಾಲೇಜುಗಳ ವಿದ್ಯಾರ್ಥಿನಿಯರು ಹಾಗೂ ಆವರ ಶಿಕ್ಷಕರು ಪ್ರತಿಭಟನೆ ನಡೆಸಿ ಹುಡುಗಿಯರಿಗೆ ಕಾಲೇಜಿನೊಳಗೆ ಮತ್ತು ಹೊರಗೆ ರಕ್ಷಣೆ ನೀಡುವಂತೆ ಆಗ್ರಹಿಸಿದ್ದರು. ದಿಲ್ಲಿ ಮಹಿಳಾ ಆಯೋಗ ಕೂಡ ಈ ಪ್ರತಿಭಟನೆಗೆ ಧ್ವನಿಗೂಡಿಸಿತ್ತು.
Related Articles
ಟ್ವಿಟರ್‌ನಲ್ಲಿ “ಗುಡ್ ಡಾಕ್ಟರ್’ ‘ವೀರ್ಯ ಬಲೂನ್’ ಕುರಿತಾಗಿ ಹೀಗೆ ಬರೆದಿದ್ದಾರೆ:
“ವೀರ್ಯವನ್ನು ಬಲೂನ್‌ನಲ್ಲಿ ತುಂಬುವುದು ವೈದ್ಯಕೀಯವಾಗಿ ಅಸಾಧ್ಯ. ವೀರ್ಯವು ವಾತಾವರಣಕ್ಕೆ ಮುಕ್ತವಾದಾಗ ಅದು ಕೇವಲ ಐದೇ ನಿಮಿಷಗಳಲ್ಲಿ ಒಣಗಿ ಗಟ್ಟಿಯಾಗುತ್ತದೆ. ಆದುದರಿಂದಲೇ ವೀರ್ಯ ಬ್ಯಾಂಕುಗಳು ವಿಶೇಷವಾಗಿ ಮಾಡಿದಂತಹ ಟ್ಯೂಬ್‌ಗಳಲ್ಲಿ ವೀರ್ಯವನ್ನು ಸಂಗ್ರಹಿಸುತ್ತವೆ’
“ಸಾಮಾನ್ಯವಾಗಿ ಪ್ರಾಯ ಪ್ರಬುದ್ಧ ವ್ಯಕ್ತಿಯೋರ್ವ ಮೊದಲ ಸಲ ಸ್ಖಲನ ಮಾಡುವಾಗ 5 ಎಂಎಲ್ ವೀರ್ಯವನ್ನು ಹೊರ ಹಾಕುತ್ತಾನೆ. ಅನಂತರದ ಸ್ಖಲನಗಳಲ್ಲಿ ವೀರ್ಯದ ಪ್ರಮಾಣ ಕಡಿಮೆಯಾಗುತ್ತ ಹೋಗುತ್ತದೆ. ಪುರುಷರಲ್ಲಿ ವೀರ್ಯವು ಶಾಂಪೇನ್ ಬಾಟಲ್‌ನ ಹಾಗೆ ತುಂಬಿರುವುದಿಲ್ಲ’
“ಈ ವೈದ್ಯಕೀಯ ನಿಜಾಂಶಗಳನ್ನು ಗಮನಿಸಿದಾಗ ಒಂದು ಬಲೂನ್‌ನಲ್ಲಿ ವೀರ್ಯ ತುಂಬಲು 100 + ಪುರುಷರು (ಅದೇ ಬಲೂನ್‌ನಲ್ಲಿ) ವೀರ್ಯ ಸ್ಖಲನ ಮಾಡಬೇಕಾಗುತ್ತದೆ ! ವೀರ್ಯದ ಬಲೂನ್‌ನಲ್ಲಿ ನೀರು ಅಥವಾ ಬೇರಾವುದೇ ದ್ರಾವಣ ಹಾಕಿದರೆ ವೀರ್ಯವು ನಾಶವಾಗಿ ಹೋಗುತ್ತದೆ. ನೀರಿನಲ್ಲಿ ವೀರ್ಯವು ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳುವುದಿಲ್ಲ’
“ಬಿಟಿಡಬ್ಲ್ಯು ವೀರ್ಯವನ್ನು 0.5-1 ಎಂಎಲ್ ಸ್ಟ್ರಾಗಳಲ್ಲಿ ಸಂಗ್ರಹಿಸಿ ದ್ರವೀಕೃತ ನೈಟ್ರೋಜನ್ ಇರುವ ಟ್ಯಾಂಕ್‌ಗಳಲ್ಲಿ ಸಂಗ್ರಹಿಸಿಡಲಾಗುತ್ತದೆ. ಹಾಗಿರುವಾಗ ವೀರ್ಯ ಮತ್ತು ದ್ರವೀಕೃತ ನೈಟ್ರೋಜನ್ ಅನ್ನು ಬಲೂನ್‌ನಲ್ಲಿ ತುಂಬಿಡುವುದು ಸಾಧ್ಯವಿಲ್ಲ. ವೀರ್ಯ ತುಂಬಿದ ಬಲೂನ್ ಬಗ್ಗೆ ಟ್ಟಿಟರ್‌ನಲ್ಲಿ ಬರೆಯುವ ಮುನ್ನ ನೀವು ಸ್ವಲ್ಪಮಟ್ಟಿನ ವೈದ್ಯಕೀಯ ಹಿನ್ನೆಲೆಯನ್ನು ತಿಳಿಯುವ ಪ್ರಯತ್ನ ಮಾಡಬೇಕು’.