Advertisement

ಪುನರ್‌ ಹಾರಾಟಕ್ಕೆ ಗೊಂದಲದ ಶುರು ; ಒಟ್ಟು 630 ವಿಮಾನ ಯಾನ ರದ್ದು

07:40 AM May 26, 2020 | mahesh |

ಹೊಸದಿಲ್ಲಿ: ಕೋವಿಡ್ ಹಿನ್ನೆಲೆಯಲ್ಲಿ ಸೋಮವಾರ ಎರಡು ತಿಂಗಳ ಬಳಿಕ ವಿಮಾನ ಯಾನ ಶುರುವಾಗಿದೆ. ಆದರೆ ಆಂಧ್ರಪ್ರದೇಶ ಮತ್ತು ಪಶ್ಚಿಮ ಬಂಗಾಳ ಸರಕಾರಗಳ ಅಸಮ್ಮತಿ ನಡು ವೆಯೇ ಸಂಚಾರ ಶುರುವಾಗಿದೆ. ಹಾಗೂ ಹೀಗೂ ಮತ್ತೆ ಶುರುವಾದ ವಾಯುಯಾನಕ್ಕೆ ಹಲವು ಆತಂಕಗಳೇ ಎದುರಾದವು. ಹೊಸದಿಲ್ಲಿಯಲ್ಲಿ ಮಾತನಾಡಿದ ಕೇಂದ್ರ ನಾಗರಿಕ ವಿಮಾನಯಾನ ಸಚಿವ ಹರ್‌ದೀಪ್‌ ಸಿಂಗ್‌ಪುರಿ ಒಟ್ಟು 630 ವಿಮಾನಗಳು ರದ್ದಾಗಿವೆ ಎಂದು ಹೇಳಿದ್ದಾರೆ.

Advertisement

ಮುಂಬಯಿ, ಚೆನ್ನೈ, ಹೈದರಾಬಾದ್‌ ಏರ್‌ಪೋರ್ಟ್‌ಗಳಿಂದ ಸೀಮಿತವಾಗಿ ವಿಮಾನ ಸಂಚಾರ ನಡೆದಿದೆ. ಮುಂಬಯಿ, ದಿಲ್ಲಿ ಸೇರಿದಂತೆ ದೇಶದ ವಿವಿಧ ಏರ್‌ಪೋರ್ಟ್‌ಗಳಲ್ಲಿ ಟಿಕೆಟ್‌ ಪಡೆದುಕೊಂಡು ವಿಮಾನ ಏರಲು ನಿಲ್ದಾಣಕ್ಕೆ ಆಗಮಿಸುತ್ತಿದ್ದಂತೆಯೇ ಪ್ರಯಾಣ ರದ್ದಾಗಿರುವ ಬಗ್ಗೆ ಆಯಾ ವಿಮಾನಯಾನ ಸಂಸ್ಥೆಗಳು ಮಾಹಿತಿ ನೀಡಿದವು. ಇದರಿಂದಾಗಿ ಪ್ರಯಾಣಿಕರು ಕೆಂಡಾಮಂಡಲವಾದ ಘಟನೆಗಳೂ ನಡೆದವು. ಹಲವಾರು ಮಂದಿ ಟ್ವೀಟ್‌ ಮಾಡಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ವೇಳೆ ಪ್ರತಿಕ್ರಿಯಿಸಿದ ನಿಲ್ದಾಣದ ಅಧಿಕಾರಿಗಳು, ಈ ಹಿಂದೆ ಸೇವೆ ಪುನಾರಂಭಕ್ಕೆ ಒಪ್ಪಿಕೊಂಡಿದ್ದ ಕೆಲ ರಾಜ್ಯಗಳು ಕಡೇ ಕ್ಷಣದಲ್ಲಿ ವಿಮಾನಗಳ ಪ್ರವೇಶಕ್ಕೆ ಅನುಮತಿ ನಿರಾಕರಿಸಿದ್ದರಿಂದ ಅನಿವಾರ್ಯವಾಗಿ ಸೇವೆ ರದ್ದು ಮಾಡಿದ್ದಾಗಿ ಮಾಹಿತಿ ನೀಡಿದರು.

ಹೊಸದಿಲ್ಲಿಯಿಂದ ಪುಣೆಗೆ ಸೋಮವಾರ ಮುಂಜಾವ 4.45ಕ್ಕೆ ಮೊದಲ ವಿಮಾನ ಹಾರಾಟ ನಡೆಸುವ ಮೂಲಕ ಯಾನ ಆರಂಭವಾಯಿತು. ಮುಂಬಯಿಯಿನಿಂದ ಬೆಳಗ್ಗೆ 6.45ಕ್ಕೆ ವಿಮಾನ ಯಾನ ಸೇವೆ ಆರಂಭವಾಯಿತು. ದಿಲ್ಲಿ ನಿಲ್ದಾಣದಿಂದ ಬೇರೆಡೆಗೆ 125 ವಿಮಾನಗಳು ಹಾರಿದರೆ, 118 ವಿಮಾನಗಳು ಬೇರೆ ನಿಲ್ದಾಣಗಳಿಂದ ದಿಲ್ಲಿಗೆ ಬಂದಿಳಿದವು.

ದಿಲ್ಲಿಯಲ್ಲೇ 82: ದಿಲ್ಲಿಯ ಇಂದಿರಾಗಾಂಧಿ ವಿಮಾನ ನಿಲ್ದಾಣ ಒಂದರಲ್ಲೇ 82 ವಿಮಾನಗಳ ಕಾರ್ಯಾಚರಣೆ ರದ್ದಾಯಿತು. ಸಾರಿಗೆ ವ್ಯವಸ್ಥೆ ಕೊರತೆಯಿಂದಾಗಿ ವಿಮಾನ ನಿಲ್ದಾಣ ತಲುಪಲು ವಿಮಾನದ ಟಿಕೆಟ್‌ಗಿಂತಲೂ ಹೆಚ್ಚು ಹಣ ವೆಚ್ಚ ಮಾಡಿದ್ದಾಗಿ ಕೆಲ ವಿದ್ಯಾರ್ಥಿಗಳು ಅಳಲು ತೋಡಿಕೊಂಡರು. ಮೊದಲ ದಿನವೇ ದೆಹಲಿ ವಿಮಾನ ನಿಲ್ದಾಣದಿಂದ ವಿವಿಧ ನಗರಗಳಿಗೆ ಹಾರಬೇಕಿದ್ದ 82 ವಿಮಾನಗಳು ರದ್ದಾಗಿದ್ದರಿಂದ ಪ್ರಯಾಣಿಕರು ನಿರಾಸೆ ಅನುಭವಿಸಿದರು.
ದೂರದೂರುಗಳಿಂದ ಸಾವಿರಾರು ರೂ. ವೆಚ್ಚ ಮಾಡಿಕೊಂಡು ಬಂದು ವಿಮಾನ ನಿಲ್ದಾಣ ತಲುಪಿದ್ದವರು ವಿಮಾನ ರದ್ದಾಗಿರುವ ವಿಷಯ ಕೇಳಿ ಆಕ್ರೋಶ ವ್ಯಕ್ತಪಡಿಸಿದರು.

28ರ ಬಳಿಕ: ಮೇ 28ರ ನಂತರ ವಿಮಾನ ಸೇವೆಗೆ ಅನುಮತಿ ನೀಡುವುದಾಗಿ ಪಶ್ಚಿಮ ಬಂಗಾಳ ಸರಕಾರ ತಿಳಿಸಿದರೆ, ಮುಂಬೆ„ ಏರ್‌ಪೋರ್ಟ್‌ ನಿಂದ ದಿನವೊಂದಕ್ಕೆ 25 ಆಗಮನ ಮತ್ತು 25 ನಿರ್ಗಮನ ಸೇರಿ ಒಟ್ಟು 50 ವಿಮಾನಗಳಿಗೆ ಮಾತ್ರ ಅವಕಾಶ ನೀಡುವುದಾಗಿ ಮಹಾರಾಷ್ಟ್ರ ಸರಕಾರ ಹೇಳಿತ್ತು. ಅತ್ತ ತಮಿಳುನಾಡು ಕೂಡ ಮುಂಬೆ„ ಮಾದರಿ ಅನುಸರಿಸಿದೆ. ಇನ್ನೊಂದೆಡೆ ವಿಜಯವಾಡ ಮತ್ತು ವಿಶಾಖಪಟ್ಟಣ ಏರ್‌ಪೋರ್ಟ್‌ಗಳಲ್ಲಿ ವಿಮಾನಗಳ ಪ್ರವೇಶಕ್ಕೆ ಆಂಧ್ರಪ್ರದೇಶ ಸರಕಾರ ಅವಕಾಶ ನೀಡಲಿಲ್ಲ. ಇಂಡಿಗೋ, ಸ್ಪೈಸ್‌ಜೆಟ್‌ ಸೇರಿದಂತೆ ಹಲವಾರು ವಿಮಾನ ಕಂಪೆನಿಗಳು ವಿಮಾನ ಯಾನ ಶುರುವಾಗಿದ್ದಕ್ಕೆ ಹರ್ಷ ವ್ಯಕ್ತಪಡಿಸಿವೆ.

Advertisement

ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ ಕ್ವಾರಂಟೈನ್‌ ಕಡ್ಡಾಯ
ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ ಸಂಬಂಧಿ ಸಿದಂತೆ ಹೊಸ ಮಾರ್ಗಸೂಚಿ ಹೊರಡಿಸಿರುವ ಕೇಂದ್ರ ಆರೋಗ್ಯ ಸಚಿವಾಲಯ, ವಿವಿಧ ದೇಶಗಳಿಂದ ಭಾರತಕ್ಕೆ ಬರುವ ಎಲ್ಲ ಪ್ರಯಾಣಿಕರು ಕಡ್ಡಾಯವಾಗಿ 14 ದಿನಗಳ ಕಾಲ ಕ್ವಾರಂಟೆ„ನ್‌ಗೆ ಒಳಪಡಬೇಕು. ಮತ್ತು ಪ್ರಯಾಣಿಕರು ವಿಮಾನ ಏರುವ ಮೊದಲೇ ಅವರಿಗೆ ಕ್ವಾರೆಂಟೆ„ನ್‌ ಬಗ್ಗೆ ಮಾಹಿತಿ ನೀಡಬೇಕು ಎಂದು ಹೇಳಿದೆ. ಸೋಮವಾರ ದಿಂದ ದೇಶೀ ವಿಮಾನಯಾನ ಆರಂಭವಾ ಗಿದ್ದು, ಆಗಸ್ಟ್‌ ವೇಳೆಗೆ ಅಂತಾರಾಷ್ಟ್ರೀಯ ವಿಮಾನ ಸೇವೆ ಆರಂಭದ ನಿರೀಕ್ಷೆ ಇರುವ ಕಾರಣ ಈ ಕ್ರಮ ಕೈಗೊಳ್ಳಲಾಗಿದೆ. ಮೊದಲ ಏಳು ದಿನಗಳ ಅವಧಿಯ ಕ್ವಾರೆಂಟೈನ್‌ ವ್ಯವಸ್ಥೆಯ ವೆಚ್ಚವನ್ನು ಪ್ರಯಾಣಿಕರೇ ಭರಿ ಸಬೇಕು. ನಂತರದ ಏಳು ದಿನ ಕಡ್ಡಾಯ ವಾಗಿ ತಮ್ಮ ಮನೆಯಲ್ಲಿ ಐಸೊಲೇಷನ್‌ಗೆ ಒಳಪಡ ಬೇಕು ಎಂದು ನಾಗರಿಕ ವಿಮಾನಯಾನ ಸಚಿವ ಹರ್‌ದೀಪ್‌ ಸಿಂಗ್‌ ಪುರಿ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next