Advertisement
ದಸರಾ ಹಬ್ಬದಲ್ಲಿ ಮಳಿಗೆ, ವಾಹನಗಳಿಗೆ ಪೂಜೆ ಮಾಡದವರು ಇದೀಗ ದೀಪಾವಳಿಯಲ್ಲಿ ಮಾಡುತ್ತಾರೆ. ಹೀಗಾಗಿ ಬೂದುಕುಂಬಳ, ನಿಂಬೆಹಣ್ಣುಗಳಿಗೂ ಬೇಡಿಕೆ ಇದೆ. ಕಳೆದ ವರ್ಷ ಕೊರೊನಾ ಎರಡನೇ ಅಲೆಯ ಅಬ್ಬರವಿತ್ತು. ಹೀಗಾಗಿ, ಜನರು ದೀಪಾವಳಿಯನ್ನು ಸಂಭ್ರಮಿಸಿರಲಿಲ್ಲ. ಆದರೆ, ಈ ಬಾರಿ ಸೋಂಕು ನಿಯಂತ್ರ ಣದಲ್ಲಿರುವುದರಿಂದ ಜನರು ಮಾರುಕಟ್ಟೆಗಳಲ್ಲಿ ಮುಗಿಬಿದ್ದು ವಸ್ತುಗಳನ್ನು ಖರೀದಿಸಿದರು. ಮನೆ ಬಾಗಿಲಿನಲ್ಲಿ ಹಚ್ಚುವ ದೀಪಗಳನ್ನು 3 ರೂ. ಗಳಿಂದ 200 ರೂ.ವರೆಗಿನ ಗ್ರಾಹಕರನ್ನು ಆಕರ್ಷಿಸುತ್ತಿ ದ್ದವು.
Related Articles
Advertisement
ಮತ್ತೂಂದೆಡೆ ಹಬ್ಬಕ್ಕೆ ಬೇಕಾದ ಹೂವು, ಹಣ್ಣುಗಳ ಖರೀದಿಯೂ ನಡೆಯುತ್ತಿದೆ. ಮಲ್ಲಿಗೆ ಹೂವು ಸೀಸನ್ ಮುಗಿದಿರುವುದರಿಂದ ಮಲ್ಲಿಗೆ ಮೊಗ್ಗು ಕೆ.ಜಿ.ಗೆ 1000-1200 ರೂ. ಇದೆ. ಕನಕಾಂಬರ ಹೂವು ಕೂಡ ಕೆ.ಜಿ.ಗೆ 1000 ರಿಂದ 1300 ರೂ.ವರೆಗೆ ದರವಿದೆ. ಆದರೆ, ಸೇವಂತಿಗೆ ಹೂವು ಕಳೆದ ಒಂದೂವರೆ ತಿಂಗಳಲ್ಲಿ ಇಳಿಕೆಯಾಗಿದ್ದು, ಮತ್ತೆ ಏರಿಕೆಯಾಗಲಿಲ್ಲ. ಹೀಗಾಗಿ, ಕೆ.ಆರ್. ಮಾರುಕಟ್ಟೆಯಲ್ಲಿ ಸಗಟು ದರದಲ್ಲಿ ಕೆ.ಜಿ.ಗೆ 30-60 ರೂ. ದರವಿದೆ.
ಕಾಕಡ 300-400 ರೂ., ಸುಗಂಧ ರಾಜ 60 ರೂ. ಇದೆ ಎನ್ನುತ್ತಾರೆ ಕೆ.ಆರ್. ಮಾರುಕಟ್ಟೆ ಸಗಟು ಹೂವಿನ ಮಾರಾಟಗಾರರದ ರವಿಕುಮಾರ್. ಹಣ್ಣುಗಳ ದರವೂ ಕಡಿಮೆಯಾಗಿದೆ. ಏಲಕ್ಕಿ ಬಾಳೆ ಕೆ.ಜಿ.ಗೆ 60 ರೂ. ಇದ್ದರೆ, ಸೇಬು 120 ರೂ., ಕಿತ್ತಳೆ ಹಣ್ಣು 40-50 ರೂ. ದರವಿದೆ. ಹೀಗಾಗಿ, ಗ್ರಾಹಕರಿಗೆ ಹೆಚ್ಚಿನ ಹೊರೆಯಿಲ್ಲ. ಟೊಮೇಟೊ ದರ ಕೂಡ ಕಳೆದ ಎರಡು ವಾರಗಳ ಹಿಂದೆ ಕೆ.ಜಿ.ಗೆ 60 ರೂ. ಇದ್ದುದು ಇದೀಗ ಸ್ವಲ್ಪ ಇಳಿಕೆಯಾಗಿದೆ. ಕೆ.ಜಿ.ಗೆ 40 ರೂ.ಗೆ ಮಾರಾಟವಾಗುತ್ತಿದೆ ಎಂದು ಹಣ್ಣು-ತರಕಾರಿ ಮಾರಾಟಗಾರ ರಾಮು ತಿಳಿಸಿದ್ದಾರೆ.