Advertisement

ಉನ್ನತ ಶಿಕ್ಷಣದಲ್ಲಿ ವಿಭಿನ್ನ ಸವಾಲು

09:41 PM Jan 15, 2020 | Team Udayavani |

ತುಮಕೂರು: ಆಧುನಿಕ ಯುಗದಲ್ಲಿ ಉನ್ನತ ಶಿಕ್ಷಣ ವಿಭಿನ್ನ ಸವಾಲು ಎದುರಿಸುತ್ತಿದೆ. ಭಾರತದಲ್ಲಿ ಉನ್ನತ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳ ಸಂಖ್ಯೆ ಅಮೆರಿಕದ ಒಟ್ಟು ಜನಸಂಖ್ಯೆಯಷ್ಟಿದೆ ಎಂದು ಬೆಂಗಳೂರಿನ ನ್ಯಾಕ್‌ ಅಡ್ವೈಸರ್‌ ಕಮಿಟಿ ಸಲಹೆಗಾರ ಡಾ.ಎಂ.ಎಸ್‌. ಶ್ಯಾಮ್‌ಸುಂದರ್‌ ತಿಳಿಸಿದರು. ನಗರದ ಶ್ರೀ ಸಿದ್ಧಗಂಗಾ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನಲ್ಲಿ ಹೊಸ ಮೌಲ್ಯಮಾಪನ ಮತ್ತು ಮಾನ್ಯತೆ ಪ್ರಕ್ರಿಯೆ ಮೇಲೆ ಅದರ ಪ್ರಭಾವ ಕುರಿತು ಏರ್ಪಡಿಸಿದ್ದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

Advertisement

ಶಿಕ್ಷಣದ ಗುಣಮಟ್ಟ ಹೆಚ್ಚಬೇಕು: ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಒದಗಿಸುವಲ್ಲಿ ಶಿಕ್ಷಣ ತಜ್ಞರು ಎ.ಸಿ. ರೂಂನಲ್ಲಿ ಕುಳಿತು ಕಾರ್ಯಕ್ರಮ ರೂಪಿಸಲು ಸಾಧ್ಯವಿಲ್ಲ. ಇದಕ್ಕೆ ಬದಲಾಗಿ ವಿಭಿನ್ನ ಮಾರ್ಗ ಅನುಸರಿಸಿದರೆ ವಿದ್ಯಾರ್ಥಿಗಳಿಗೆ ಸರ್ವಾಂಗೀಣ ಶಿಕ್ಷಣ ಕೊಡಲು ಸಾಧ್ಯ. ಆ ಮೂಲಕ ಶಿಕ್ಷಣದ ಗುಣಮಟ್ಟ ಹೆಚ್ಚಿಸಿಕೊಳ್ಳಬೇಕಾದ ಅವಶ್ಯಕತೆ ಇದೆ ಎಂದು ಹೇಳಿದರು.

ಶ್ರೀ ಸಿದ್ಧಗಂಗಾ ವಿದ್ಯಾಸಂಸ್ಥೆ ಕಾರ್ಯದರ್ಶಿ ಟಿ.ಕೆ.ನಂಜುಂಡಪ್ಪ ಮಾತನಾಡಿ, ಇಂದಿನ ಶಿಕ್ಷಣದಲ್ಲಿ ಗುಣಮಟ್ಟ ವೃದ್ಧಿಸಿಕೊಳ್ಳಬೇಕಾದ ಅನಿವಾರ್ಯತೆ ಇದೆ. ಉನ್ನತ ಶಿಕ್ಷಣದಲ್ಲಿ ರ್‍ಯಾಂಕಿಂಗ್‌ ಗಳಿಸಿದ ನೂರು ವಿಶ್ವವಿದ್ಯಾಲಯಗಳಲ್ಲಿ ಭಾರತದ ಒಂದು ವಿಶ್ವವಿದ್ಯಾಲಯವು ಸ್ಥಾನ ಪಡೆದಿಲ್ಲದಿರುವುದು ಕಳವಳಕಾರಿ ಸಂಗತಿ ಎಂದು ಹೇಳಿದರು.

ಕಾರ್ಯಾಗಾರ ಉಪಯುಕ್ತ: ಪ್ರಾಂಶುಪಾಲರಾದ ಡಾ. ಆರ್‌.ಆನಂದ ಕುಮಾರಿ ಮಾತನಾಡಿ, ಕಾರ್ಯಾಗಾರದಲ್ಲಿ ಆಯ್ಕೆ ಮಾಡಿಕೊಂಡಿರುವ ವಿಷಯಗಳು ಹೆಚ್ಚು ಉಪಯುಕ್ತವಾಗಿದೆ. ಶಿಕ್ಷಣದ ಗುಣಮಟ್ಟ ವೃದ್ಧಿಸಿಕೊಳ್ಳುವಲ್ಲಿ ಟೀಚಿಂಗ್‌, ಲರ್ನಿಂಗ್‌ ಇವಾಲ್ಯೂಯೇಷನ್‌ ಮತ್ತು ಸೋಷಿಯಲ್‌ ರೆಸ್ಪಾನ್ಸಿಬಿಲಿಟಿ ಬಹಳ ಮುಖ್ಯ. ಸಂಬಂಧಪಟ್ಟ ಕಾಲೇಜಿನವರು ಕಾರ್ಯಕ್ರಮದಲ್ಲಿ ದೊರೆಯುವ ಸಲಹೆ ಬಳಸಿ ಉನ್ನತ ಶ್ರೇಣಿ ಪಡೆಯಬಹುದಾಗಿದೆ ಎಂದು ಸಲಹೆ ನೀಡಿದರು.

ಅರ್ಚನಾ ಪ್ರಾರ್ಥಿಸಿದರು. ನ್ಯಾಕ್‌ ಕೋ-ಆರ್ಡಿನೇಟರ್‌ ಪ್ರೊ.ಸಿ.ಎಸ್‌. ಸೋಮಶೇಖರಯ್ಯ ಸ್ವಾಗತಿಸಿದರು. ಕನ್ನಡ ವಿಭಾಗದ ಮುಖ್ಯಸ್ಥೆ ಡಾ. ಬಿ.ಎಸ್‌. ಮಂಜುಳಾ ವಂದಿಸಿದರು. ಉಪನ್ಯಾಸಕಿ ಮಧು ಎಸ್‌.ಕುಮಾರ್‌ ಕಾರ್ಯಕ್ರಮ ನಿರೂಪಿಸಿದರು.

Advertisement

ಭಾರತದ 200 ವಿಶ್ವವಿದ್ಯಾಲಯಗಳ ರ್‍ಯಾಂಕಿಂಗ್‌ ಪಟ್ಟಿಯಲ್ಲಿ ಕೇವಲ 2 ವಿಶ್ವವಿದ್ಯಾಲಯಗಳಷ್ಟೇ ಸ್ಥಾನ ಪಡೆದಿರುವುದು ಇಂದಿನ ಶಿಕ್ಷಣದ ಶೋಚನೀಯತೆ ತಿಳಿಸುತ್ತದೆ. ಆದ್ದರಿಂದ ಶಿಕ್ಷಣದ ಗುಣಮಟ್ಟ ವೃದ್ಧಿಸಿಕೊಳ್ಳುವಲ್ಲಿ ಈ ರೀತಿಯ ಕಾರ್ಯಕ್ರಮಗಳು ಹೆಚ್ಚು ಉಪಯುಕ್ತವಾಗುತ್ತವೆ.
-ಟಿ.ಕೆ.ನಂಜುಂಡಪ್ಪ, ಶ್ರೀ ಸಿದ್ಧಗಂಗಾ ವಿದ್ಯಾಸಂಸ್ಥೆ ಕಾರ್ಯದರ್ಶಿ

Advertisement

Udayavani is now on Telegram. Click here to join our channel and stay updated with the latest news.

Next