Advertisement

ಕುಸ್ತಿಪಟುಗಳಿಂದ “ಕರಾಳ ದಿನ” ಆಚರಣೆ

12:34 AM May 12, 2023 | Team Udayavani |

ಹೊಸದಿಲ್ಲಿ: ಡಬ್ಲ್ಯುಎಫ್ಐ ಮುಖ್ಯಸ್ಥ ಬ್ರಿಜ್‌ ಭೂಷಣ್‌ ಶರಣ್‌ ಸಿಂಗ್‌ ಅವರ ವಿರುದ್ಧ ನಡೆಯತ್ತಿರುವ ಪ್ರತಿಭಟನೆ 18ನೇ ದಿನಕ್ಕೆ ಕಾಲಿಟ್ಟಿರುವ ಹಿನ್ನೆಲೆಯಲ್ಲಿ ಪ್ರತಿಭಟನೆ ನಿರತ ಕುಸ್ತಿಪಟುಗಳು ಮತ್ತು ಬೆಂಬಲಿಗರು ಗುರುವಾರ ಕಪ್ಪುಪಟ್ಟಿ ಧರಿಸಿ “ಕರಾಳ ದಿನ’ ಆಚರಿಸಿದರು.

Advertisement

ಅಗ್ರ ಕುಸ್ತಿಪಟುಗಳಾದ ವಿನೇಶ್‌ ಪೋಗಟ್‌, ಬಜರಂಗ್‌ ಪೂನಿಯ, ಸಾಕ್ಷಿ ಮಲಿಕ್‌, ಸತ್ಯವರ್ತ್‌ ಕೈದ್ಯನ್‌ ಮತ್ತು ಜಿತೇಂದರ್‌ ಕಿನ್ಹಾ ಅವರು ತಮ್ಮ ಹಣೆಯ ಮೇಲೆ ಕಪ್ಪುಪಟ್ಟಿ ಧರಿಸಿ ಪ್ರತಿಭಟನೆ ನಡೆಸಿದರು. ಅವರ ಕೆಲವು ಬೆಂಬಲಿಗರು ಪ್ರತಿಭಟನೆಯ ಸಂಕೇತವಾಗಿ ತಮ್ಮ ಕೈಗಳಿಗೆ ಕಪ್ಪು ಪಟ್ಟಿ ಧರಿಸಿದ್ದರು.

ಹಲವು ಮಹಿಳಾ ಕುಸ್ತಿಪಟುಗಳ ಮೇಲೆ ಲೈಂಗಿಕ ಶೋಷಣೆ ಮಾಡಿದ ಆರೋಪದ ಮೇಲೆ ಕುಸ್ತಿಪಟುಗಳು ಬ್ರಿಜ್‌ ಭೂಷಣ್‌ ಶರಣ್‌ ಸಿಂಗ್‌ ಅವರನ್ನು ಬಂಧಿಸಬೇಕೆಂದು ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ಆದರೆ ಬ್ರಿಜ್‌ ಭೂಷಣ್‌ ಶರಣ್‌ ಸಿಂಗ್‌ ಈ ಎಲ್ಲ ಆರೋಪಗಳನ್ನು ನಿರಾಕರಿಸಿದ್ದಾರೆ. ಆದರೆ ದಿಲ್ಲಿ ಪೊಲೀಸರು ಸುಪ್ರೀ ಕೋರ್ಟ್‌ನ ಸೂಚನೆಯಂತೆ ಬ್ರಿಜ್‌ ವಿರುದ್ಧ ಎರಡು ಎಫ್ಐಆರ್‌ಗಳನ್ನು ದಾಖಲಿಸಿದ್ದಾರೆ.

ಬ್ರಿಜ್‌ ಭೂಷಣ್‌ ಶರಣ್‌ ಸಿಂಗ್‌ ವಿರುದ್ಧ ಪ್ರತಿಭಟನೆಗಾಗಿ ನಾವು ಗುರುವಾರ ಕರಾಳ ದಿನವನ್ನು ಆಚರಿಸುತ್ತಿದ್ದೇವೆ. ನಮ್ಮ ಹೋರಾಟದಲ್ಲಿ ಇಡೀ ರಾಷ್ಟ್ರವು ನಮ್ಮೊಂದಿಗೆ ಇರುವುದರಿಂದ ನಮಗೆ ಗೆಲುವಿನ ವಿಶ್ವಾಸವಿದೆ’ ಎಂದು ಬಜರಂಗ್‌ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next