Advertisement
ಮಂಗಳೂರು ಸೋಲಾಪುರ ರಾ.ಹೆ. 169ರ ಮಾಳ ಮುಳ್ಳೂರು ಚೆಕ್‌ಪೋಸ್ಟ್ ನಿಂದ ಶೃಂಗೇರಿ ಹಾಗೂ ಕುದುರೆಮುಖ ರಸ್ತೆ ತಿರುವು- ಮುರುವಾಗಿದ್ದು ತೀರ ಅಪಾಯಕಾರಿಯಾಗಿದೆ. ಇಲ್ಲಿ ಪ್ರವಾಸಿ ವಾಹನಗಳು ಹೆಚ್ಚಿನ ಸಂಖ್ಯೆಯಲ್ಲಿ ಸಂಚರಿಸುತ್ತವೆ. ಅತಿ ವೇಗದಲ್ಲಿ, ತಿರುವಿನಲ್ಲಿ ಬಂದಾಗ ಅಪಘಾತಕ್ಕೆ ಕಾರಣವಾಗುತ್ತಿದೆ.
ಇದೇ ಪರಿಸರದಲ್ಲಿ ಮೈಸೂರಿನಿಂದ ಕುದುರೆ ಮುಖವಾಗಿ ಮಂಗಳೂರು ಸಾಗುತ್ತಿದ್ದ ಟೂರಿಸ್ಟ್ ಬಸ್ ಶನಿವಾರ ಧರೆ ಬದಿಯ ಬಂಡೆ ಗಲ್ಲಿಗೆ ಢಿಕ್ಕಿ ಹೊಡೆದ ಪರಿಣಾಮ 9 ಮಂದಿ ಸಾವಿ ಗೀಡಾ ಗಿದ್ದರು. 2017ರಲ್ಲಿ ಖಾಸಗಿ ಬಸ್ಸೊಂದು ಅಪಘಾತಕ್ಕೀಡಾಗಿ ಮೂವರು ಮೃತಪಟ್ಟ ದುರಂತ ಇದೇ ಪರಿಸರದಲ್ಲಿ ನಡೆದಿತ್ತು. 2016ರಲ್ಲಿ ಶಾಲಾ ಪ್ರವಾಸದ ಟೆಂಪೋ ಒಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಹೊಂಡಕ್ಕೆ ಮಗುಚಿ ಬಿದ್ದು ಶಿಕ್ಷಕ ಸಾವನ್ನಪ್ಪಿದ್ದರು. ಸಣ್ಣಪುಟ್ಟ ಅವಘಡ, ಅಪಘಾತಗಳು ಈ ಪ್ರದೇಶದಲ್ಲಿ ಘಟಿಸುತ್ತಲೇ ಇದೆ.
Related Articles
ಕಿರಿದಾಗಿರುವ ರಸ್ತೆ ವಿಸ್ತರೀಕರಣ ವಾದಲ್ಲಿ ಅಪಘಾತ ಪ್ರಮಾಣ ಕಡಿಮೆ ಯಾಗಬಹುದೆನ್ನುವುದು ಸ್ಥಳೀಯರ ಅಭಿಪ್ರಾಯ. ವನ್ಯಜೀವಿ ಸಂರಕ್ಷಿತ ಪ್ರದೇಶವಾದ ಕಾರಣ ಅರಣ್ಯ ಇಲಾಖೆ ರಸ್ತೆ ವಿಸ್ತರೀಕರಣಕ್ಕೆ ಅಡ್ಡಿಯಾಗಿದೆ. ಕಾನೂನು ತೊಡಕು ನಿವಾರಿಸಿ, ರಸ್ತೆ ಅಭಿವೃದ್ಧಿಪಡಿಸಬೇಕೆನ್ನುವುದು ಸಾರ್ವಜನಿಕರ ಅಭಿಪ್ರಾಯ.
Advertisement
ಸೂಚನ ಫಲಕ ಬೇಕುರಸ್ತೆ ತಿರುವು ಮುರುವು, ಅಪಾಯಕಾರಿ ಕುರಿತು ಅಲ್ಲಲ್ಲಿ ಸೂಚನ ಫಲಕ, ರಿಫ್ಲೆಕ್ಟರ್‌ಗಳನ್ನು ಅಳವಡಿಸಬೇಕೆಂಬ ಬೇಡಿಕೆಯೂ ಕೇಳಿಬರುತ್ತಿದೆ. ಇದರಿಂದ ವಾಹನ ಚಾಲಕರು ತುಸು ಎಚ್ಚರಿಕೆ ವಹಿಸಿ, ವಾಹನ ಚಾಲನೆ ಮಾಡುವಂತಾಗಲಿದೆ. ಅಜಾಗರೂಕತೆಯೇ ಪ್ರಮುಖ ಕಾರಣ
ರಸ್ತೆ ಅಪಘಾತಕ್ಕೆ ಅಜಾಗರೂಕತೆ, ಅತಿ ವೇಗದ ಚಾಲನೆಯೇ ಪ್ರಮುಖ ಕಾರಣವೆನ್ನಲಾಗುತ್ತಿದೆ. ಫೆ. 15ರಂದು ಮುಳ್ಳೂರಿನ ನಡೆದ ಘಟನೆಗೂ ಬಸ್ ಚಾಲಕನ ಅಜಾಗರೂಕತೆಯೇ ಕಾರಣ ಎಂದು ಹೇಳಲಾಗುತ್ತಿದೆ. ಅಗಲೀಕರಣಕ್ಕೆ ಮನವಿ
ಮಾಳ-ಮುಳ್ಳೂರು ರಸ್ತೆ ತೀರಾ ಕಿರಿದಾಗಿದ್ದು, ತಿರುವಿನಿಂದ ಕೂಡಿದೆ. ಇದರಿಂದಾಗಿ ಎದುರು ಭಾಗದಿಂದ ಬರುವ ವಾಹನಗಳು ಗೊತ್ತಾಗುವುದು ಕಷ್ಟಕರ. ರಸ್ತೆ ಅಗಲೀಕರಣಗೊಳಿಸಿ, ಸೂಚಕ ಫಲಕ ಅಳವಡಿಸುವುದು ಅಗತ್ಯ. ಈ ನಿಟ್ಟಿನಲ್ಲಿ ಸಂಬಂಧಪಟ್ಟ ಇಲಾಖಾಧಿಕಾರಿಗಳಿಗೆ ಮನವಿ ನೀಡಲಾಗುವುದು.
-ಅಜಿತ್ ಕುಮಾರ್ ಹೆಗ್ಡೆ
ಅಧ್ಯಕ್ಷರು, ಗ್ರಾ.ಪಂ. ಮಾಳ