ಆಯಾಮ ರಂಗ ತಂಡವು, ಎನ್.ಎಂ. ಕೆ.ಆರ್. ವಿ. ಮಹಿಳಾ ಕಾಲೇಜು ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ “ನೃತ್ಯ ಗಾಯನ ನಾಟಕ ಸನ್ಮಾನ’ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಸಚಿವ ಸಿ. ಟಿ ರವಿ, ಪ್ರಾಂಶುಪಾಲೆ ಡಾ. ಸ್ನೇಹಲತಾ ಜಿ. ನಾಡಿಗೇರ್, ಸಮಾಜಸೇವಕ ಬಿ. ಎಚ್. ರಾಮಚಂದ್ರ, ಮುಖ್ಯಅತಿಥಿಗಳಾಗಿ ಪಾಲ್ಗೊಳ್ಳುವರು. ನಂತರ, ಗಾಯನ, ನೃತ್ಯ, ಎಚ್.ಎಸ್. ಶಿವಪ್ರಕಾಶ್ ಅವರ “ಮಾಧವಿ’ ನಾಟಕ, ಪು.ತಿ.ನ. ರಚನೆಯ ಗೀತ ನಾಟಕ “ಸತ್ಯಾಯನ ಹರಿಶ್ಚಂದ್ರ’, ಎಂ.ಎಸ್. ನರಸಿಂಹ ಮೂರ್ತಿ ರಚನೆಯ “ಕಿವುಡು ಸಾರ್ ಕಿವುಡು’ ಹಾಸ್ಯ ನಾಟಕ ಪ್ರದರ್ಶನಗೊಳ್ಳಲಿದೆ.
ಎಲ್ಲಿ?: ಶಾಶ್ವತಿ ಸಭಾಂಗಣ, ಎನ್.ಎಂ.ಕೆ.ಆರ್.ವಿ. ಕಾಲೇಜು, ಜಯನಗರ 3ನೇ ಹಂತ
ಯಾವಾಗ?: ಅ.26, ಶನಿವಾರ, ಸಂಜೆ 4