Advertisement

ರಸ್ತೆ ಕಾಮಗಾರಿಗೆ ಅಡ್ಡಲಾಗಿಮಲಗಿ ದಂಪತಿ ಪ್ರತಿಭಟನೆ

06:05 PM Mar 20, 2021 | Team Udayavani |

ಕುಂದಗೋಳ: ತರ್ಲಘಟ್ಟ ಗ್ರಾಪಂನಲ್ಲಿ ಅವ್ಯವಹಾರ ಆಗಿದೆ ಎಂದು ಆರೋಪಿಸಿ ಮಾಜಿ ಸದಸ್ಯ ಸಿದ್ದಪ್ಪ ಕಳಸಣ್ಣವರ ಕೈಗೊಂಡಿರುವ ಸತ್ಯಾಗ್ರಹ 5ನೇ ದಿನಕ್ಕೆ ಪಾದಾರ್ಪಣೆಗೊಂಡಿದ್ದು, ಶುಕ್ರವಾರ ರಸ್ತೆ ಕಾಮಗಾರಿ ಮಾಡುವುದನ್ನು ನಿಲ್ಲಿಸಬೇಕೆಂದು ಆಗ್ರಹಿಸಿ ರಸ್ತೆ ಮಧ್ಯೆ ಮಲಗಿ ಪ್ರತಿಭಟಿಸಿದ ಘಟನೆ ಜರುಗಿದೆ.

Advertisement

ಗ್ರಾಮಕ್ಕೆ ಬಂದ ಕೋಟ್ಯಂತರ ರೂ. ಅನುದಾನ ದುರುಪಯೋಗ ಪಡಿಸಿಕೊಂಡಿದ್ದು ಸಂಪೂರ್ಣ ತನಿಖೆ ಆಗುವವರೆಗೂ ಯಾವುದೇ ಕಾಮಗಾರಿಗಳನ್ನು ಮಾಡಬಾರದು. ಹಿಂದೆ ಈ ರಸ್ತೆಗೆ ಲಕ್ಷಾಂತರ ರೂಪಾಯಿ ಖರ್ಚು ಹಾಕಿದ್ದಾರೆ. ಈಗ ಈ ರಸ್ತೆ ಮಾಡಿದರೆ ಎಲ್ಲ ಸಾಕ್ಷಿಗಳು ನಶಿಸಿ ಹೋಗುತ್ತವೆ. ಅಭಿವೃದ್ಧಿ ಕಾರ್ಯಕ್ಕೆ ನನ್ನ ವಿರೋಧವಿಲ್ಲ. ಮೊದಲು ಅ ಧಿಕಾರಿಗಳು 2015ರಿಂದ 20ರ ವರೆಗೆ ನಡೆದ ಅವ್ಯವಹಾರವನ್ನು ಸಂಪೂರ್ಣ ತನಿಖೆ ಮಾಡಿ ಸಂಬಂಧಪಟ್ಟ ಅಧಿ ಕಾರಿಗಳ ಮೇಲೆ ಕ್ರಿಮಿನಲ್‌ ಕೇಸ್‌ ದಾಖಲು ಆಗಬೇಕು ಹಾಗೂ ದುರುಪಯೋಗ ಪಡಿಸಿಕೊಂಡ ಹಣವನ್ನು ಪಂಚಾಯತಿಗೆ ಮರಳಿಸಬೇಕೆಂದು ಹಿರಿಯ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಸ್ಪಂದಿಸುತ್ತಿಲ್ಲ.

ನನ್ನ ಜೀವ ಹೋದರೂ ಸರಿ ತನಿಖೆ ಆಗುವವರೆಗೂ ತುರ್ತು ಕೆಲಸ ಬಿಟ್ಟು ಬೇರೆ ಯಾವ ಕೆಲಸಕ್ಕೆ ಅನುವು ಮಾಡಿಕೊಡುವುದಿಲ್ಲ ಎಂದು ಪಟ್ಟುಹಿಡಿದರು. ಪರಿಣಾಮ ಕೆಲಕಾಲ ಗೊಂದಲದ ವಾತಾವರಣ, ಮಾತಿನ ಸಮರ ಜರುಗಿತು. ಪಿಡಿಒ ಮಧ್ಯೆ ಪ್ರವೇಶಿಸಿ ಕೆಲಸವನ್ನು ತಾತ್ಕಾಲಿಕವಾಗಿ ನಿಲ್ಲಿಸುತ್ತೇವೆ, ಸೋಮವಾರ ಗ್ರಾಮದ ಹಿರಿಯರೊಂದಿಗೆ ಜಿಪಂ ಸಿಇಒ ಅವರನ್ನು ಭೇಟಿ ಮಾಡಿ ಇಲ್ಲಿ ನಡೆದ ಘಟನೆಯನ್ನು ವಿವರಿಸುತ್ತೇವೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next