Advertisement

Gangavathi: ಲೋಕ ಆದಾಲತ್‌ನಲ್ಲಿ ಒಂದಾದ ವಿಚ್ಛೇದನಕ್ಕಾಗಿ ಅರ್ಜಿ ಹಾಕಿದ್ದ ದಂಪತಿಗಳು

06:32 PM Sep 09, 2023 | Team Udayavani |

ಗಂಗಾವತಿ: ವಿಚ್ಛೇದನಕ್ಕಾಗಿ ಸ್ಥಳೀಯ ಜೆಎಂಎಫ್‌ಸಿ ನ್ಯಾಯಾಲಕ್ಕೆ ಅರ್ಜಿ ಹಾಕಿದ್ದ ಎರಡು ಜೋಡಿ ದಂಪತಿಗಳು ಶನಿವಾರ ನಡೆದ ರಾಷ್ಟೀಯ ಲೋಕ ಆದಾಲತ್‌ನಲ್ಲಿ ಸ್ವಯಂ ಪ್ರೇರಣೆಯಿಂದ  ಮತ್ತೆ ಒಂದಾಗಿದ್ದು ವಿಚ್ಛೇದನ ಅರ್ಜಿ ವಾಪಸ್ ಪಡೆಯಲು ನಿರ್ಧಾರಿಸಿದ್ದಾರೆ.

Advertisement

ಕಳೆದ ಒಂದು ವರ್ಷದ ಹಿಂದೆ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದ ಎರಡು ಜೋಡಿ ದಂಪತಿಗಳು ಶನಿವಾರ ಜರುಗಿದ ರಾಷ್ಟೀಯ ಲೋಕ ಆದಾಲತ್ ನಲ್ಲಿ ವಕೀಲರು ಮತ್ತು ನ್ಯಾಯಾಧೀಶರು ಎರಡು ಕುಟುಂಬಗಳ ಮಧ್ಯೆ ಜರುಗಿದ ರಾಜೀ ಸಂಧಾನದಲ್ಲಿ ವಿಚ್ಛೇದನಕ್ಕೆ ಸಲ್ಲಿಸಿದ್ದ ಅರ್ಜಿಯನ್ನು ವಾಪಸ್ ಪಡೆಯಲು ತೀರ್ಮಾನಿಸಿದ್ದಾರೆ. ಇದರಿಂದ ಇಡೀ ನ್ಯಾಯಾಲಯದಲ್ಲಿ ಮತ್ತೆ ಎರಡು ಜೋಡಿ ದಂಪತಿಗಳು ನ್ಯಾಯಾಧೀಶರ ಎದುರಿನಲ್ಲೇ ಪರಸ್ಪರ ಹಾರ ಬದಲಿಸಿ ಅಲ್ಲಿದ್ದರಿಗೆ ಸಿಹಿ ಹಂಚಿ ನಗುತ್ತ ನ್ಯಾಯಾಲಯದಿಂದ ಹೊರ ನಡೆದರು.

ಈ ಸಂದರ್ಭದಲ್ಲಿ ವಕೀಲರ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ಮುಸಾಲಿ ಮಾತನಾಡಿ, ಕೌಟುಂಬಿಕ ಕಲಹಗಳನ್ನು ಆದಷ್ಟು ರಾಜೀ ಸಂಧಾನದ ಮೂಲಕ ಪರಿಹಾರಕ್ಕೆ ಎರಡು ಕಕ್ಷಿದಾರರ ವಕೀಲರು ಯತ್ನಿಸುತ್ತಾರೆ. ಲೋಕ ಆದಾಲತ್ ಮೂಲಕ ವಿಚ್ಛೇದನಕ್ಕೆ ಬಂದ ಅರ್ಜಿ ರಾಜೀ ಸಂಧಾನದ ಮೂಲಕ ಪರಿಹಾರವಾಗಿ ಮತ್ತೆ ದಂಪತಿಗಳು ಒಂದಾಗಿರುವುದು ಅವರವರ ಕುಟುಂಬಗಳನ್ನು ಸಂತೋಷವಾಗಿಡಲು ಕಾರಣವಾಗಿದೆ. ಲೋಕ ಆದಾಲತ್ ನಿಂದ ಕಕ್ಷಿದಾರರಿಗೆ ನೆರವಾಗುತ್ತಿರವುದು ನ್ಯಾಯದಾನ ವಿಳಂಬ ಎನ್ನುವ ಕಳಂಕ ತೊಡೆದು ಹಾಕಿದೆ ಎಂದರು.

ಈ ಸಂದರ್ಭದಲ್ಲಿ ಒಂದನೇ ಹೆಚ್ಚುವರಿ ಜಿಲ್ಲಾ & ಸತ್ರ ನ್ಯಾಯಾಧೀಶ ಸದಾನಂದ ನಾಗಪ್ಪ ನಾಯ್ಕ, ಹಿರಿಯ ಸಿವಿಲ್ ನ್ಯಾಯಾಧೀಶ ರಮೇಶ್ ಗಾಣಿಗೇರ, ಹಿರಿಯ ಸಿವಿಲ್ ನ್ಯಾಯಾಧೀಶೆ ಶ್ರೀದೇವಿ ದರಬಾರೆ, ಹೆಚ್ಚುವರಿ ಸಿವಿಲ್ ನ್ಯಾಯಾಧೀಶೆ ಗೌರಮ್ಮ ಪಾಟೀಲ್,ವಕೀಲರ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ಮುಸಾಲಿ, ನ್ಯಾಯವಾದಿಗಳಾದ ರಾಘವೇಂದ್ರ ದಂಡಿನ್, ಮಾರುತಿ ಸೇರಿ ವಕೀಲರ ಸಂಘದ ಪದಾಧಿಕಾರಿಗಳು, ನ್ಯಾಯಾಲಯದ ನೌಕರರು ಸಿಬ್ಬಂದಿ ವರ್ಗದವರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next