Advertisement

ಸ್ವಾಮಿ ಸಮರ್ಥದಲ್ಲಿ ಗೋಶಾಲೆ ಭಕ್ತರ ಸಮಾಗಮ

06:21 PM Apr 19, 2021 | Team Udayavani |

ಕಲಬುರಗಿ: ಅತಿಯಾದ ಕೀಟನಾಶಕ ಬಳಕೆಯಿಂದ ಇಲ್ಲದ ರೋಗಗಳಿಗೆ ಆಹ್ವಾನ ನೀಡುತ್ತಿದ್ದೇವೆ ಎಂದು ಗುಜರಾತ್‌ನ ಬ್ನಸಿ ಘೀರ್ ಗೋಶಾಲಾ ಮುಖ್ಯಸ್ಥ ಗೋಪಾಲಭಾಯಿ ಸುತಾರಿಯಾ ಕಳವಳ ವ್ಯಕ್ತಪಡಿಸಿದರು. ನಗರ ಹೊರವಲಯ ಹುಮನಾಬಾದ ರಸ್ತೆಯಲ್ಲಿರುವ ಶ್ರೀ ಸ್ವಾಮಿ ಸಮರ್ಥ ಸೇವಾ ಕಲ್ಯಾಣ ಕೇಂದ್ರದಲ್ಲಿ ಕಲಬುರಗಿ ವಿಕಾಸ ಅಕಾಡೆಮಿ, ಸೇಡಂನ ಶ್ರೀ ಕೊತ್ತಲ ಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿ ಹಾಗೂ ಅವರಾದ (ಬಿ) ಸ್ವಾಮಿ ಸಮರ್ಥ ಸೇವಾ ಕಲ್ಯಾಣ ಕೇಂದ್ರ ಟ್ರಸ್ಟ್‌ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ಶ್ರೀ ಸಮರ್ಥ ಗೋಭಕ್ತರ ಸಮಾಗಮ ಮತ್ತು ಉಪನ್ಯಾಸ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು
ಮಾತನಾಡಿದರು.

Advertisement

ಕೀಟನಾಶಕ ಬಳಕೆ ನಿಲ್ಲಿಸಿದಲ್ಲಿ ಮಾತ್ರ ಮನುಷ್ಯನ ಆರೋಗ್ಯ ಸದೃಢವಾಗುವುದು. ಅಲ್ಲದೇ ರೈತರು ನಷ್ಟ ಹೊಂದುವುದು ತಪ್ಪುತ್ತದೆ. ಗೋಕೃಪಾಮೃತವನ್ನು ಕೀಟನಾಶಕದಂತೆ ಬಳಸಲು ಎಲ್ಲರೂ ಮುಂದೆ ಬರಬೇಕು. ಸಾವಯವ ಬೆಲ್ಲ, ಆಕಳ ಹಾಲಿನ ಮೊಸರು ಜತೆಗೆ ಮಜ್ಜಿಗೆಯಿಂದ ಗೋಕೃಪಾಮೃತ ತಯಾರಿಸಬಹುದು.

ತರಕಾರಿಗಳಿಗೆ ಅತಿಯಾದ ಕೀಟನಾಶಕ ಬಳಕೆಯಿಂದ ಕ್ಯಾನ್ಸರ್‌ ಸೇರಿದಂತೆ ಇತರ ಹತ್ತಾರು ರೋಗಗಳು ದಾಳಿ ಮಾಡುತ್ತವೆ ಎಂದು ಹೇಳಿದರು. ದೇಶದಲ್ಲಿಂದು 11 ಲಕ್ಷ ಕೋಟಿ ರೂ. ಮೊತ್ತದ ಕೀಟನಾಶಕ ಬಳಕೆ ಮಾಡಲಾಗುತ್ತಿದೆ. ಇದನ್ನೆಲ್ಲ ದೂರ ಮಾಡಿ ಗೋಕೃಪಾಮೃತ ಬಳಸಿದಲ್ಲಿ ಆರೋಗ್ಯಯುತ ಸಮಾಜ ನಿರ್ಮಾಣ ಜತೆಗೆ ಆರ್ಥಿಕವಾಗಿ ತೊಂದರೆಗೆ ಒಳಗಾಗುವುದು ತಪ್ಪುತ್ತದೆ ಎಂದರು. ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಮತ್ತು ಸಾಂಸ್ಕೃತಿಕ ಸಂಘದ ಅಧ್ಯಕ್ಷ ಬಸವರಾಜ ಸೇಡಂ ಅವರು ಸುತಾರಿಯಾ ಅವರ ಭಾಷಣ ಅನುವಾದ ಮಾಡಿದರು. ನಂತರ ರೈತರು ಜಾಗೃತವಾಗಿ ಕೃಷಿಯಲ್ಲಿ ಬದಲಾವಣೆ ಹೊಂದಿದ್ದಲ್ಲಿ ಮಾತ್ರ ಸಮಾಜ ಬೆಳವಣಿಗೆ ಸಾಧ್ಯ ಎಂದು ತಿಳಿ ಹೇಳಿದರು. ತಡೋಳಾದ ರಾಜಶೇಖರ ಸ್ವಾಮೀಜಿ ಮಾತನಾಡಿದರು.

ಶ್ರೀಶೈಲ ಬದಾಮಿ ಧಾರವಾಡ, ಶ್ರೀ ಸ್ವಾಮಿ ಸಮರ್ಥ ಸೇವಾ ಕಲ್ಯಾಣ ಕೇಂದ್ರದ ಅಧ್ಯಕ್ಷ ಬಸವರಾಜ ಮಾಡಗಿ, ಕಾರ್ಯದರ್ಶಿ ಶಿವಾನಂದ ಗುಡ್ಡಾ, ವಿ. ಶಾಂತರೆಡ್ಡಿ, ವಿಶ್ರಾಂತ ಕುಲಪತಿಗಳಾದ ಡಾ| ಎಸ್‌.ಎ.ಪಾಟೀಲ, ವಿ. ಶಾಂತರೆಡ್ಡಿ, ಡಾ| ರಾಜೇಂದ್ರ ಯರನಾಳ ಇದ್ದರು. ಗೋಭಕ್ತ ಸಮಾಗಮ ಅಂಗವಾಗಿ ವಿವಿಧ ಗೋ ಉತ್ಪನ್ನಗಳ ಮಾರಾಟಕ್ಕೆ ವ್ಯವಸ್ಥೆ ಕಲ್ಪಿಸಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next