Advertisement

Hunsur: ನಗರ ಠಾಣೆಯಲ್ಲಿ ಸಹೋದ್ಯೋಗಿಯ ಸೀಮಂತ ಸಂಭ್ರಮ

03:09 PM Dec 21, 2023 | Team Udayavani |

ಹುಣಸೂರು: ಮಹಿಳಾ ಪೊಲೀಸರೆಂದರೆ ಮೂಗು ಮುರಿಯುವ ಸಂದರ್ಭದಲ್ಲಿ ತಮ್ಮ ಠಾಣೆಯ ಮಹಿಳಾ ಪೇದೆಯ ಸೀಮಂತ ನೆರವೇರಿಸುವ ಮೂಲಕ ಠಾಣೆಯ ಹಿರಿಯ ಅಧಿಕಾರಿಗಳು, ಸಹೋದ್ಯೋಗಿಗಳು ಸಂಭ್ರಮಿಸಿದರು.

Advertisement

ಇದು ಹುಣಸೂರು ನಗರ ಠಾಣೆಯಲ್ಲಿ ನೆರವೇರಿದ ಸೀಮಂತ ಕಾರ್ಯಕ್ರಮ.

ಠಾಣೆಯ ಸಭಾಂಗಣದಲ್ಲಿ ಮಹಿಳಾ ಪೇದೆ ಹೇಮಾವತಿಗೆ ಇನ್ಸ್ ಪೆಕ್ಟರ್ ದೇವೇಂದ್ರರವರ ನೇತೃತ್ವದಲ್ಲಿ ಮಹಿಳಾ ಸಹೋದ್ಯೋಗಿಗಳು ಒಟ್ಟಾಗಿ ಸೇರಿ ಅರಶಿನ- ಕುಂಕುಮ ಹಚ್ಚಿ, ಹಸಿರುಬಳೆ ತೊಡಿಸಿದರು.

ರೇಷ್ಮೆ ಸೀರೆ, ಅಕ್ಕಿ, ಫಲ ತಾಂಬೂಲ ಸಹಿತ ಉಡಿ ತುಂಬುವ ಶಾಸ್ತ್ರ ನೆರವೇರಿಸಿ, ಆರತಿ ಬೆಳಗಿ, ಅಕ್ಷತೆ ಹಾಕಿ ಶುಭ ಹಾರೈಸಿದರು. ಪುರುಷ ಸಹೋದ್ಯೋಗಿ ಮಿತ್ರರು ಸಹ ಹಾಜರಿದ್ದು, ತಮ್ಮ ಸಹೋದ್ಯೋಗಿಗೆ ಶುಭಹಾರೈಸಿದರು.

Advertisement

ಈ ವೇಳೆ ಮಾತನಾಡಿದ ಇನ್ಸ್ ಪೆಕ್ಟರ್ ದೇವೇಂದ್ರ, ಕುಟುಂಬವನ್ನು ಮರೆತು ಸಾರ್ವಜನಿಕರ ಸೇವೆ ಸಲ್ಲಿಸಲು ಬಂದಿರುವ ಮಹಿಳಾ ಪೇದೆಗಳನ್ನು ಕುಟುಂಬದ ಸದಸ್ಯರಂತೆ ಕಾಣುವುದು ನಮ್ಮ ಕರ್ತವ್ಯವೂ ಹೌದು. ಇಷ್ಟು ದಿನಗಳ ಕಾಲ ನಮ್ಮೊಂದಿಗೆ ಕೆಲಸ ನಿರ್ವಹಿಸಿ ಇದೀಗ ಹೆರಿಗೆ ರಜೆಯಲ್ಲಿ ತೆರಳುತ್ತಿರುವ ಹೇಮಾವತಿಯವರನ್ನು ಎಲ್ಲ ಸಿಬ್ಬಂದಿಗಳು ಒಟ್ಟಾಗಿ ಸೇರಿ ಸತ್ಕರಿಸಿ ಸಹೋದರತ್ವ ಮೆರೆದಿದ್ದಾರೆಂದು ಸ್ಮರಿಸಿ, ಉಡಿ ತುಂಬುವ ಕಾರ್ಯ ನೆರವೇರಿಸಿ ಶುಭ ಹಾರೈಸಿದರು. ನಂತರ ಎಲ್ಲರೂ ಒಟ್ಟಿಗೆ ಹೋಳಿಗೆ ಊಟ ಮಾಡಿದರು.

ಈ ವೇಳೆ ಎಸ್.ಐ.ಗಳಾದ ತಮ್ಮೇಗೌಡ, ತಿಮ್ಮರಾಜನಾಯಕ, ನಾಗಯ್ಯ, ಸಿಬ್ಬಂದಿಗಳಾದ ಮನೋಹರ್, ಮಂಜುನಾಥ, ಪ್ರಸಾದ್, ಶಿವಕುಮಾರಿ, ರಾಜೇಗೌಡ, ಯೋಗೇಶ್, ಗಿರೀಶ್, ಮಹೇಶ್, ವಿದ್ಯಾ, ಲಿಕಿತ್, ಅನಿಲ್ ಮತ್ತಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next