Advertisement

ವಿಭಿನ್ನ ಕಲ್ಪನಾ ಸ್ತರದೆಡೆಗೆ ಕೊಂಡೊಯ್ದ ಮಕ್ಕಳ ಕರಕುಶಲ ಮೇಳ

12:45 AM Jan 21, 2020 | Sriram |

ಬಿದ್ಕಲ್‌ಕಟ್ಟೆ: ಬಿದ್ಕಲ್‌ಕಟ್ಟೆ ಕರ್ನಾಟಕ ಪಬ್ಲಿಕ್‌ ಸ್ಕೂಲ್‌ನ ಪ್ರಾಥಮಿಕ ಶಾಲಾ ವಿಭಾಗದ 6-7ನೇ ತರಗತಿಯ ವಿದ್ಯಾರ್ಥಿಗಳ ಮೀನಾ ಕ್ಲಬ್‌ ಸಹಯೋಗದಲ್ಲಿ ಜ.19 ರಂದು ನಡೆದ ಕರಕುಶಲ ವಸ್ತುಗಳ ಪ್ರದರ್ಶನ ಗಮನ ಸೆಳೆಯಿತು. ಇದರಲ್ಲಿ ನೂರೈವತ್ತಕ್ಕೂ ಹೆಚ್ಚು ವಿವಿಧ ವಿನ್ಯಾಸದ ಕಲಾಕೃತಿಗಳು ಪ್ರದರ್ಶಿತಗೊಂಡಿದ್ದವು.

Advertisement

ವಿದ್ಯಾರ್ಥಿಗಳ ಸೃಷ್ಟಿ
ಶಾಲೆ ವೇಳಾಪಟ್ಟಿಯಲ್ಲಿ ಸಾಮಾಜಿಕ ಉಪಯುಕ್ತ ಉತ್ಪಾದನೆ ಕಾರ್ಯ (ಸಾ.ಉ.ಉ.ಕಾ.)ಕ್ಕೆ ವಾರದಲ್ಲಿ ಒಂದು ಅವಧಿ ನಿಗದಿಯಾಗಿದ್ದು, ಪ್ರತಿ ವಿದ್ಯಾರ್ಥಿ ಶಿಕ್ಷಕರ ಮಾರ್ಗದರ್ಶನ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಕಲಾತ್ಮಕ ಉಪಯುಕ್ತ ವೀಡಿಯೋಗಳನ್ನು ವೀಕ್ಷಿಸಿ ಅನಂತರ ಸ್ವಂತ ಕಲಾಕೃತಿಗಳನ್ನು ರೂಪಿಸಿದ್ದಾರೆ.

ನೈಜ ವಸ್ತುಗಳನ್ನು ಮೀರಿಸುವ ಪ್ರತಿಕೃತಿ
ನಿರುಪಯುಕ್ತ ವಸ್ತು ಗಳನ್ನೇ ಬಳಸಿಕೊಂಡು ವೈವಿಧ್ಯಮಯ ಆಟಿಕೆಗಳು, ಆಕೃತಿಗಳು, ಹೂಗುತ್ಛ, ಪೆನ್‌ ಸ್ಟಾಂಡ್‌, ಆಲಂಕಾರಿಕ ವಸ್ತುಗಳನ್ನು ರಚಿಸಿದ್ದಾರೆ. 6 ತಂಡಗಳಲ್ಲಿ 150ಕ್ಕೂ ಹೆಚ್ಚು ಮಾದರಿಗಳನ್ನು ರಚಿಸಲಾಗಿದ್ದು, ಅವುಗಳ ಮೌಲ್ಯಕ್ಕೆ ತಕ್ಕಂತೆ ಅಂಕಗಳನ್ನು ನೀಡಿ ವಿದ್ಯಾರ್ಥಿಗಳನ್ನು ಉತ್ತೇಜಿಸಲಾಗಿದೆ.

ಈ ಸಂದರ್ಭದಲ್ಲಿ ದೆ„ಹಿಕ ಶಿಕ್ಷಣ ಶಿಕ್ಷಕರಾದ ಉದಯಕುಮಾರ್‌ ಶೆಟ್ಟಿ, ಸಹಶಿಕ್ಷಕರಾದ ಪುಷ್ಪಾ, ಸತೀಶ್‌ ಶೆಟ್ಟಿಗಾರ್‌, ರಮಣಿ, ಚಿತ್ರಾಕುಮಾರಿ, ಶಂಕರ ದೇವಾಡಿಗ, ಪುರುಷೋತ್ತಮ, ಅತಿಥಿ ಶಿಕ್ಷಕಿಯರಾದ ನಂದಿನಿ, ನಾಗರತ್ನ, ಭಾರತಿ, ಅವಕಾಶ ಫೌಂಡೇಶನ್‌ ಶಿಕ್ಷಕಿ ಪವಿತ್ರಾ, ಪೂರ್ವ ಪ್ರಾಥಮಿಕ ಶಿಕ್ಷಕಿಯರಾದ ದೀಪಿಕಾ, ಸೌಮ್ಯಾ ಉಪಸ್ಥಿತರಿದ್ದರು.

ಸಂಪೂರ್ಣ ಯಶಸ್ವಿ
ಮಕ್ಕಳಲ್ಲಿ ಏಕಾಗ್ರತೆ, ಕೌಶಲ ವೃದ್ಧಿಸುವುದಕ್ಕೆ ಇಂತಹ ವಿಭಿನ್ನ ಕಾರ್ಯ ಚಟುವಟಿಕೆಗಳು ಸಹಕಾರಿ. ಪ್ರತೀ ವರ್ಷ ಮಕ್ಕಳಿಗೆ ಈ ಅಪೂರ್ವ ಅವಕಾಶ ಕಲ್ಪಿಸಿದ ಹಿನ್ನೆಲೆಯಲ್ಲಿ ಪ್ರದರ್ಶನ ಸಂಪೂರ್ಣ ಯಶಸ್ವಿಯಾಗಿದೆ.
-ನಾಗರತ್ನ. ಮುಖ್ಯೋಪಾಧ್ಯಾಯಿನಿ, ಕರ್ನಾಟಕ ಪಬ್ಲಿಕ್‌ ಸ್ಕೂಲ್‌

Advertisement

ಇತರರಿಗೆ ಪ್ರೇರಣೆ
ಮಕ್ಕಳ ಮನಸ್ಸು
ಮತ್ತು ಭಾವನೆಗಳಿಗೆ ಪೂರಕವಾಗಿ ವೇದಿಕೆ ಕಲ್ಪಿಸುವ ನಿಟ್ಟಿನಿಂದ ಸಂಸ್ಥೆ ನಿರಂತರವಾಗಿ ಪಠ್ಯೇತರ ಚಟುವಟಿಕೆಗೂ ಸಮಾನ ಅವಕಾಶ ಕಲ್ಪಿಸುತ್ತದೆ. ವಿದ್ಯಾರ್ಥಿಗಳು ಇದರಲ್ಲಿ ತೊಡಗಿಸಿಕೊಳ್ಳುವುದರಿಂದ ಇತರರಿಗೂ ಪ್ರೇರಣೆಯಾಗುತ್ತದೆ.
-ಸತೀಶ್‌ ಶೆಟ್ಟಿಗಾರ ಜಪ್ತಿ, ಸಹಶಿಕ್ಷಕರು, ಕರ್ನಾಟಕ ಪಬ್ಲಿಕ್‌ ಸ್ಕೂಲ್‌

Advertisement

Udayavani is now on Telegram. Click here to join our channel and stay updated with the latest news.

Next