Advertisement
“ಮುಂಬೈ ಇಂಡಿಯನ್ಸ್ ತಂಡವನ್ನು ಪ್ಲೇ ಆಫ್ಗೆ ತಂದವನೂ ನಾನೇ, ಮುಂಬೈಯನ್ನು ಕೂಟದಿಂದ ಹೊರದಬ್ಬಿದವನೂ ನಾನೇ’ ಎಂದು ಗಿಲ್‌ಗೆ ಅನ್ವಯಿಸಿದ ಹೇಳಿಕೆ ವೈರಲ್ ಆಗಿತ್ತು. ಆದರೆ ಮೋಹಿತ್ ಶರ್ಮ ಸಾಧನೆ ಗಿಲ್ ಸಾಹಸಕ್ಕೆ ಸರಿಸಮನಾಗಿತ್ತು ಎಂಬುದನ್ನು ಮರೆಯುವಂತಿಲ್ಲ.
ಮೋಹಿತ್ ಶರ್ಮ ಅವರದು “ಬೆಸ್ಟ್ ಕಮ್‌ಬ್ಯಾಕ್ ಸ್ಟೋರೀಸ್’ ಎಂಬುದಾಗಿ ಮಾಜಿ ಕೀಪರ್ ಪಾರ್ಥಿವ್ ಪಟೇಲ್ ಬಣ್ಣಿಸಿದ್ದಾರೆ. “ಈ ಟ್ರ್ಯಾಕ್ ಮೇಲೆ 233 ರನ್ನನ್ನೂ ಚೇಸ್ ಮಾಡಬಹುದು ಎಂದು ನಾವು ಮಾತಾಡಿಕೊಳ್ಳುತ್ತಿದ್ದೆವು. ಸೂರ್ಯಕುಮಾರ್ ಇರುವಷ್ಟು ಹೊತ್ತು ಮುಂಬೈ ಮೇಲೆ ನಿರೀಕ್ಷೆ ಇರಿಸಲಾಗಿತ್ತು. ಆದರೆ ಮೋಹಿತ್ ಶರ್ಮ ಇದನ್ನು ತಲೆಕೆಳಗಾಗಿಸಿದರು. 5 ವಿಕೆಟ್ ಉರುಳಿಸಲು ಅವರು 4 ಓವರ್‌ಗಳ ಕೋಟಾವನ್ನೂ ತೆಗೆದುಕೊಳ್ಳಲಿಲ್ಲ’ ಎಂಬುದು ಪಾರ್ಥಿವ್ ಅವರ ಅಚ್ಚರಿಯ ಉದ್ಗಾರ. “2022ರ ಹರಾಜಿನಲ್ಲಿ ಮೋಹಿತ್ ಶರ್ಮ ಯಾರಿಗೂ ಬೇಡವಾಗಿದ್ದರು. ಕೇವಲ ನೆಟ್ ಬೌಲರ್ ಆಗಿ ಕಾಣಿಸಿಕೊಳ್ಳಬೇಕಾಯಿತು. ನಾವು ಅದಷ್ಟೋ ಪುನರಾಗಮನದ ಕತೆಗಳನ್ನು ಕೇಳಿದ್ದೇವೆ. ಆದರೆ ಮೋಹಿತ್ ಶರ್ಮ ಅವರ ಕಮ್‌ಬ್ಯಾಕ್ ವಿಶಿಷ್ಟ ಹಾಗೂ ವಿಭಿನ್ನವಾದುದು’ ಎಂದು ಪಾರ್ಥಿವ್ ಪ್ರಶಂಸಿಸಿದ್ದಾರೆ.