ತುಮಕೂರು: ಕೇಂದ್ರದ ಬಜೆಟ್‌ನಲ್ಲಿ ಕಲ್ಪತರು ನಾಡಿಗೆ ಬಂಪರ್ ಕೊಡುಗೆ ನೀಡುತ್ತಾರೆ ಎಂದು ಜನರು ಇಟ್ಟಿದ್ದ ನಿರೀಕ್ಷೆ ಹುಸಿಯಾಗಿದೆ. ಆದರೆ ಜಿಲ್ಲೆಯ ರೈತರ ಪಾಲಿಗೆ ತುಸು ಸಂತಸ ಉಂಟು ಮಾಡಿದ್ದರೂ, ಕಲ್ಪತರು ಜಿಲ್ಲೆಯ ಅಭಿವೃದ್ಧಿಗೆ ಬಜೆಟ್‌ನಲ್ಲಿ ಏನೂ ನೀಡದಿರುವುದು ನಿರಾಸೆಯಾಗಿದೆ.
ರಾಜಧಾನಿ ಬೆಂಗಳೂರಿಗೆ ಉಪನಗರವಾಗಿ ಬೆಳವಣಿಗೆಯಾಗುತ್ತಿರುವ ತುಮಕೂರಿಗೆ ಕೈಗಾರಿಕಾ ಕಾರಿಡಾರ್ ಮತ್ತು ಬೆಂಗಳೂರು- ಮುಂಬೈ ಇಂಡ ಸ್ಟ್ರಿಯಲ್ ಕಾರಿಡಾರ್ ಯೋಜನೆಗಳಿಗೆ ಹೆಚ್ಚಿನ ಅನುದಾನ ಘೋಷಿಸುತ್ತಾರೆ ಎಂಬ ನಿರೀಕ್ಷೆ ಇತ್ತು. ಆದರೆ ಅದು ಹುಸಿಯಾಗಿದೆ. ಆದರೆ ಪ್ರಾದೇಶಿಕ ವಲಯದಲ್ಲಿರುವ ಕೃಷಿ ಉತ್ಪನ್ನಗಳಿಗೆ ಉತ್ತೇಜನ ನೀಡುವ ಘೋಷಣೆಯಿಂದ ಜಿಲ್ಲೆಯ ರೈತರಿಗೆ ನೆರವಾಗಲಿದೆ.
ರೈತರ ಆದಾಯ ವೃದ್ಧಿಗೆ ನೆರವು: ಜಿಯೋ ಗ್ರಾಫಿಕಲ್ ಐಡೆಂಟಿಫಿಕೇಷನ್‌ಗೆ ಒತ್ತು ನೀಡುರು ವುದರಿಂದ ಜಿಲ್ಲೆಯ ತಿಪಟೂರು ಕೊಬ್ಬರಿ, ಹುಣಸೆ, ಹಲಸು ದೇಶ-ವಿದೇಶಗಳಲ್ಲಿ ಪ್ರಸಿದ್ಧಿ ಪಡೆದಿರುವುದರಿಂದ ಸಹಾಯಕವಾಗಿದೆ. ಸ್ಪೆಷಲ್ ಎಕನಾಮಿಕ್ ಝೋನ್‌ಗೆ ಒತ್ತು ನೀಡಿರುವುದ ರಿಂದ ಜಿಲ್ಲೆಯಲ್ಲಿ ತೆಂಗು ವಿಶೇಷ ಆರ್ಥಿಕ ವಲಯ, ಆರ್ಟಿಸಾನ್, ಮಿಲ್ಲೆಟ್ಸ್, ಸ್ಟಾರ್ಟ್ ಅಪ್ ವಿಶೇಷ, ಆಯುಷ್ ಉತ್ಪನ್ನಗಳ ವಿಶೇಷ ಆರ್ಥಿಕ ವಲಯ ಸ್ಥಾಪಿಸಲು ಅವಕಾಶ ಸಿಕ್ಕಂತಾಗಿದೆ. ಇದರಿಂದ ಜಿಲ್ಲೆಯ ರೈತರ ಆದಾಯ ವೃದ್ಧಿ ಯಾಗಲು ನೆರವಾಗಲಿದೆ. ಜಿಲ್ಲೆಯ ಸಂಸದ ಜಿ.ಎಸ್.ಬಸವರಾಜ್ ಯಾವ ರೀತಿಯಲ್ಲಿ ಯೋಜನೆ ತರಲು ಪ್ರಯತ್ನಿ ಸುತ್ತಾರೆ ಎಂಬುದು ಕಾದು ನೋಡಬೇಕಾಗಿದೆ.
ಗುಡಿ ಕೈಗಾರಿಕೆ ಪ್ರಸ್ತಾಪ ಇಲ್ಲ: ತುಮಕೂರು ಕೈಗಾರಿಕಾ ಕ್ಷೇತ್ರದಲ್ಲಿ ಹೆಚ್ಚು ಬೆಳವಣಿಗೆಗೆ ಪೂರಕ ವಾಗುವಂತೆ ವಿಶ್ವಮಟ್ಟದಲ್ಲಿ ತುಮಕೂರು ಬೆಳವಣಿಗೆಯಾಗುವಂತೆ ಗುಡಿ ಕೈಗಾರಿಕೆಗಳಿಗೆ ಹೆಚ್ಚು ಉತ್ತೇಜನ ನೀಡುವ ಯೋಜನೆಗಳು ಜಿಲ್ಲೆಗೆ ಬರುತ್ತವೆ ಎಂದು ಜನರಲ್ಲಿ ಅಪಾರ ನಿರೀಕ್ಷೆ ಇತ್ತು. ಆದರೆ ಬಜೆಟ್‌ನಲ್ಲಿ ರಾಜ್ಯದ ಯೋಜನೆ ಗಳು ಹಾಗೂ ಜಿಲ್ಲೆಯ ಯೋಜನೆ ಬಗ್ಗೆ ಯಾವುದೇ ಪ್ರಸ್ತಾಪ ಆಗಿಲ್ಲ. ಈ ಬಜೆಟ್‌ನಲ್ಲಿ ಜಿಲ್ಲೆಯ ತೆಂಗು ಬೆಳೆಗಾರರಿಗೆ ವಿಶೇಷ ಯೋಜನೆ ರೂಪಿಸುತ್ತಾರೆ ಎಂದು ನಿರೀಕ್ಷಿ ಸಲಾಗಿತ್ತು. ಆದರೆ ಅದು ಹುಸಿಯಾಗಿದೆ. ರೈಲ್ವೆ ಯೋಜನೆಗಳ ಅಭಿವೃದ್ಧಿ ಕುರಿತಂತೆ ವಿಶೇಷ ಆದ್ಯತೆ ನೀಡು ತ್ತಾರೆಂದು ನಿರೀಕ್ಷಿಸಲಾಗಿತ್ತು. ಈ ಎಲ್ಲಾ ಯೋಜನೆಗಳು ಜಿಲ್ಲೆಯ ಜನರಿಗೆ ನಿರೀಕ್ಷಿತ ಮಟ್ಟದಲ್ಲಿ ಆಗಿಲ್ಲ ಎನ್ನುವ ನೋವಿದೆ.
ಆದರೂ ಗ್ರಾಮೀಣ ಪ್ರದೇಶದ, ಕುಶಲ ಕರ್ಮಿಗಳಿಗೆ ವಿಶೇಷ ನೆರವು, ಉದ್ಯಮಿಗಳಿಗೆ, ಮಹಿಳಾ ಉದ್ಯಮಿಗಳಿಗೆ, ಹೊಸದಾಗಿ ಉದ್ಯಮ ಮಾಡುವವರಿಗೆ ವಿಫುಲ ಅವಕಾಶ ಕಲ್ಪಿಸಿರುವುದು, ಗ್ರಾಮೀಣ ಪ್ರದೇಶದಲ್ಲಿ ಸುಮಾರು 10000 ಕೃಷಿ ಉತ್ಪಾದನಾ ಸಂಘಗಳ ಸ್ಥಾಪನೆ, ಕಾಮನ್ ಸ್ಪೆಸಿಲಿಟಿ ಸೆಂಟರ್‌ಗಳ ಸ್ಥಾಪನೆ, ಸ್ಟಾರ್ಟ್ ಅಪ್ ಉದ್ಯಮಿಗಳಿಗೆ ವಿಶೇಷ ಸೌಲಭ್ಯ ನೀಡಿರು ವುದುಉತ್ತಮ ಬೆಳವಣಿಗೆಯಾಗಿದೆ.
ಸಂತಸ: 2022ರೊಳಗೆ ನಿಗದಿತ ಅವಧಿಯಲ್ಲಿ ಪ್ರತಿಯೊಬ್ಬರಿಗೂ ವಾಸದ ಮನೆ, ಗ್ಯಾಸ್, ಶೌಚಗೃಹ, ವಿದ್ಯುತ್ ಸಂಪರ್ಕ, ಪ್ರತಿ ಹಳ್ಳಿಯ ಘನತ್ಯಾಜ್ಯ ವಸ್ತು ಕಡೆ ಗಮನ, ಗ್ರಾಮೀಣ ಪ್ರದೇಶಗಳಿಗೆ ಡಿಜಿಟಲ್ ಇಂಡಿಯಾ, ಪ್ರತಿ ಹಳ್ಳಿಗೂ ರಸ್ತೆ, ಮಹಿಳೆಯರಿಗೆ ಒ.ಡಿ ಸೌಲಭ್ಯ, ಒಂದು ಲಕ್ಷದವರಿಗೆ ಮಹಿಳೆಯರಿಗೆ ಸಾಲ, ರೈಲ್ವೇ, ಸಬ್‌ಅರ್ಬನ್ ಮತ್ತು ಮೆಟ್ರೋ ರೈಲು, ರಾಷ್ಟ್ರೀಯ ಹೆದ್ದಾರಿಗಳಿಗೆ ಆದ್ಯತೆ, ಜೊತೆಗೆ ಸಾಲ ಪಡೆದು ದಿವಾಳಿ ಮಾಡುತ್ತಿರುವವರಿಗೆ ಕಡಿವಾಣ. ಇ-ವೆಹಿಕಲ್ಗೆ ಪ್ರೋತ್ಸಾಹಧನ ನೀಡಿರುವುದು ಉತ್ತಮ ಬೆಳವಣಿಗೆ.
ನದಿ ಜೋಡಣೆ ಯೋಜನೆ ವಿಷಯವಿಲ್ಲ: ಬಜೆಟ್‌ನಲ್ಲಿ ಜನ ನಿರೀಕ್ಷಿಸಿದ್ದ ನದಿ ಜೋಡಣೆ ಯೋಜನೆ ಬಗ್ಗೆ ಎಲ್ಲೂ ಪ್ರಸ್ತಾಪ ಮಾಡಿಲ್ಲ. ಎಲ್ಲಾ ವಿಷಯಗಳಲ್ಲೂ ಒಂದು ದೇಶ- ಒಂದು ಗ್ರಿಡ್ ಎನ್ನುವ ಮೋದಿಯವರು ವಾಟರ್‌ಗ್ರಿಡ್ ಬಗ್ಗೆ ಚಕಾರವೆತ್ತಿಲ್ಲದೆ ಇರುವ ಬಗ್ಗೆ ಚರ್ಚೆ ನಡೆಯು ತ್ತಿದೆ. ಬಜೆಟ್‌ನಲ್ಲಿ ಪೆಟ್ರೋಲ್, ಡೀಸಲ್ ಸುಂಕ ಏರಿಸಿರುವುದು ಬಡವರು ಮಧ್ಯಮ ವರ್ಗದ ಜನರ ಜೇಬಿಗೆ ನೇರ ಕತ್ತರಿ ಬೀಳಲಿದ್ದು, ಇದರ ಬಿಸಿ ನೇರವಾಗಿ ಎಲ್ಲಾ ವರ್ಗದ ಜನರಿಗೂ ತಟ್ಟಲಿದೆ. ಆದರೂ ಮೋದಿ ಸರ್ಕಾರ ಬಡವರು, ಮಧ್ಯಮ ವರ್ಗದವರು, ಕೃಷಿಕರು, ಕಾರ್ಮಿ ಕರಿಗೆ, ಸಣ್ಣ ವರ್ತಕರು, ಯುವಕರು, ಮಹಿಳೆ ಯರೂ ಸೇರಿದಂತೆ ಎಲ್ಲಾ ವರ್ಗದ ಜನರಿಗೆ ಅನುಕೂಲವಾಗುವ ಯೋಜನೆ ಪ್ರಕಟಿಸಿರುವುದು ಜನರಲ್ಲಿ ಸಂತಸ ಮೂಡಿಸಿದೆ.
● ಚಿ.ನಿ.ಪುರುಷೋತ್ತಮ್