Advertisement

ಅಲೆಗಳ ಮೇಲೆ ಕುಣಿವ ಬಾಲೆ

04:15 PM Mar 08, 2018 | Team Udayavani |

ಅಜ್ಜನ ಕೈ ಹಿಡಿದು ಸಮುದ್ರ ದಂಡೆಯಲ್ಲಿ ಆಡುತ್ತಿದ್ದ ಹುಡುಗಿಗೆ ಸಮುದ್ರವನ್ನು ಕಂಡರೆ ಅತೀವ ಪ್ರೀತಿ. ಒಂದರ ಹಿಂದೆ, ಒಂದರಂತೆ ಬರುವ ಆಲೆಗಳ ಮೇಲೆ ಆಡಿ ನಲಿದು ನರ್ತಿಸಬೇಕೆಂಬ ಹಂಬಲ ಅದಾಗಲೇ ಹುಟ್ಟಿತ್ತು. ಅದೇ ಹಂಬಲವೇ ಅವಳನ್ನು ಸರ್ಫಿಂಗ್‌ ಕ್ಷೇತ್ರಕ್ಕೆ ಕರೆ ತಂದಿತ್ತು!

Advertisement

10ನೇ ವರ್ಷದಲ್ಲೇ ಸರ್ಫಿಂಗ್‌ ಕ್ಷೇತ್ರಕ್ಕೆ ಪದಾರ್ಪಣೆ ಮಾಡಿದ ತನ್ವಿ ಜಗದೀಶ್‌ ಮೂಲತಃ ಮೂಲ್ಕಿಯವರು. “ನೀರಿನ ಮೇಲೆ ನನಗಿದ್ದ ಮೋಹವೇ, ಸರ್ಫಿಂಗ್‌ ಸ್ವಾಮಿಯನ್ನು ಸಂಪರ್ಕಿಸುವಂತೆ ಮಾಡಿತು. ಅಲ್ಲಿ ಸಿಕ್ಕ ಸರ್ಫಿಂಗ್‌ ದೀಕ್ಷೆ, ನನ್ನ ಬದುಕಿನ ದಿಕ್ಕನ್ನೇ ಬದಲಿಸಿತು’ ಎನ್ನುತ್ತಾರೆ ತನ್ವಿ. ಸಮುದ್ರ ತಣ್ಣಗೆ ಇದ್ದಾಗಲೂ, ಉಬ್ಬರ ಜಾಸ್ತಿ ಇದ್ದಾಗಲೂ, ಈಕೆಯ ಸಾಹಸ ಮೈ ರೋಮಾಂಚನಗೊಳಿಸುವಂಥದ್ದು.

ಮಂಗಳೂರಿನ ಕೊಡಿಯಾಲ್‌ ಬೈಲಿನ ಶಾರದಾ ವಿದ್ಯಾಲಯದಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ ಬರೆಯುತ್ತಿರುವಂತೆಯೇ ಓಲಿಂಪಿಕ್ಸ್‌- 23 ಇಂಡಿಯನ್‌ ಸ್ಟಾಂಡ್‌ಅಪ್‌ನಲ್ಲಿ ಪಾಲ್ಗೊಳ್ಳುವ ಕನಸು ಹೆಣೆಯುತ್ತಿದ್ದಾರೆ ತನ್ವಿ. ಈಗಾಗಲೇ ಸರ್ಫಿಂಗ್‌ನಲ್ಲಿ ರಾಜ್ಯ, ದೇಶ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಉತ್ತಮ ಪ್ರದರ್ಶನ ನೀಡಿರುವ ಈಕೆ, 5 ಬಾರಿ ರಾಷ್ಟ್ರಮಟ್ಟದಲ್ಲಿ ವಿಜಯ ಪತಾಕೆ ಹಾರಿಸಿದ್ದಾರೆ. ಜತೆಗೆ ಇಂಟರ್‌ನ್ಯಾಷನಲ್‌ ಗ್ರೋಮ್‌ ಆಫ್ ಇಯರ್‌ 2017ನ ವಿನ್ನರ್‌ ಕೂಡ ಆಗಿದ್ದರು.

ತನ್ವಿಗೆ ಆರಂಭದ ತರಬೇತಿ, ಮೈಸೂರಿನ ಶಮಂತ್‌ ಕುಮಾರ್‌ರಿಂದ ಸಿಕ್ಕಿತು. ಬಪ್ಪನಾಡಿನ “ಮಂತ್ರ ಸರ್ಫಿಂಗ್‌ ಕ್ಲಬ್‌’ ಮೂಲಕ ಕಿಶೋರ್‌ ಮಾರ್ಗದರ್ಶನದಲ್ಲಿ ಸರ್ಫಿಂಗ್‌ನಲ್ಲಿ ತೊಡಗಿಸಿಕೊಂಡಿದ್ದಾರೆ. ನವೆಂಬರ್‌ ವೇಳೆಗೆ ಬ್ರೆಜಿಲ್‌ನಲ್ಲಿ ನಡೆಯುತ್ತಿರುವ ಅಂತಾರಾಷ್ಟ್ರೀಯ ಮಟ್ಟದ ಸ್ಪರ್ಧೆಗೆ ಇವರು ಆಯ್ಕೆಯಾಗಿದ್ದು, ಪದಕ ಬಾಚಿಕೊಳ್ಳುವ ಭರವಸೆ ಹೊಂದಿದ್ದಾರೆ.
   ಚೆನ್ನೈ,ಸಸಿ ಹಿತ್ಲು, ಯುಎಸ್‌ಎ ಗಳಲ್ಲಿ ತನ್ವಿ ಸರ್ಫಿಂಗ್‌ ತರಬೇತಿ ಪಡೆದು ಪಳಗಿದ್ದಾರೆ. “ಮಂತ್ರ ಸರ್ಫಿಂಗ್‌ ಕ್ಲಬ್‌ನಲ್ಲಿ ಆರಂಭದಲ್ಲಿ ವಿದೇಶಿಯರೇ ಹೆಚ್ಚಿದ್ದರು. ಆದರೆ, ಈಗ ನಮ್ಮ ದೇಶದವರೂ ಹೆಚ್ಚಾಗಿ ಕಲಿಯಲು ಬರುತ್ತಿದ್ದಾರೆ. ಆಸ್ಟ್ರೇಲಿಯಾದ ಇಂಡಿಯನ್‌ ಸೀಜಿ ಐಸ್‌ಲ್ಯಾಂಡ್‌ ನಲ್ಲಿ 2016ರಲ್ಲಿ ನಡೆದ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಭಾರತವನ್ನು ಪ್ರತಿನಿಧಿಸುವ ಅವಕಾಶ ಸಿಕ್ಕಿದ್ದು ನನ್ನ ಬದುಕಿನ ಅವಿಸ್ಮರಣೀಯ ಘಟನೆ’ ಎನ್ನುತ್ತಾರೆ ಅವರು.

“ಸರ್ಫಿಂಗ್‌ ಹಾಗೂ ಬೀಚ್‌ ಸ್ವತ್ಛತೆ ಬಗ್ಗೆ ದೇಶಾದ್ಯಂತ ಜನರಲ್ಲಿ ಜಾಗೃತಿ ಮೂಡಿಸುವ ಕನಸು ಹೊತ್ತಿರುವ ತನ್ವಿ, ಆತ್ಮ ವಿಶ್ವಾಸ ಇದ್ದರೆ ಯಾರೂ ಬೇಕಾದರೂ ಈ ಸಾಧನೆ ಮಾಡಬಹುದು. ಆರಂಭದಲ್ಲಿ ನನಗೂ ಎಲ್ಲರೂ ಹೇಳಿದ್ದರು ಹುಡುಗಿಯರಿಗೆ ಇದು ಕಷ್ಟ. ಆದರೆ, ಸಮುದ್ರದ ಮೇಲಿನ ಪ್ರೀತಿ ಎಲ್ಲಾ ಕಷ್ಟವನ್ನೂ ದೂರ ಮಾಡಿತು. ಹುಡುಗಿಯರ ಸಾಮರ್ಥ್ಯದ ಬಗ್ಗೆ ಯಾರೂ ಕೀಳರಿಮೆ ಹೊಂದಬಾರದು’ ಎಂಬುದು ತನ್ವಿ ಸಲಹೆ.

Advertisement

ಕಡಲ ಅಲೆಗಳು ದೇಹ ಮತ್ತು ಮನಸ್ಸನ್ನು ನಿಯಂತ್ರಿಸುವ ಸಾಮರ್ಥ್ಯವನ್ನು ಹೊಂದಿವೆ. ಬದುಕಿನಲ್ಲಿ ಎಷ್ಟೇ ಕಷ್ಟಗಳು ಬರಲಿ. ಸರ್ಫಿಂಗ್‌ಗಾಗಿ ಕಡಲಿಗೆ ಇಳಿದಾ ಕ್ಷಣ ಎಲ್ಲ ಮರೆತೂ ದೂರಾಗುತ್ತವೆ ಎನ್ನುವ ತನ್ವಿ, 2 ಬಾರಿ ವಲ್ಡ್‌ ìಕಪ್‌ನಲ್ಲಿ ಪಾಲ್ಗೊಂಡಿದ್ದರು. ಯುಎಸ್‌ಎನಲ್ಲಿ 3ನೇ ಸ್ಥಾನ ಹಾಗೂ ಸಿಂಗಾಪುರದಲ್ಲಿ 4ನೇ ಸ್ಥಾನ ಪಡೆದು ವಿಶ್ವದ ಗಮನ ಸೆಳೆದರು.

Advertisement

Udayavani is now on Telegram. Click here to join our channel and stay updated with the latest news.

Next