Advertisement

ಕೈರಂಗಳ ಗೋ ಕಳವು ಪ್ರಕರಣ: ಇಂದು ಸಂತ್ರಸ್ತರ ಸಮಾವೇಶ

07:00 AM Apr 03, 2018 | |

ಉಳ್ಳಾಲ: ಕೈರಂಗಳ ಪುಣ್ಯ ಕೋಟಿ ನಗರದ ಅಮೃತಧಾರಾ ಗೋ ಶಾಲೆಯಿಂದ ಹಸುಗಳನ್ನು ಕದ್ದೊಯ್ದವರನ್ನು ಬಂಧಿಸಬೇಕು ಎಂದು ಆಗ್ರಹಿಸಿ ಗೋಶಾಲೆ ಸಮಿತಿ ಅಧ್ಯಕ್ಷ ಟಿ.ಜಿ. ರಾಜಾರಾಮ ಭಟ್‌ ಆರಂಭಿಸಿರುವ ಆಮರಣಾಂತ ಉಪವಾಸ ಸೋಮವಾರ ಎರಡನೇ ದಿನ ಪೂರೈಸಿದ್ದು ಮಠಾಧೀಶರು ಸಹಿತ ಗಣ್ಯರು ಬೆಂಬಲ ಸೂಚಿಸಿದ್ದಾರೆ.

Advertisement

ಎ. 3ರಂದು ಬೆಳಗ್ಗೆ 11ಕ್ಕೆ ಪುಣ್ಯ ಕೋಟಿ ನಗರದಲ್ಲಿ ಜಿಲ್ಲೆಯಾದ್ಯಂತ ಗೋವುಗಳನ್ನು ಕಳೆದುಕೊಂಡವರ ಸಮಾವೇಶ ನಡೆಸಲು ನಿರ್ಧರಿಸಲಾಯಿತು. ಕೊಂಡೆವೂರು ಆಶ್ರಮದ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ ಸತ್ಯಾಗ್ರಹ ನಿರತರನ್ನು ಭೇಟಿ ಮಾಡಿ, ಕೃಷಿಕರ ಜೀವನಾಡಿ ಗೋವುಗಳನ್ನು ಅಪಹರಿಸಲಾಗುತ್ತದೆ. ಈ ಅನ್ಯಾಯದ ವಿರುದ್ಧ, ಗೋಕಳ್ಳರ ವಿರುದ್ಧ ಕ್ರಮ ಕೈಗೊಳ್ಳುವ ವಿಚಾರದಲ್ಲಿ ಸಂಬಂಧಪಟ್ಟ ಇಲಾಖೆ ಕಾರ್ಯಾಚರಣೆ ನಡೆಸಬೇಕು ಎಂದು ಆಗ್ರಹಿಸಿದರು.

ಧರಣಿ ಸ್ಥಳಕ್ಕೆ ಗುರುಪುರ ಶ್ರೀ ವಜ್ರದೇಹಿ ಸ್ವಾಮೀಜಿ, ಬೆಳ್ತಂಗಡಿ ತಾಲೂಕು ಆರ್‌ಎಸ್‌ಎಸ್‌ ಸಹ ಬೌದ್ಧಿಕ್‌ ಪ್ರಮುಖ್‌ ಶ್ಯಾಮಸುದರ್ಶನ, ಕಾಸರಗೋಡು ಜಿಲ್ಲೆಯ ಬಿಜೆಪಿ ಪ್ರಮುಖ ಹರಿಶ್ಚಂದ್ರ ಮಂಜೇಶ್ವರ, ವಿಹಿಂಪ ಪ್ರಮುಖ ಗೋಪಾಲ ಶೆಟ್ಟಿ, ಗೋಪಾಲ್‌ ಕುತ್ತಾರ್‌, ಮಂಗಳೂರು ಹವ್ಯಕ ಮಂಡಲ ಅಧ್ಯಕ್ಷ ಸೇರಾಜೆ ಸುಬ್ರಹ್ಮಣ್ಯ ಭಟ್‌, ತಾ.ಪಂ. ಸದಸ್ಯ ನವೀನ್‌ ಪಾದಲ್ಪಾಡಿ, ಮಂಗಳೂರು ಕ್ಷೇತ್ರ ಬಿಜೆಪಿ ಅಧ್ಯಕ್ಷ ಸಂತೋಷ್‌ ಕುಮಾರ್‌ ರೈ ಬೋಳಿಯಾರ್‌, ಬಜರಂಗ ದಳದ ಕಾಸರಗೋಡು ಜಿಲ್ಲಾ ಸಂಚಾಲಕ ಸುರೇಶ್‌ ಶೆಟ್ಟಿ ಪರಂಕಿಲ, ಮಂಜೇಶ್ವರ ತಾ| ವಿಹಿಂಪ ಕಾರ್ಯದರ್ಶಿ ಗೋವಿಂದಪ್ರಸಾದ್‌, ವಿಜೇಶ್‌ ನಾೖಕ್‌, ಗ್ರಾ.ಪಂ. ಉಪಾಧ್ಯಕ್ಷ ನಿತಿನ್‌ ಗಟ್ಟಿ, ಮಹಿಳಾ ಮಂಡಳಿ, ಕಟ್ಟೆ ಫ್ರೆಂಡ್ಸ್‌ ಬಳಗದವರು ಹಾಗೂ ವಿವಿಧ ಸಂಘ-ಸಂಸ್ಥೆಗಳ ಪ್ರಮುಖರು ಭೇಟಿ ನೀಡಿ ಸತ್ಯಾಗ್ರಹಕ್ಕೆ ಬೆಂಬಲ ಘೋಷಿದರು. ಉಪವಾಸ ನಿರತ ರಾಜಾರಾಮ ಭಟ್‌ ಅವರ ಆರೋಗ್ಯ ತಪಾಸಣೆಯನ್ನು ಸರಕಾರಿ ವೈದ್ಯರು ನಡೆಸಿದರು.

ಪೊಲೀಸರಿಂದ ಮನವೊಲಿಕೆ ಯತ್ನ
ಈ ನಡುವೆ ಧರಣಿ ನಿರತರನ್ನು ಭೇಟಿ ಮಾಡಿದ ಪೊಲೀಸ್‌ ಅಧಿಕಾರಿಗಳು, ಶೀಘ್ರದಲ್ಲಿ ಆರೋಪಿಗಳನ್ನು ಬಂಧಿ ಸುವು ದಾಗಿ ಮತ್ತೂಮ್ಮೆ ಭರವಸೆ ನೀಡಿ, ಉಪವಾಸ ಕೈಬಿಡುವಂತೆ ಮನ ವೊಲಿಸಲು ಯತ್ನಿಸಿದರೂ ಅದು ಫಲ ನೀಡಲಿಲ್ಲ. ಆರೋಪಿಗಳನ್ನು ಬಂಧಿಸುವ ತನಕ ಉಪವಾಸ ಸತ್ಯಾಗ್ರಹ ಮುಂದು ವರಿಸುವುದಾಗಿ ರಾಜಾರಾಮ ಭಟ್‌ ಅವರು ಘೋಷಿದರು. ಇಡೀ ರಾತ್ರಿ ಜಾಗರಣೆಯೊಂದಿಗೆ ಗೋಪ್ರೇಮಿಗಳು ಧರಣಿ ಮುಂದುವರಿಸಿದರು.

ಜಿಲ್ಲೆಯಾದ್ಯಂತ ಆಂದೋಲನ: ಶರಣ್‌ ಪಂಪ್‌ವೆಲ್‌
ವಿಹಿಂಪ ವಿಭಾಗ ಕಾರ್ಯದರ್ಶಿ ಶರಣ್‌ ಪಂಪ್‌ವೆಲ್‌ ಮಾತನಾಡಿ, ಹಿಂದೂ ಸಮಾಜಕ್ಕೆ ಗೋಕಳ್ಳರು ಸವಾಲು ಹಾಕುತ್ತಿದ್ದಾರೆ. ಗೋಕಳ್ಳತನ ಮಾಡುವ ಜತೆಗೆ ತಲವಾರು ಝಳಪಿಸಿ, ಗೋಪ್ರೇಮಿಗಳನ್ನು ಬೆದರಿಸುವ ಕಾರ್ಯ ನಡೆಯುತ್ತಿದೆ. ಪೊಲೀಸರಲ್ಲಿ ಹಲವಾರು ಬಾರಿ ಮನವಿ ಮಾಡಿದರೂ ಪ್ರತಿಭಟಿಸಿದರೂ ನ್ಯಾಯ ಸಿಕ್ಕಿಲ್ಲ. ರಾಜಾರಾಮ ಭಟ್‌ ಅವರಂತೆ ಆಮರಣಾಂತ ಸತ್ಯಾಗ್ರಹಕ್ಕೆ ಹಿಂದೂ ಸಂಘಟನೆಗಳು ಸಾಥ್‌ ನೀಡಲಿದ್ದು ಜಿಲ್ಲೆಯಾದ್ಯಂತ ಆಂದೋಲನ ನಡೆಸಲಾಗುವುದು ಎಂದರು.

Advertisement

ಸಚಿವರ ಮೌನವೇಕೆ
ಉಳ್ಳಾಲ ಮತ್ತು ಕೊಣಾಜೆ ಠಾಣೆ ವ್ಯಾಪ್ತಿಯಲ್ಲಿ ಹಸುಗಳ ದರೋಡೆ ರಾಜಕೀಯ ಪ್ರೋತ್ಸಾಹ ದಿಂದ ರಾಜಾರೋಷವಾಗಿ ನಡೆಯು ತ್ತಿದೆ. ಕೈರಂಗಳ ದಲ್ಲಿ ಕೃತ್ಯ ನಡೆದು ಮೂರು ದಿನ ಗಳಾದರೂ ಇಲ್ಲಿನ ಶಾಸಕ, ಸಚಿವರೂ ಆಗಿರುವ ಯು.ಟಿ. ಖಾದರ್‌ ಸ್ಪಂದಿಸ ದಿರುವುದು ಆರೋಪಿಗಳಿಗೆ ಅವರ ಬೆಂಬಲವನ್ನು ಪುಷ್ಟೀಕರಿಸುತ್ತದೆ ಎಂದು ಆರೋಪಿಸಿದರು.

ಗೋ ಕಳ್ಳತನ ಹೇಯ ಕೃತ್ಯ: ರಾಘವೇಶ್ವರ ಶ್ರೀ
ಉಳ್ಳಾಲ: ಪುಣ್ಯಕೋಟಿ ಗೋಶಾಲೆ ಯಲ್ಲಿ ನಡೆದ ಹೇಯ ಕೃತ್ಯ ನಮ್ಮ ಹೃದಯಕ್ಕೆ ಅತ್ಯಂತ ಘಾಸಿ ತಂದಿದೆ. ಆಯುಧ ಧಾರಿ ಗೋಹಂತಕರು ಹಾಡಹಗಲೇ ರಾಜಾ ರೋಷ ವಾಗಿ ಗೋಶಾಲೆಗೆ ನುಗ್ಗಿ ಗೋವನ್ನು ದರೋಡೆ ಮಾಡಿದ್ದು ಅತ್ಯಂತ ಘೋರ ಘಟನೆಯಾಗಿದೆ. ಈ ಹಿಂದೆ ಶ್ರೀಮಠದ ಗೋಸೇನಾನಿ ಕೇರಳದ ಬದಿಯಡ್ಕದ ಡಾ| ವೈ.ವಿ. ಕೃಷ್ಣಮೂರ್ತಿ ಅವರ ಕೊಟ್ಟಿಗೆಗೆ ನುಗ್ಗಿ ಗೋವನ್ನು ದುರುಳರು ಕದ್ದೊಯ್ದದ್ದನ್ನು ಈ ಘಟನೆ ನೆನಪಿಸುತ್ತದೆ. ಮಾನವೀಯತೆಗೆ ಮಾರಕರಾದ ಇಂತಹ ಕ್ರೂರಿ ಗಳನ್ನು ಕೂಡಲೇ ಪತ್ತೆಹಚ್ಚಬೇಕಿದೆ. ತಪ್ಪಿತಸ್ಥರಿಗೆ ಅತ್ಯುಗ್ರ ಶಿಕ್ಷೆಯನ್ನು ನೀಡಬೇಕೆಂದು ಶ್ರೀ ರಾಮಚಂದ್ರಾಪುರ ಮಠ ಆಗ್ರಹಿಸುತ್ತದೆ ಎಂದು ಶ್ರೀಗಳು ತಿಳಿಸಿದ್ದಾರೆ.

ಗೋಶಾಲೆಯ ಸುತ್ತ ಪೊಲೀಸರು ಜಮಾಯಿಸುವ ಅಗತ್ಯವೇ ಇಲ್ಲ. ತಮ್ಮ ಕರ್ತವ್ಯವನ್ನು ನಿಭಾಯಿಸಲಿ. ಉಪವಾಸ ಕೈಬಿಡಲು ಮನವೊಲಿಸುವ ಬದಲಾಗಿ ಗೋಹಂತಕರನ್ನು ಹುಡುಕಿ ಬಂಧಿಸಲಿ. ಆಗ ತಾನಾಗಿ ಸತ್ಯಾಗ್ರಹ ನಿಂತುಹೋಗುತ್ತದೆ.
ಟಿ.ಜಿ. ರಾಜಾರಾಮ್‌ ಭಟ್‌ ಗೋಶಾಲಾ ಸಮಿತಿ ಅಧ್ಯಕ್ಷ

ಸಾಮೂಹಿಕ ದೀಪಾರ್ಚನೆ
ಗೋಭಕ್ತರಿಂದ 108 ರಾಮತಾರಕ ಮಂತ್ರ ಪಠಣ ಹಾಗೂ  ಸಾಮೂಹಿಕ ದೀಪಾರ್ಚನೆ ನಡೆ ಯಿತು. ಗೋಹಂತಕರ ಬಂಧನಕ್ಕೆ ಪೊಲೀಸರಿಗೆ ಶಕ್ತಿ ನೀಡುವಂತೆ ಪ್ರಾರ್ಥಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next