Advertisement
ಘಟನೆಯಲ್ಲಿ ತುಂಡುಪದವು ನಿವಾಸಿ ದಂಪತಿ ಗಿಲ್ಬರ್ಟ್ ಕಾರ್ಲೊ (78) ಹಾಗೂ ಅವರ ಪತ್ನಿ ಕ್ರಿಸ್ಟಿನಾ ಕಾರ್ಲೊ (70) ಮೃತಪಟ್ಟಿದ್ದರು. ಪ್ರಕರಣಕ್ಕೆ ಸಂಬಂಧಿಸಿ ಗಿಲ್ಬರ್ಟ್ ಅವರ ಅಣ್ಣನ ಪುತ್ರ ನೋರ್ಬಟ್ ತರೇರ ಅವರ ಪೊಲೀಸರಿಗೆ ದೂರು ನೀಡಿದ್ದು, ತಮ್ಮ ಮನೆಯ ಬಳಿವಿರುವ ಜಮೀನಿನಲ್ಲಿ ಬಿದ್ದಿದ್ದ ಬೆಂಕಿಯನ್ನು ನಂದಿಸಲು ಹೋಗಿ ಬೆಂಕಿಯ ಕೆನ್ನಾಲೆಗೆಯ ಜತೆಗೆ ದಟ್ಟ ಹೊಗೆಗೆ ಉಸಿರುಗಟ್ಟಿ ಬಿದ್ದಿದ್ದಾರೆ. ಈ ವೇಳೆ ಅವರ ಮೇಲೆ ಬೆಂಕಿ ಹತ್ತಿ ಸುಟ್ಟು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದಂಪತಿ ವಯೋವೃದ್ಧರಾಗಿರುವ ಜತೆಗೆ ಅನಾರೋಗ್ಯದಿಂದ ಬಳಲುತ್ತಿದ್ದು, ಹೀಗಾಗಿ ಅವರನ್ನು ಸಣ್ಣ ಹೊಗೆ ಆವರಿಸಿದರೂ ಅದರಿಂದ ಹೊರಬರುವುದು ಕಷ್ಟಸಾಧ್ಯ ಎಂಬ ಸ್ಥಿತಿ ಇತ್ತು. ಜತೆಗೆ ಇಬ್ಬರಿಗೂ ವೇಗವಾಗಿ ನಡೆಯುವುದು ಕೂಡ ಕಷ್ಟವಾಗಿರುವುದರಿಂದ ಹೊಗೆಯ ಕಾರಣಕ್ಕೆ ಉಸಿರುಗಟ್ಟಿ ಬಿದ್ದಿರುವ ಸಾಧ್ಯತೆ ಹೆಚ್ಚಿದೆ. ಈ ರೀತಿ ಒಬ್ಬರು ಉಸಿರುಗಟ್ಟಿ ಬಿದ್ದರೂ, ಅವರನ್ನು ಎಬ್ಬಿಸಲು ಹೋಗಿ ಮತ್ತೂಬ್ಬರು ಕೂಡ ಬೆಂಕಿಯಲ್ಲಿ ಸಿಲುಕಿರುವ ಸಾಧ್ಯತೆಯೂ ಇದೆ. ಅಂತ್ಯಸಂಸ್ಕಾರ ಮುಂದೂಡಿಕೆ
ದಂಪತಿಯ ಮೃತದೇಹಗಳನ್ನು ತುಂಬೆ ಆಸ್ಪತ್ರೆಯ ಶೈತ್ಯಾಗಾರ ದಲ್ಲಿಡಲಾಗಿದ್ದು, ಜ. 30
ರಂದು ಅಂತ್ಯಸಂಸ್ಕಾರ ನಡೆಯಲಿದೆ ಎನ್ನಲಾ ಗಿತ್ತು. ಆದರೆ ಗಿಲ್ಬರ್ಟ್ ಅವರ ತಮ್ಮ ಯುಎಸ್
ಎನಲ್ಲಿ ಧರ್ಮಗುರುಗಳಾಗಿ ಕರ್ತವ್ಯ ನಿರ್ವಹಿಸು ತ್ತಿರುವ ಸಿಪ್ರಿಯಾನ್ ಕಾರ್ಲೊ ಅವರು ಜ. 31ರಂದು ಬೆಳಗ್ಗೆ ಆಗಮಿಸಿರುವುದರಿಂದ ಅದೇ ದಿನ ಅಂತ್ಯಸಂಸ್ಕಾರ ನಡೆಯಲಿದೆ. ವಿದೇಶ ದಲ್ಲಿದ್ದ ಪುತ್ರಿಯರು ಜ. 29ರಂದು ಆಗಮಿಸಿದ್ದಾರೆ.
Related Articles
Advertisement