Advertisement

ಪಡಿತರ ಅಕ್ಕಿ ಮಾರುತ್ತಿದ್ದ ವ್ಯಕ್ತಿ ವಿರುದ್ದ ಪ್ರಕರಣ

05:50 PM Feb 09, 2022 | Shwetha M |

ವಿಜಯಪುರ: ಪಡಿತರ ಕಾರ್ಡ್‍ದಾರರಿಗೆ ಹಂಚಿಕೆ ಮಾಡಲು ವಿತರಿಸಿದ್ದ ಪಡಿತರ ಅಕ್ಕಿಯನ್ನು ಅಕ್ರಮವಾಗಿ ಮಾರಾಟ ಮಾಡಲು ಮುಂದಾದ ವೇಳೆ ಅಧಿಕಾರಿಗಳು ದಾಳಿ ಮಾಡಿದ್ದು ಆರೋಪಿ ಪರಾರಿಯಾಗಿದ್ದಾನೆ.

Advertisement

ನಗರದ ಸ್ಪೇಷನ್‌ ಹಿಂದಿನ ರಸ್ತೆಯ ಇಜೇರಿ ಅಗ್ರೋ ಇಂಡಸ್ಟ್ರೀಯಲ್‌ ಗೋದಾಮಿಗೆ ಒಬ್ಬ ಪಡಿತರ ಚೀಟಿದಾರ ದ್ವಿಚಕ್ರ ವಾಹನದಲ್ಲಿ ಬಂದಾಗ ಆಹಾರ ನಿರೀಕ್ಷಕರು ದಾಳಿ ಮಾಡಿದ್ದಾರೆ. ಕೂಡಲೇ ಆರೋಪಿ ಪರಾರಿಯಾಗಿದ್ದಾನೆ.

ಈ ಕುರಿತು ಪ್ರಕಟಣೆ ನೀಡಿರುವ ಜಿಲ್ಲಾಧಿಕಾರಿ ಸುನೀಲಕುಮಾರ, ಆರೋಪಿ ಪಡಿತರ ಚೀಟಿದಾರರ ವಿರುದ್ಧ ಗೋಲಗುಂಬಜ್‌ ಪೋಲಿಸ ಠಾಣೆಯಲ್ಲಿ ಅಕ್ರಮವಾಗಿ ಪಡಿತರ ಮಾರಾಟ ಮಾಡಿದ ಹಾಗೂ ಅದನ್ನು ಖರೀದಿಸಿದ ವ್ಯಕ್ತಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಸರ್ಕಾರ ಅನ್ನಭಾಗ್ಯ, ಅಂತ್ಯೋದಯ ಅನ್ನ ಹಾಗೂ ಬಿಪಿಎಲ್‌ ಪಡಿತರ ಚೀಟಿದಾರರಿಗೆ ಪ್ರತಿ ತಿಂಗಳು ಉಚಿತವಾಗಿ ಆಹಾರ ಧಾನ್ಯಗಳನ್ನು ವಿತರಿಸುತ್ತಿದೆ. ಆದರೆ ಕೆಲವು ಪಡಿತರ ಚೀಟಿದಾರರು ಅಕ್ಕಿಯನ್ನು ಸ್ವಂತಕ್ಕೆ ಬಳಸದೇ ಕಾಳಸಂತೆಯಲ್ಲಿ ಹಣಕ್ಕೆ ಮಾರಾಟ ಮಾಡುತ್ತಿರುವುದು ಕಂಡು ಬಂದಿದೆ ಎಂದು ವಿವರಿಸಿದ್ದಾರೆ. ಪಡಿತರ ಧಾನ್ಯಗಳನ್ನು ಕಾಳಸಂತೆಯಲ್ಲಿ ಮಾರಾಟ ಮಾಡುವುದು ಅಪರಾಧ. ಪಡಿತರ ಚೀಟಿದಾರರು ತಮಗೆ ನೀಡಿದ ಆಹಾರ ಧಾನ್ಯಗಳನ್ನು ಸ್ವಂತಕ್ಕೆ ಮಾತ್ರವೇ ಬಳಸಬೇಕು. ಒಂದೊಮ್ಮೆ ಕಾಳಸಂತೆಯಲ್ಲಿ ಪಡಿತರ ಮಾರಾಟ ಮಾಡಿದವರ ವಿರುದ್ಧ ಪ್ರಕರಣ ದಾಖಲಿಸುವ ಜೊತೆಗೆ ಪಡಿತರ ಚೀಟಿಯನ್ನು ರದ್ದು ಮಾಡುವುದಾಗಿ ಎಚ್ಚರಿಸಿದ್ದಾರೆ

Advertisement

Udayavani is now on Telegram. Click here to join our channel and stay updated with the latest news.

Next