ಅದು ಬೆಳಗಿನ ಆರೂಮುಕ್ಕಾಲು ಗಂಟೆ. ಅದೇತಾನೇ ಕೆಂಬಣ್ಣದ ಓಕುಳಿಯಾಡಿ ಸುಸ್ತಾಗಿ ಚಿನ್ನದ ಹೊದಿಕೆ ಹೊದ್ದ ಸೂರ್ಯ ಉರಿಯುವವನಂತೆ ಕಾಣುತ್ತಿದ್ದ. ಸೆಪ್ಟೆಂಬರ್ 27, 2016. ಅಂದಿಗೆ ಸರಿಯಾಗಿ ನನ್ನ ಮಹಾಪ್ರಬಂಧವನ್ನು ಮೈಸೂರು ವಿಶ್ವವಿದ್ಯಾನಿಲಯಕ್ಕೆ ಸಲ್ಲಿಸಿ ಎರಡು ವರ್ಷಗಳಾಗಿತ್ತು. ಹಾಸಿಗೆಯ ಮೇಲೆ ಕುಳಿತು ನಮ್ಮನೆಯವರಿಗೆ, “”ರೀ ಇವತ್ತಿನ ವಿಶೇಷ ಏನು ಗೊತ್ತಾ?” ಕೇಳಿದೆ. ನಿ¨ªೆಗಣ್ಣÇÉೇ ಅವರು, “”ಗೊತ್ತಿಲ್ಲವಲ್ಲ! ಹೇಳು” ಎಂದರು. “”ಇವತ್ತಿಗೆ ಎರಡು ವರ್ಷ ಆಯ್ತಲಿÅà ಎಷ್ಟು ಟೆನÒನ್ ಇತ್ತಲ್ವಾ? ಹೇಗಾಗುತ್ತೋ ಅಂತ. ಸದ್ಯ ಎಲ್ಲವೂ ಸಲೀಸಾಗಿ ಆಯಿತು” ಎನ್ನುತ್ತಲೇ ನೆನಪಿನ ನೆರಳ ಜೊತೆ ಓಡುತ್ತಿ¨ªೆ ನನಗೆ ನೆನಪಿನದೇ ಸಂಭ್ರಮ.
ನಮ್ಮ ಮನೆ ಇರುವುದು ಮಂಡ್ಯದಲ್ಲಿ. ಅತ್ತ ಸಿಟಿಯೂ ಅಲ್ಲದ ಇತ್ತ ಹಳ್ಳಿಯೂ ಅಲ್ಲದ ಪಟ್ಟಣ ಇದು. ಹಸಿರು. ಹೂಗಳಿಗೆ ಬರವಿಲ್ಲ. ನಿತ್ಯ ಮಲ್ಲಿಗೆ ಸಂಪಿಗೆ ಮುಡಿಗೆ.
ಹಾಲು ತರಲೆಂದು ಮನೆಯ ಹೊರಗೆ ಹೋದರೆ ಹೊಸ ಅತಿಥಿ ನನ್ನ ನಿರೀಕ್ಷಣೆಯಲ್ಲಿದ್ದಂತಿದ್ದರು! ತಕ್ಷಣ ನಾನು ಬಾಲ್ಯಕ್ಕೆ ಓಡಿದೆ. ಎಂತೆಂಥ ಬಣ್ಣಗಳು ಅವುಗಳನ್ನು ಹಿಡಿಯಲೆಂದು ಎಷ್ಟು ದೂರಕ್ಕಾದರೂ ಹಾರಿ, ಓಡಿ. ಊಹೂಂ ಇನ್ನೇನು ಸಿಕ್ಕವು ಎನ್ನುವಷ್ಟರÇÉೇ ತಪ್ಪಿಸಿಕೊಂಡು ಬಿಡುತ್ತಿದ್ದವು ಅವುಗಳಿಗೆ ನಾನು ಕಳ್ಳಹೆಜ್ಜೆಯಿಂದ ಹೋದದ್ದರ ಸುಳಿವು ಹೇಗೆ ಸಿಗುತ್ತದೆ? ಅದೇ ನನ್ನ ಅಚ್ಚರಿ ಅಂದೂ ಇಂದೂ. ಅವುಗಳಿಗೆ ಮುಂದೆ ಇರುವಂತೆ ಹಿಂದೆಯೂ ಕಣ್ಣುಗಳಿರಬಹುದೇ ಎಂದು ಎಣಿಸುತ್ತಿ¨ªೆ ಬಾಲ್ಯದಲ್ಲಿ ಅವೇ ಚಿಟ್ಟೆಗಳು.
ಮಲೇಷಿಯನ್ ಮಾತ್ ಜಾತಿಗೆ ಸೇರುವ ಒಂದು ಚಿಟ್ಟೆ. ಅಂದು ನಮ್ಮ ಮನೆ ಮಂದಾರದ ಅತಿಥಿ. ಕೂಡಲೇ ಮನೆಯೊಳಗೆ ಮೊಬೈಲ್ ತರಲು ಓಡಿದೆ. ಅಯ್ಯೋ, ಅದು ಅಷ್ಟರೊಳಗೆ ಹಾರಿಬಿಟ್ಟರೇ? ಸಂಭ್ರಮದ ಜೊತೆ ಆತಂಕ. ಏಕೆಂದರೆ, ಎಷ್ಟೋ ಬಾರಿ ನಾನು ಕ್ಯಾಮೆರಾ ತರುವುದರೊಳಗೆ ಅವು ಇದ್ದ ಜಾಗದಿಂದ ನಾಪತ್ತೆಯಾಗಿ ರುತ್ತಿದ್ದವು.
ಬಹುಶಃ ನಾಚಿಕೆಯಿರಬೇಕು ಫೋಟೋಗೆ ಪೋಸ್ ಕೊಡಲು!
ಛೇ…ಹಾಗಾಗುವುದು ಸಾಧ್ಯವೇ ಇಲ್ಲ ಎಂಬ ಆತ್ಮವಿಶ್ವಾಸದಲ್ಲಿ ನಿಧಾನವಾಗಿ ಆ ಚಿಟ್ಟೆಯ ಹತ್ತಿರಬಂದು ಕ್ಯಾಮರಾ ಕ್ಲಿಕ್ಕಿಸಿದೆ. ಬಣ್ಣಗಳ ಚೆಲುವ ಹೊದ್ದ ಚಿಟ್ಟೆ.
ಇಷ್ಟೇ ಆಗಿದ್ದರೆ ಸುಮ್ಮನಾಗಿಬಿಡುತ್ತಿ¨ªೆನೋ ಏನೋ. ನಿಧಾನವಾಗಿ ಫೋಕಸ್ ಮಾಡಿದಂತೆಲ್ಲ ಇನ್ನೂ ಆಚ್ಚರಿ. ನನ್ನ ಕಣ್ಣಿಗೆ ಕಾಣದ್ದು ಕ್ಯಾಮರಾ ಕಣ್ಣಲ್ಲಿ! ರವಿ ಕಾಣದ್ದನ್ನು ಕವಿ ಕಂಡ ಎನ್ನುವ ಹಾಗೆ. ಅದರ ತಾಯ್ತನದ ಸಂತಸವೂ ಮೈಯಲ್ಲಿ ರೂಪುಪಡೆಯುತ್ತಿತ್ತು. ಎಷ್ಟೊಂದು ಮೊಟ್ಟೆಗಳು. ಚಿಟ್ಟೆಯ ತಾಯ್ತನ ಸೆರೆ ಹಿಡಿದ ಖುಷಿಯಲ್ಲಿ ಬೀಗುತ್ತಿ¨ªೆ.
ಎರಡೇ ನಿಮಿಷ !
ಎರಡೇ ನಿಮಿಷದಲ್ಲಿ ಆ ಚಿಟ್ಟೆ ಸ್ತಬ್ಧವಾಯಿತು. ನಮ್ಮ ಎಷ್ಟೋ ಜನ ಹೆಣ್ಣುಮಕ್ಕಳು ಅಪೌಷ್ಟಿಕತೆಯಿಂದಲೋ, ಯಾರುಯಾರದೋ ನಿರ್ಲಕ್ಷ್ಯದಿಂದಲೋ, ಅಜಾಗರೂಕತೆಯಿಂದಲೋ, ಅನಿರೀಕ್ಷಿತ ಕಾರಣಗಳಿಂದಲೋ ತಾಯಿಯಾಗುವ/ಹೆರಿಗೆಯ ಸಮಯದÇÉೇ ತೀರಿಹೋಗುತ್ತಾರೆಂದು ಕೇಳಿದ್ದ ನನಗೆ ಹೀಗೆ ಚಿಟ್ಟೆಯೂ ಸಾಯಬಹುದೆಂಬ ಕಲ್ಪನೆ ಇರಲಿಲ್ಲ. ಅದಕ್ಕೆ ಶುಶ್ರೂಷೆ ಮಾಡುವವರು ಯಾರಿ¨ªಾರೆ? ಪ್ರಕೃತಿಯೂ ಒಮ್ಮೊಮ್ಮೆ ಕ್ರೂರಿಯೇ ಅನಿಸಿಬಿಡುತ್ತದೆ. ಇನ್ನು ಆ ಮೊಟ್ಟೆಗಳು ಒಡೆದು ಜೀವ ತಳೆವ ಆ ಮರಿಗಳನ್ನು ಸಲಹುವರು ಯಾರು? ಎಂಬ ಚಣದ ಯೋಚನೆಗೆ “ಎಲ್ಲರನು ಸಲಹುವನು ಇದಕೆ ಸಂಶಯ ಬೇಡ’ ಎನುವ ದಾಸನುಡಿ ಉತ್ತರ ನೀಡಿತು.
– ಶುಭಶ್ರೀ ಪ್ರಸಾದ್