ಭಾನುವಾರ ಪ್ರಸ್‌ಕ್ಲಬ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಉಪಚುನಾವಣೆಯಲ್ಲಿ ಕಣಕ್ಕಿಳಿದಿರುವ ಉತ್ತಮ ಪ್ರಜಾಕೀಯ ಪಕ್ಷ (ಯುಪಿಪಿ)ದ 15 ಕ್ಷೇತ್ರಗಳ ಅಭ್ಯರ್ಥಿಗಳನ್ನು ಪರಿಚಯಿಸಿ ಅವರು, ಮಾತನಾಡಿದರು.
Advertisement
ಕಳೆದ ಬಾರಿಯ ವಿಧಾನ ಸಭಾ ಚುನಾವಣೆಯಲ್ಲಿಯೇ ಚುನಾವಣಾ ಅಖಾಡಕ್ಕೆ ಇಳಿಯಬೇಕು ಎಂದು ಅಂದು ಕೊಂಡಿದ್ದೆ. ಆದರೆ ಹಲವು ಸಿನಿಮಾಗಳಲ್ಲಿ ತೊಡಗಿಕೊಂಡಿದ್ದ ಹಿನ್ನೆಲೆಯಲ್ಲಿ ಆಗಲಿಲ್ಲ. ದಿಢೀರ್ ಎಂದು ಈಗ ಉಪಚುನಾವಣೆ ಬಂದಿದೆ. ಈಗಲೂ ಹಲವು ಸಿನಿಮಾಗಳಿಗೆ ಸಹಿ ಹಾಕಿದ್ದೇನೆ. ಆ ಹಿನ್ನೆಲೆಯಲ್ಲಿಯೇ ಕಣಕ್ಕಿಳಿಯಲು ಆಗುತ್ತಿಲ್ಲ ಎಂದರು.
ಕಳೆದ ಮೂರು ವರ್ಷಗಳಿಂದ ಉತ್ತಮ ಪ್ರಜಾಕೀಯ ಪಕ್ಷ ಕಾರ್ಯ ನಿರ್ವಹಿಸುತ್ತಿದೆ. ದಿಢೀರ್ ಎಂದು ಬಂದಿರುವ ಉಪ ಚುನಾವಣೆಯಲ್ಲೂ ಸ್ಪರ್ಧಿಸಲಿದೆ. ಈಗ ನಡೆಯಲಿರುವ 15 ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳು ಕಣಕ್ಕಿಳಿಯಲಿದ್ದಾರೆ ಎಂದು ಉಪೇಂದ್ರ ಹೇಳಿದರು.
ಈಗಿನ ರಾಜಕೀಯ ವ್ಯವಸ್ಥೆಯ ಬಗ್ಗೆ ನಾನು ಮಾತನಾಡುವುದಿಲ್ಲ. ಆದರೆ ಚುನಾವಣೆಯಲ್ಲಿ ಮತದಾರರು ವ್ಯಕ್ತಿ, ಪಕ್ಷ ನೋಡಿ ಮತ ಹಾಕಬಾರದು.
Related Articles
Advertisement
ನಿವೃತ್ತ ಲೋಕಾಯುಕ್ತ ಸಂತೋಷ ಹೆಗಡೆ ಸೇರಿದಂತೆ ಹಲವರು ಪಕ್ಷದ ಕಾರ್ಯ ವಿಧಾನದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಉತ್ತಮ ಪ್ರಜಾಕೀಯ ಪಕ್ಷಕ್ಕೆ ಜನರೇ ಹೈಕಮಾಂಡ್ ಆಗಿರುವ ಹಿನ್ನೆಲೆಯಲ್ಲಿ ಬೇಡವಾದ ವ್ಯಕ್ತಿಗಳನ್ನು ತಿರಸ್ಕರಿಸುತ್ತಾರೆ ಎಂದು ಹೇಳಿದರು.
ಅಥಣಿ ಕ್ಷೇತ್ರದ ಉತ್ತಮ ಪ್ರಜಾಕೀಯ ಪಕ್ಷದ ಅಭ್ಯರ್ಥಿ ಡಾ. ನಾಗಾಥ ವಿ ಯಾದ್ಗೀರ್ ಮಾತನಾಡಿ, ಭಿನ್ನ ದೃಷ್ಟಿಕೋನದ ರಾಜಕೀಯ ಚಿಂತನೆ ಉಪೇಂದ್ರ ಅವರಲ್ಲಿರುವ ಹಿನ್ನೆಲೆಯಲ್ಲಿ ಉತ್ತಮ ಪ್ರಜಾಕೀಯ ಪಕ್ಷದಿಂದ ಕಣಕ್ಕಿಳಿಯುತ್ತಿರುವುದಾಗಿ ತಿಳಿಸಿದರು.
ಕೊಳಗೇರಿ ಪ್ರದೇಶದಲ್ಲಿ ಬೆಳೆದು ಬಂದಿದ್ದೇನೆಸಾಮಾನ್ಯ ಜನರಿಗೆ ನಿಮ್ಮ ಪಕ್ಷದ ಕಾರ್ಯಸೂಚಿ ಅರ್ಥವಾಗುತ್ತಿಲ್ಲ. ಇನ್ನೂ ಕೊಳಗೇರಿ ನಿವಾಸಿಗಳು ಅರ್ಥ ಮಾಡಿಕೊಳ್ಳುವುದಾದರೂ ಹೇಗೆ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ನಟ ಉಪೇಂದ್ರ, ನಾನೂ ಕೂಡ ಕೊಳಗೇರಿ ಪ್ರದೇಶದಲ್ಲೆ ಬೆಳೆದು ಬಂದಿದ್ದೇನೆ. ಆ ಪ್ರದೇಶದ ನಿವಾಸಿಗಳಿಗೆ ನನ್ನ ಆಲೋಚನೆಗಳು ಬಹಳ ಬೇಗ ಅರ್ಥವಾಗುತ್ತವೆ.ಆದರೆ ಕೆಲ ಪ್ರಜ್ಞಾವಂತರಿಗೆ ಅರ್ಥವಾಗುವುದಿಲ್ಲ ಎಂದರು. 15 ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿ:
ಡಾ.ನಾಗನಾಥ ವಿ ಯಾದ್ಗೀರ್ (ಅಥಣಿ ), ಎ.ಸಚಿನ್‌ಕುಮಾರ್ ( ಕಾಗವಾಡ), ಸಂತೋಷ ನಂದೂರ್ (ಗೋಕಾಕ), ಸುನೀಲ್ ಪವಾರ (ಯಲ್ಲಾಪುರ), ದೇವೇಂದ್ರಪ್ಪ (ಹಿರೇಕೆರೂರು ), ಐ.ಎಚ್.ಪಾಟೀಲ (ರಾಣೆ ಬೆನ್ನೂರು), ಮಹೇಶ ಲಂಬಾಣಿ (ವಿಜಯನಗರ ), ಫಣಿರಾಜ್ (ಚಿಕ್ಕಬಳ್ಳಾಪುರ ), ಎಂ.ಸಂತೋಷ ( ಕೆ.ಆರ್.ಪುರ), ಎಂ.ಮಂಜುನಾಥ್ (ಯಶವಂತಪುರ ), ವಿ.ಆಶಾರಾಣಿ ( ಮಹಾಲಕ್ಷಿ$¾ ಲೇ ಔಟ್), ವಿ.ಕೌಶಿಕ್ ರೆಡ್ಡಿ (ಶಿವಾಜಿ ನಗರ), ಆರ್.ಸುರೇಶ್ ರಾವ್ (ಹೊಸಕೋಟೆ), ಎಚ್.ಎಂ.ಚಂದ್ರೇಗೌಡ (ಕೃಷ್ಣರಾಜಪೇಟೆ ) ಮತ್ತು ದಿವಾಕರ್ ಗೌಡ ( ಹುಣಸೂರು).