Advertisement

Bengaluru: ಮೆಟ್ರೋ ಶೌಚದಲ್ಲಿ ಕ್ಯೂಆರ್‌ ಕೋಡ್‌ ಅಂಟಿಸಿದ್ದ ಉದ್ಯಮಿ ಸೆರೆ

12:09 PM Apr 29, 2024 | Team Udayavani |

ಬೆಂಗಳೂರು: ಮೆಟ್ರೋ ನಿಲ್ದಾಣಗಳ ಪುರುಷರ ಶೌಚಾಲಯದಲ್ಲಿ ಆನ್‌ಲೈನ್‌ ಚಾಕೋಲೇಟ್‌ ಮಾರಾಟದ ಕ್ಯೂಆರ್‌ ಕೋಡ್‌ ಅಂಟಿಸಿದ್ದ ಆರೋ ಪದಡಿ ಅರುಣ್‌ ಎಂಬಾತನನ್ನು ಬ್ಯಾಟ ರಾಯನಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ. ‌

Advertisement

ದೀಪಾಂಜಲಿನಗರ ಮೆಟ್ರೋ ನಿಲ್ದಾಣದ ಭದ್ರತಾ ಉಸ್ತು ವಾರಿ ಚಂದ್ರಶೇಖರಯ್ಯ ಎಂಬವರು ನೀಡಿದ ದೂರಿನ ಮೇರೆಗೆ ಆರೋಪಿ ಯನ್ನು ಬಂಧಿಸಲಾಗಿದೆ. ಸದ್ಯ ಆರೋಪಿ ಜಾಮೀನು ಪಡೆದು ಬಿಡುಗಡೆಯಾಗಿ ದ್ದಾನೆ. ಆರೋಪಿ ಏ.23ರಂದು ದೀಪಾಂಜಲಿನಗರದ ಪುರುಷರ ಶೌಚಾಲಯದ ಗೋಡೆಗಳ ಮೇಲೆ ಇಂಪ್ರಸ್‌ ಯುವರ್‌ ಲವ್ಸ್ ಒನ್ಸ್‌ ವಿತ್‌ ಡಿಸೈರ್‌ ಸ್ಕ್ಯಾನ್‌ ಮೀ-2 ಎಂಬ ಬರಹದ ಕ್ಯೂರ್‌ ಕೋಡ್‌ ಅನ್ನು ಅಂಟಿಸಿದ್ದ. ಅದನ್ನು ಸ್ಕ್ಯಾನ್‌ ಮಾಡಿದಾಗ ಇನ್‌ಸ್ಟ್ರಾಗ್ರಾಂ ಖಾತೆ ತೆರೆದು, ಅದರಲ್ಲಿ ಡಿಸೈರ್‌ ಕಪಲ್‌ ಚಾಕೋಲೇಟ್‌ ಎಂಬ ಸಂದೇಶ ಇದ್ದು, ಅದನ್ನು ಆನ್‌ಲೈನ್‌ನಲ್ಲಿ ಮಾತ್ರ ಖರೀದಿಸಬಹುದಾಗಿದೆ ಎಂಬ ಸಂದೇಶ ಇತ್ತು.

ಅಲ್ಲದೆ, ಅದರಲ್ಲಿ ಅನೇಕ ಪೇಜ್‌ಗಳು ಒಪನ್‌ ಆಗುತ್ತಿತ್ತು. ಸಾರ್ವಜನಿಕರ ದೂರಿನ ಮೇರೆಗೆ ಅದನ್ನು ಗಮನಿಸಿದ ಸಿಬ್ಬಂದಿ ಅರುಣ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ಆರೋಪಿ ಮೆಟ್ರೋ ಹಸಿರು ಮಾರ್ಗದಲ್ಲಿ ಸಿಲ್ಕ್ ಇನ್‌ಸ್ಟಿಟ್ಯೂಟ್‌ನಿಂದ ರಾಜಾಜಿನಗರದ ವರೆಗೆ ಮತ್ತು ನೇರಳೆ ಮಾರ್ಗದಲ್ಲಿ ಕೆಂಗೇರಿಯಿಂದ ದೀಪಾಂಜಲಿನಗರ ದವರೆಗಿನ ಎಲ್ಲಾ ನಿಲ್ದಾಣಗಳಲ್ಲಿ ಕ್ಯೂಆರ್‌ ಕೋಡ್‌ ಅಂಟಿಸಿರುವುದು ಬೆಳಕಿಗೆ ಬಂದಿದೆ.

ಈ ಸಂಬಂಧ ಆರೋಪಿಯನ್ನು ಬಂಧಿಸಲಾಗಿತ್ತು. ಬಳಿಕ ಜಾಮೀನು ಪಡೆದುಕೊಂಡು ಆರೋಪಿ ಬಿಡುಗಡೆಯಾಗಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next