Advertisement

ಮನಸೂರೆಗೊಳಿಸಿದ ನಿಸರ್ಗ ದೃಶ್ಯ ವೈಭವ

09:27 PM Mar 08, 2020 | Lakshmi GovindaRaj |

ಮೈಸೂರು: ಮಹಿಳಾ ದಿನಾಚರಣೆ ಅಂಗವಾಗಿ ಜಲವರ್ಣ ಕಲಾವಿದ ಹಾ.ಪು.ರಂಗಸ್ವಾಮಿ ಅವರ ವರ್ಣಾತ್ಮಕ ನಿಸರ್ಗ ದೃಶ್ಯ ವೈಭವ ಸುಚಿತ್ರ ಆರ್ಟ್‌ ಗ್ಯಾಲರಿಯಲ್ಲಿ ನೋಡುಗರನ್ನು ಮನಸೂರೆಗೊಳಿಸಿತು.

Advertisement

ವಿಶ್ವವಿಖ್ಯಾತ ಹಂಪಿ ಏಕಶಿಲಾ ಕಲ್ಲಿನ ರಥ, ಬೇಲೂರಿನ ದರ್ಪಣ ಸುಂದರಿಯ ಚಿತ್ರ, ಸಾಂಸ್ಕೃತಿಕ ನಗರಿಯ ಜಯಚಾಮರಾಜೇಂದ್ರ, ಕೃಷ್ಣರಾಜ ಒಡೆಯರ್‌ ಪ್ರತಿಮೆಯುಳ್ಳ ವೃತ್ತಗಳು ಸೇರಿದಂತೆ ಪ್ರಕೃತಿಯ ಸೊಬಗು ಕಲಾರಸಿಕರ ಹೃದಯವನ್ನು ಹಿಡಿದಿಡ್ಡವು. ಸುಚಿತ್ರ ಆರ್ಟ್‌ ಗ್ಯಾಲರಿಯಲ್ಲಿ ಎರಡು ದಿನಗಳ ಕಾಲ ಏರ್ಪಡಿಸಿರುವ ಚಿತ್ರಕಲಾ ಪ್ರದರ್ಶನದಲ್ಲಿ ಸುತ್ತಮುತ್ತಲಿನ ಹತ್ತಾರು ಚಿತ್ರಣಗಳು ಗಮನ ಸೆಳೆಯುತ್ತಿವೆ.

ಆಕರ್ಷಕ ಚಿತ್ರಗಳು: ವಸಂತಕಾಲದಲ್ಲಿ ಮರಗಳ ಹೂಗಳನ್ನು ಬಿಟ್ಟು ರಸ್ತೆಗೆ ಮೆರುಗು ನೀಡುವ ಚಿತ್ರ, ಹೊಳೆಯ ತಂಡೆಯಲ್ಲಿ ಹಸುಗಳ ರಾಸು ನಿಂತು ಮೇಯುತ್ತಿರುವ ದೃಶ್ಯ, ಸುತ್ತಮುತ್ತಲ ಪರಿಸರ, ಬಡಾವಣೆಗಳು ಸುಂದರವಾಗಿ ಚಿತ್ರಗಳು ಚಿತ್ರವಂತಿಕೆ ಕೂಡಿವೆ. ಹುಲಿಯೊಂದು ಘರ್ಜನೆ ಮಾಡುತ್ತಿರುವ ಚಿತ್ರಗಳು ಆಕರ್ಷಕ ಮಾದರಿಯಲ್ಲಿ ಇವೆ.

ನಾಡಿನ ವೈಭವಕ್ಕೆ ಹಿಡಿದ ಕೈಗನ್ನಡಿ: ಬೇಲೂರಿನ ಚೆನ್ನಕೇಶವ ದೇವಾಲಯದ ದರ್ಪಣ ಸುಂದರಿ ಚಿತ್ರವಂತೆ ಗಮನ ಸೆಳೆಯುತ್ತಿವೆ. ಜಗತಸಿದ್ಧ ಹಂಪಿಯ ಏಕಶೀಲಾ ಕಲ್ಲಿನ ರಥ, ಜಯಚಾಮರಾಜೇಂದ್ರ ಒಡೆಯರ್‌ ವೃತ್ತ, ಕೃಷ್ಣರಾಜ ಒಡೆಯರ್‌ ವೃತ್ತ, ಅರಮನೆ, ವಿಧಾನ ಸೌಧ ವಿಡಂಬನ ನೋಟಗಳು ಹಾಗೂ ಹಂಪಿಯ ಕಲ್ಯಾಣಿ ಮುಂತಾದ ಚಿತ್ರಗಳು ನಾಡಿನ ವೈಭವಕ್ಕೆ ಹಿಡಿದ ಕೈಗನ್ನಡಿಯಂತೆ ಆಕರ್ಷಿಸುತ್ತಿವೆ.

ರಂಗಸ್ವಾಮಿ ಕೈಚಳಕ: ಎರಡು ದಿನಗಳ ಚಿತ್ರಕಲಾ ಪ್ರದರ್ಶನಕ್ಕೆ ಶಾಸಕ ಜಿ.ಟಿ.ದೇವೇಗೌಡ ಚಾಲನೆ ನೀಡಿ, ಕಲಾವಿದ ಹಾ.ಪು.ರಂಗಸ್ವಾಮಿ ಅವರು ಉತ್ತಮ ಕಲಾವಿದ. ಭಾವತುಂಬಿದ ಚಿತ್ರಗಳು ಪ್ರದರ್ಶನದಲ್ಲಿ ಅನಾವರಣಗೊಂಡಿವೆ. ಸಾಂಸ್ಕೃತಿಕ ರಾಜಧಾನಿ ರಾಜವಂಶಸ್ಥರ ಚಿತ್ರಗಳು, ಅರಮನೆ, ಬೇಲೂರಿನ ದರ್ಪಣ ಸುಂದರಿ, ಏಕಶಿಲಾ ರಥದ ಚಿತ್ರಗಳು ಇಲ್ಲಿ ಇವೆ ಎಂಬಂತೆ ಭಾಸವಾಗುತ್ತದೆ. ಎಷ್ಟೋ ಮನೋಜ್ಞವಾಗಿ ರಂಗಸ್ವಾಮಿ ಕೈಚಳಕ ತೋರಿದ್ದಾರೆ.

Advertisement

ರಂಗಸ್ವಾಮಿ ರಾಜ್ಯ, ರಾಷ್ಟ್ರಮಟ್ಟದ ಕಲಾವಿದನಾಗಿ ಗುರುತಿಸಿಕೊಳ್ಳಬೇಕು ಎಂದು ಆಶಿಸಿದರು. ದಾವಣಗೆರೆ ವಾಲ್ಮೀಕಿ ಗುರುಪೀಠದ ಧರ್ಮದರ್ಶಿ ಎಂ.ಅಪ್ಪಣ್ಣ, ಕನ್ನಡ ಸಾಹಿತ್ಯ ಕಲಾಕೂಟದ ಚಂದ್ರಶೇಖರ್‌, ಮಹರ್ಷಿ ವಾಲ್ಮೀಕಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ದೇವರಾಜ್‌ ಟಿ.ಕಾಟೂರ್‌, ಕಲಾವಿದ ಹಾ.ಪು.ರಂಗಸ್ವಾಮಿ, ಕಲಾವಿದೆ ಜಮುನಾರಾನಿ ಮಿರ್ಲೆ, ಕೊ.ಸು.ನರಸಿಂಹಮೂರ್ತಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next