Advertisement
ಅಲಂಪುರಿಯ ವಸಂತಿ ಅವರು ಮನೆ ಸಮೀಪದ ಬಿಲದಲ್ಲಿ ಜೂ. 6ರಂದು ಹಾವೊಂದು ಹೊರಗೆ ಬರಲಾಗದೆ ಒದ್ದಾಡುತ್ತಿರುವುದನ್ನು ಗಮನಿಸಿದ್ದು, ತತ್‌ಕ್ಷಣ ಉರಗ ಪ್ರೇಮಿ ಸ್ನೇಕ್ ಕಿರಣ್‌ಗೆ ತಿಳಿಸಿದರು. ಅವರು ಹಾವನ್ನು ಬಿಲದಿಂದ ಹೊರಗೆ ತೆಗೆದು ಪರಿಶೀಲಿಸಿದಾಗ ಹೊಟ್ಟೆ ಹಾಗೂ ಕುತ್ತಿಗೆಯಲ್ಲಿ ಗಾಯ ಕಾಣಿಸಿತು. ಹಾವನ್ನು ಮಂಗಳೂರಿಗೆ ಕೊಂಡು ಹೋಗಿ ಪಶುವೈದ್ಯ ಡಾ| ಯಶಸ್ವಿ ನಾರಾವಿ ಅವರಿಗೆ ತೋರಿಸಿದರು. ವೈದ್ಯರು ಮೊದಲು ಹರಿದ ಚರ್ಮಕ್ಕೆ ಹೊಲಿಗೆ ಹಾಕಿದರಾದರೂ ಹಾವಿನ ಹೊಟ್ಟೆಯಲ್ಲಿ ಏನೋ ಇದೆ ಎಂದು ಸಂಶಯಗೊಂಡು ಶಸ್ತ್ರಚಿಕಿತ್ಸೆ ನಡೆಸಿದರು. ಸುಣ್ಣ ತುಂಬುವ ಪ್ಲಾಸ್ಟಿಕ್ ಡಬ್ಬವೊಂದು ಪತ್ತೆಯಾಗಿದ್ದು, ಯಶಸ್ವಿಯಾಗಿ ಹೊರಗೆ ತೆಗೆದರು.
ವೈದ್ಯರು ಹಾವನ್ನು 15 ದಿನಗಳ ಕಾಲ ತಮ್ಮಲ್ಲೇ ಇರಿಸಿಕೊಂಡು ಪರಿಶೀಲನೆಯ ಬಳಿಕ ಮರಳಿಸಿದರು. ಸ್ನೇಕ್ ಕಿರಣ್ ಮತ್ತೆ 3 ದಿನ ಮನೆಯಲ್ಲಿರಿಸಿಕೊಂಡು ಬಳಿಕ ಬಂಟ್ವಾಳ ವಲಯ ಅರಣ್ಯಾಧಿಕಾರಿ ರಾಜೇಶ್ ಬಳಿಗಾರ್ ಹಾಗೂ ರಕ್ಷಕ ಮನೋಜ್ ಅವರ ನೆರವಿನಿಂದ ರಕ್ಷಿತಾರಣ್ಯಕ್ಕೆ ಬಿಟ್ಟರು.