Advertisement
ಈ ವಿಧಾನಸಭೆಯ ಮೊದಲ ಅಧಿ ವೇಶನದ ಮುಂದುವರಿದ ಉಪ ಅಧಿವೇಶನವು ಹಲವು ಅನಿರೀ ಕ್ಷಿತ ಘಟನಾವಳಿಗಳು, ಕಹಿ ಅನು ಭವಗಳು, ಕರಾಳ ನೆನಪುಗಳೊಂದಿಗೆ ಶುಕ್ರವಾರ ಅಂತ್ಯಗೊಂಡಿದೆ. ಸಿಎಂ ಸಿದ್ದರಾಮಯ್ಯ ಹಾಗೂ ಸ್ಪೀಕರ್ ಯು.ಟಿ. ಖಾದರ್ ಅವರಿಗೆ ಈ ಅಧಿವೇಶನ ಸಾಕಷ್ಟು ಮುಜುಗರ ತಂದಿದ್ದರಿಂದ ಬಹಳ ನೋವಿನಿಂದಲೇ ಸದನದಿಂದ ಹೊರಗೆ ಹೆಜ್ಜೆ ಹಾಕಿದರು.
Related Articles
Advertisement
ವಿಪಕ್ಷಗಳ ಅನುಪಸ್ಥಿತಿಯಲ್ಲೇ ಮಸೂದೆ ಮಂಡನೆಸದನದಲ್ಲಿ ಕೂರಬೇಕಾದ ವಿಪಕ್ಷಗಳು ಬೀದಿಗೆ ಬಂದವು. ವಿಪಕ್ಷಗಳ ಅನುಪಸ್ಥಿತಿಯಲ್ಲೇ ಹಲವು ಮಹತ್ವದ ಮಸೂದೆಗಳು ಅನುಮೋದನೆ ಪಡೆ ದವು. ಎಲ್ಲಕ್ಕಿಂತ ಮುಖ್ಯವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಜೆಟ್ ಮೇಲಿನ ಚರ್ಚೆಗೆ ವಿಪಕ್ಷಗಳಿಲ್ಲದೆ ಕೇವಲ ಆಡಳಿತ ಪಕ್ಷದ ಸಾಲಿಗೆ ಸೀಮಿತವಾಗಿ ಉತ್ತರ ಕೊಡಬೇಕಾಯಿತು. ವಿಪಕ್ಷವಿಲ್ಲದೆ ಕಲಾಪ ನಡೆದ ನಿದರ್ಶನವಿಲ್ಲ. ಆ ರೀತಿಯ ಘಟನೆಗೂ ಈ ಬಾರಿಯ ಕಲಾಪ ವಿಧಾನಮಂಡಲದ ಇತಿಹಾಸ ಪುಟ ಸೇರಿತು. ಸ್ವತಃ ಸಿಎಂ ಅವರೇ ಉತ್ತರ ಕೊಡುವಾಗ ವಿಪಕ್ಷಗಳಿಲ್ಲದೆ ಸದನ ನಡೆದಿರಲಿಲ್ಲ, ಇದು ಬಹಳ ನೋವಿನ ಸಂಗತಿ ಎಂದು ಬೇಸರ ವ್ಯಕ್ತಪಡಿಸಿದ್ದು, ಆಗ ಬಾರದ ಘಟನೆ ಆಗಿ ಹೋಗಿದೆ ಎಂಬುದು ಅವರ ಮಾತುಗಳಿಂದಲೇ ವ್ಯಕ್ತವಾದಂತಿತ್ತು. ಪ್ರತಿಭಟನೆಗೂ ಮಿತಿ ಇರಬೇಕು
ಬಿಜೆಪಿ ಸದಸ್ಯರ ವರ್ತನೆ ತುಸು ಅತಿರೇಕವೆಂದೇ ಹೇಳಬಹುದು.ಪ್ರತಿಭಟನೆಗೂ ಒಂದು ಇತಿಮಿತಿ ಇರುತ್ತದೆ. ಸದನದ ಒಳಗೆ ಹೇಗೆ ನಡೆದು
ಕೊಳ್ಳಬೇಕು ಎಂಬುದರ ಬಗ್ಗೆ ಸ್ವತಃ ಸ್ಪೀಕರ್ ಖಾದರ್ ಅವರೇ ಮೂರು ದಿನಗಳ ಕಾಲ ತರಬೇತಿ ಕೊಡಿಸಿದ್ದರು. ಆದರೆ ಒಳಗಡೆ ಆಗಿದ್ದು ವ್ಯತಿರಿಕ್ತ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಭಟನೆ, ಧರಣಿಗೆ ಎಲ್ಲವುಗಳಿಗೂ ಅವಕಾಶವಿದೆ. ಆದರೆ ಅದು ಮಿತಿ ಮೀರಬಾರದು. ಪೀಠಕ್ಕೆ ಅಗೌರವ ತರಬಾರದು. ಈ ವರ್ತನೆ ಸಹಿಸುವುದಂತೂ ಆಗಿರಲಿಲ್ಲ, ಸಮರ್ಥನೀಯವೂ ಆಗಿರಲಿಲ್ಲ. ಹೊಸಬರಿಗೆ ಮಾದರಿಯಾಗಬೇಕಾದ ಹಿರಿಯ ಅನುಭವಿಗಳೇ ಪ್ರತಿಗಳನ್ನು ಹರಿಯುವುದರಲ್ಲಿ ಮುಂಚೂಣಿಯಲ್ಲಿ ಇದ್ದುದು ಕಿರಿಯರಿಗೆ ಪ್ರೇರಣೆಯಾಯಿತು. ಪರಿಣಾಮ ಅಮಾನತು ಶಿಕ್ಷೆ ಅನುಭವಿಸಬೇಕಾಯಿತು. ಸಹನೆಯೂ ಅಷ್ಟೇ ಮುಖ್ಯ
ಸ್ಪೀಕರ್ ಸ್ಥಾನದಲ್ಲಿ ಕುಳಿತವರಿಗೆ ತಾಳ್ಮೆ ಅತ್ಯಂತ ಮುಖ್ಯ. ಆಡಳಿತ ಪಕ್ಷ ಮತ್ತು ವಿಪಕ್ಷಗಳನ್ನು ಸಮಾನಾಗಿ ಕಾಣಬೇಕು. ವಿಪಕ್ಷಗಳ ಕಡೆಗೆ ತುಸು ಹೆಚ್ಚು ವಾಲಿರಬೇಕು. ಗದ್ದಲ-ಕೋಲಾಹಲದ ಸಂದರ್ಭದಲ್ಲಿ ಕೆಲಕಾಲ ಸದನ ಮುಂದೂಡಿ ಬಳಿಕ ಸಭಾಧ್ಯಕ್ಷರ ಕೊಠಡಿಯಲ್ಲಿ ಸಂಧಾನ ನಡೆಸಿ ಪುನಃ ಸದನ ಸೇರಿ ಸುಗಮವಾಗಿ ನಡೆದ ಉದಾಹರಣೆಗಳಿವೆ. ಆದರೆ ಈ ಘಟನೆಯಲ್ಲಿ ಅಂತಹ ಪ್ರಯತ್ನಗಳು ಆಗಲಿಲ್ಲ. ಬಹುಶಃ ಸ್ಪೀಕರ್ ಅವರು ಅಮಾನತು ಶಿಕ್ಷೆ ಪ್ರಕಟಿಸುವ ಮುನ್ನ ಕೆಲ ಕಾಲ ಸದನ ಮುಂದೂಡಿದ್ದರೆ ಏನೂ ಆಗುತ್ತಿರಲಿಲ್ಲ, ಇದೊಂದು ಆತುರದ ನಿರ್ಧಾರವಾಯಿತೆಂಬ ಅಭಿಪ್ರಾಯ ಮೂಡಿದೆ. ವಿಪಕ್ಷಗಳಿಗೆ ಸಿಕ್ಕಿತು ಹೋರಾಟದ ಅಸ್ತ್ರ
ಮೈತ್ರಿ ಸುದ್ದಿ ಹೊರಗಡೆ ಹರಿದಾಡುತ್ತಿರುವುದರ ನಡುವೆಯೇ ಈ ಘಟನೆಯಿಂದ ಬಿಜೆಪಿ-ಜೆಡಿಎಸ್ ಪಕ್ಷಗಳು ಮತ್ತಷ್ಟು ಹತ್ತಿರವಾದವು. ಕಾಂಗ್ರೆಸ್ ಸರ ಕಾರದ ವಿರುದ್ಧ ಹೋರಾಡಲು ಸಿಕ್ಕ ಅಸ್ತ್ರ ವನ್ನು ಪ್ರಬಲವಾಗಿ ಬಳಸಿಕೊಂಡವು ಎಂದೇ ಹೇಳ ಬಹುದು. ಆದರೆ ಅಧಿವೇಶನ ನಡೆಯುವುದೇ ಅಪ ರೂಪ. ವಿಪಕ್ಷಗಳ ಬೇಡಿಕೆ ಮೇರೆಗೆ ಒಂದು ವಾರ ಕಾಲ ಅಧಿವೇಶನ ವಿಸ್ತರಿಸಲಾಗಿತ್ತು. ಈ ಅವಕಾಶ ವನ್ನು ಬಳಸಿಕೊಳ್ಳಲು ವಿಪಕ್ಷಗಳು ವಿಫಲವಾದವು. ವಿಪಕ್ಷ ನಾಯಕನಿಲ್ಲದ ಅಧಿವೇಶನ
ಈ ಅಧಿವೇಶನದ ಹಲವು ದಾಖಲೆಗಳಲ್ಲಿ ವಿಪಕ್ಷದ ನಾಯಕನಿಲ್ಲದೆ ಅಧಿವೇಶನ ಮುಗಿದದ್ದು ಒಂದು ದಾಖಲೆ. ಚುನಾವಣೆಯಲ್ಲಿ ಬಿಜೆಪಿ 66 ಸ್ಥಾನಗಳನ್ನು ಗೆದ್ದಿದ್ದು ಸಹಜವಾಗಿಯೇ ಅದಕ್ಕೆ ವಿಪಕ್ಷದ ನಾಯಕನ ಸ್ಥಾನ ಸಿಗುತ್ತದೆ. ಆದರೆ ಆ ಪಕ್ಷದ ವರಿಷ್ಠರಿಗೆ ರಾಜ್ಯ ಬಿಜೆಪಿ ನಾಯಕರ ಮೇಲೆ ಇನ್ನೂ ಸಿಟ್ಟು ಕಡಿಮೆಯಾದಂತೆ ಕಾಣುತ್ತಿಲ್ಲ. ಸೋಲಿನಿಂದ ಆಘಾತಕ್ಕೊಳಗಾಗಿರುವ ಬಿಜೆಪಿ ವರಿಷ್ಠರು ವಿಪಕ್ಷ ನಾಯಕನ ಆಯ್ಕೆ ಮಾಡದೆ ಮುಜುಗರ ಉಂಟು ಮಾಡಿದರು. ಇದನ್ನು ಹಲವು ಸಲ ಪ್ರಸ್ತಾಪಿಸಿದ ಆಡಳಿತ ಪಕ್ಷ ಲೇವಡಿ ಮಾಡಿದ್ದು ಉಂಟು. ಆದರೆ ಈ ಅವಕಾಶ ಬಳಸಿಕೊಂಡ ಜೆಡಿಎಸ್‌ನ ಎಚ್.ಡಿ. ಕುಮಾರಸ್ವಾಮಿ ನಿಜವಾದ ವಿಪಕ್ಷದ ನಾಯಕನಂತೆ ಸರಕಾರಕ್ಕೆ ವರ್ಗಾವಣೆ ದಂಧೆ ಬಿಸಿ ಮುಟ್ಟಿಸಿದರು. ವಿಪಕ್ಷಗಳ ಗೈರು ಹಾಜರಿಯಲ್ಲೇ ಸಿಎಂ ಸಿದ್ದರಾಮಯ್ಯ ಅವರು ಬಿಜೆಪಿ ಹಾಗೂ ಜೆಡಿಎಸ್ ವಿರುದ್ಧ ಹರಿಹಾಯ್ದರು. ತಮ್ಮ ಗ್ಯಾರಂಟಿ ಯೋಜನೆಗಳನ್ನು ಬಲವಾಗಿ ಸಮರ್ಥಿಸಿಕೊಂಡರು. ಸದನದಲ್ಲಿ ರಾಜಕೀಯ ಭಾಷಣದ ಮೂಲಕ ಎದುರಾಳಿಗಳಿಗೆ ತಕ್ಕ ಸಂದೇಶ ಕೂಡ ಕೊಟ್ಟರು. ಅಂತಿಮವಾಗಿ ಸರಕಾರಕ್ಕೆ ಏನು ಆಗಬೇಕೋ ಅದು ಆಯಿತು, ಅದೇ ರೀತಿ ವಿಪಕ್ಷಗಳಿಗೆ ಏನು ಆಗಬೇಕಿತ್ತೋ ಅದೇ ಆಯಿತು. ಇಬ್ಬರು ಗೆದ್ದ ಹುಮ್ಮಸ್ಸಿನಲ್ಲಿ ಇರಬಹುದು, ಸೋತಿದ್ದು ಮಾತ್ರ ಪ್ರಜಾಪ್ರಭುತ್ವ ವ್ಯವಸ್ಥೆ. ಎಂ.ಎನ್. ಗುರುಮೂರ್ತಿ