Advertisement

ಸಸ್ಯದಿಂದ ದೃಷ್ಟಿಗೇ ಆಪತ್ತು

06:00 AM Jun 21, 2018 | |

ವರ್ಜೀನಿಯಾ: ಅಮೆರಿಕದ ನ್ಯೂಯಾರ್ಕ್‌, ಮಿಚಿಗನ್‌ ಹಾಗೂ ವರ್ಜೀನಿಯಾಗಳಲ್ಲಿ ಇತ್ತೀಚೆಗೆ ಕಂಡು ಬಂದಿರುವ ಸಸ್ಯ ಪ್ರಬೇಧವೊಂದು ಅಪಾಯಕಾರಿಯಾಗಿದ್ದು, ಇದನ್ನು ಮುಟ್ಟಿದರೆ ಥರ್ಡ್‌ ಡಿಗ್ರಿ ಪ್ರಮಾಣದ ಸುಟ್ಟ ಗಾಯಗಳಾಗುತ್ತವೆ ಹಾಗೂ ಕಣ್ಣು ಕುರುಡಾಗುತ್ತದೆ ಎಂದು ವರ್ಜೀನಿಯಾದ “ದ ಮ್ಯಾಸ್ಸಿ ಹಬೇನಿಯಂ’ ಕಾಲೇಜಿನ ಸಂಶೋಧಕ ತಂಡವೊಂದು ಎಚ್ಚರಿಕೆ ನೀಡಿದೆ.

Advertisement

ಬಿಳಿ ಬಣ್ಣದ ಅತಿ ಚಿಕ್ಕ ಹೂವಿನ ಗುಚ್ಛಗಳನ್ನು ಬಿಡುವ “ಜಿಯಾಂಟ್‌ ಹಾಗ್‌ವೀಡ್‌’ ಎಂಬ ಜಾತಿಗೆ ಸೇರಿರುವ ಈ ಗಿಡದ ಬಗ್ಗೆ ಎಚ್ಚರಿಕೆಯಿಂದಿರಬೇಕೆಂದು ಚಿತ್ರ ಸಮೇತ ಫೇಸ್‌ಬುಕ್‌ನಲ್ಲಿ ಬರೆದ ಲೇಖನದಲ್ಲಿ ಸಂಶೋಧಕರು ಎಚ್ಚರಿಸಿದ್ದಾರೆ.  ವಿಂಚೆಸ್ಟರ್‌ ಹಾಗೂ ಲೀಸ್‌ಬರ್ಗ್‌ ನಡುವಿನ ಕ್ಲಾರ್ಕ್‌ ಕಂಟ್ರಿ ಪ್ರಾಂತ್ಯದಲ್ಲಿ 30 ಬಗೆಯ ಇಂಥ ಅಪಾಯಕಾರಿ ಸಸ್ಯ ಪ್ರಬೇಧಗಳು ಕಂಡು ಬಂದಿವೆ. ಇವುಗಳಿಂದ ಹೊರ ಸೂಸಲ್ಪಡುವ ದ್ರವ್ಯವು ಚರ್ಮದಲ್ಲಿ ಸುಟ್ಟ ಗಾಯಗಳನ್ನು ಉಂಟು ಮಾಡುತ್ತದಲ್ಲದೆ, ಕಣ್ಣಿಗೆ ಬಿದ್ದರೆ ದೃಷ್ಟಿ ಹೀನರಾಗುತ್ತಾರೆ. ಈ ಸಸ್ಯಗಳ ದ್ರವ್ಯವು ಚರ್ಮಕ್ಕೆ ಸೋಂಕಿದ ನಂತರ ವಾತಾವರಣದಲ್ಲಿನ ಉಷ್ಣಾಂಶ ಹಾಗೂ ತೇವಾಂಶಗಳು ಪರಿಸ್ಥಿತಿಯನ್ನು ಮತ್ತಷ್ಟು ವಿಕೋಪಕ್ಕೆ ಕೊಂಡೊಯ್ಯುತ್ತವೆ. ಫೋಟೋ ಟಾಕ್ಸಿಕ್‌ ಪರಿಣಾಮದಿಂದಾಗಿ ದ್ರವ್ಯ ಸೋಕಿದ ಕೇವಲ 15 ನಿಮಿಷಗಳಲ್ಲಿ ಥರ್ಡ್‌ ಡಿಗ್ರಿ ಪ್ರಮಾಣದ ಸುಟ್ಟ ಗಾಯಗಳಾಗಿ, ಬೊಬ್ಬೆಗಳು ಉಂಟಾಗುತ್ತವೆ. ಗಾಯಗಳ ಕಲೆಗಳು 6 ವರ್ಷಗಳವರೆಗೆ ಇರುತ್ತವೆ ಎಂದಿದ್ದಾರೆ ಈ ಸಂಶೋಧಕರು.

Advertisement

Udayavani is now on Telegram. Click here to join our channel and stay updated with the latest news.

Next