ನವದೆಹಲಿ: ರಷ್ಯಾ-ಉಕ್ರೇನ್ ಯುದ್ಧ ಆರಂಭವಾದಾಗಿನಿಂದ ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದ್ದ ಖಾದ್ಯ ತೈಲದ ಬೆಲೆಯಲ್ಲಿ ಇದೀಗ ಇಳಿಕೆಯಾಗಿದೆ.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಖಾದ್ಯ ತೈಲ ಬೆಲೆ ಇಳಿಕೆ ಮತ್ತು ದೇಸೀಯ ಮಾರುಕಟ್ಟೆಯಲ್ಲಿ ಬೆಲೆ ಇಳಿಕೆಗಾಗಿ ಸರ್ಕಾರ ಕೈಗೊಂಡ ಕೆಲವು ನಿರ್ಧಾರಗಳಿಂದಾಗಿ, ಪ್ರಸ್ತುತ ಭಾರತದಲ್ಲಿ ಮಾರಾಟವಾಗುತ್ತಿರುವ ಎಲ್ಲಾ ಖ್ಯಾತ ಬ್ರಾಂಡ್‌ಗಳ ಖಾದ್ಯ ತೈಲದಲ್ಲಿ ಲೀಟರ್‌ಗೆ ಸುಮಾರು 20 ರೂ.ನಷ್ಟು ಇಳಿಕೆಯಾಗಿದೆ.
ಇನ್ನು 4-5 ದಿನಗಳಲ್ಲಿ ಬೆಲೆ ಇಳಿಕೆಯಾಗಿರುವ ತೈಲವು ಮಾರುಕಟ್ಟೆಯಲ್ಲಿ ಲಭ್ಯವಾಗಲಿದೆ ಎಂದು ಮೂಲಗಳು ತಿಳಿಸಿವೆ.
ಫ್ರೀಡಂ ಮತ್ತು ಜೆಮಿನಿ ಬ್ರ್ಯಾಂಡ್‌ಗಳು ಸೂರ್ಯಕಾಂತಿ ಎಣ್ಣೆಯ ಬೆಲೆಯಲ್ಲಿ ಲೀಟರ್‌ಗೆ 20 ರೂ. ಇಳಿಸಿವೆ.
ಧಾರಾ ಖಾದ್ಯ ತೈಲ ಬೆಲೆಯಲ್ಲಿ ಲೀಟರ್‌ಗೆ 15 ರೂ. ಇಳಿಸಲಾಗಿದೆ. ಸೂರ್ಯಕಾಂತಿ ಎಣ್ಣೆ ಮಾತ್ರವಲ್ಲದೆ ಸೋಯಾಬೀನ್, ಸಾಸಿವೆ ಮತ್ತು ತಾಣೆ ಎಣ್ಣೆಯಲ್ಲೂ ಬೆಲೆ ಇಳಿಕೆಯಾಗಿದೆ ಎಂದು ಹೇಳಲಾಗಿದೆ.