Advertisement

ಶಿಕ್ಷಣದಿಂದ ಉತ್ತಮ ಜೀವನ ಸಾಧ್ಯ

06:33 PM Jan 28, 2021 | Team Udayavani |

ತುಮಕೂರು: ಇಂದಿನ ದಿನಗಳಲ್ಲಿ ಶಿಕ್ಷಣ ಜೀವನದ ಬಹುಮುಖ್ಯ ಪಾತ್ರವಾಗಿದ್ದು, ಎಲ್ಲರೂ ಶಿಕ್ಷಣಪಡೆದು ಉತ್ತಮ ಜೀವನರೂಪಿಸಿಕೊಳ್ಳಬೇಕೆಂದು ಮಾಜಿ ಉಪಮುಖ್ಯಮಂತ್ರಿ ಹಾಗೂ ಶ್ರೀ ಸಿದ್ಧಾರ್ಥ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಡಾ. ಜಿ.ಪರಮೇಶ್ವರ ತಿಳಿಸಿದರು.

Advertisement

ನಗರದ ಶ್ರೀ ಸಿದ್ಧಾರ್ಥ ಮೆಡಿಕಲ್‌ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಹಮ್ಮಿ ಕೊಳ್ಳಲಾದ ಕಾರ್ಯಕ್ರಮದಲ್ಲಿ ಮಾತನಾ ಡಿದ ಅವರು ಸಮಾಜದ ಕಟ್ಟಕಡೆಯ ವ್ಯಕ್ತಿಗೆ ಶಿಕ್ಷಣ, ಆರೋಗ್ಯ ನೀಡುವಲ್ಲಿ ತಮ್ಮ ಸಂಸ್ಥೆ ಕಾಳಜಿ ವಹಿಸುತ್ತಿದೆ ಈ ಹಿನ್ನಲೆ ಯಲ್ಲಿ ಗ್ರಾಮೀಣ ಪ್ರದೇಶದಲ್ಲಿಯೇ ಶಿಕ್ಷಣ ಸಂಸ್ಥೆ ಸ್ಥಾಪಿಸಲಾಗಿದೆ ಎಂದರು.

ಭಾರತದ ಸಂವಿಧಾನ ಜಾರಿಗೆ ಬಂದು ಇಂದಿಗೆ 72 ವರ್ಷಕಳೆದಿದ್ದು, ಸರ್ವ ರಿಗೂ ಸಮನಾದ ಹಕ್ಕು ಬಾಧ್ಯತೆಗಳನ್ನು ಕಲ್ಪಿಸಿರುವ ಸಂವಿಧಾನ ಅತ್ಯಂತ ಶ್ರೇಷ್ಠ ವಾಗಿದೆ. ನಾವೆಲ್ಲರು ಸಂವಿಧಾನದಡಿ ಯಲ್ಲಿ ಜೀವನಸಾಗಿಸುತ್ತಿದ್ದು, ಅದರ ಆಶಯಗಳನ್ನು ಅರ್ಥಮಾಡಿಕೊಳ್ಳಬೇಕು ಮತ್ತು ಅದರ ಮೂಲ ಉದ್ದೇಶಗಳನ್ನು ಅರಿತು ಮುನ್ನಡೆಯಬೇಕಿದೆ ಎಂದು ಕರೆ ನೀಡಿದರು.

ಸಾಹೇ ವಿಶ್ವವಿದ್ಯಾಲಯದ ಕುಲ ಸಚಿವ ಡಾ..ಎಂ.ಝಡ್‌. ಕುರಿಯನ್‌, ಶ್ರೀಸಿದ್ಧಾರ್ಥ ಮೆಡಿಕಲ್‌ ಕಾಲೇಜಿನ ಪ್ರಾಂಶುಪಾಲರಾದ ಡಾ.ಶ್ರೀನಿವಾಸ ಮೂರ್ತಿ ಹಾಗೂ ಸಿಬ್ಬಂದಿವರ್ಗ, ಕಾಲೇ ಜಿನ ವಿದ್ಯಾರ್ಥಿಗಳು ಹಾಜರಿದ್ದರು. ತುಮಕೂರಿನ ಮರಳೂರಿನಲ್ಲಿ ಶ್ರೀ ಸಿದ್ದಾರ್ಥ ಇಂಜಿನಿಯರಿಂಗ್‌ ಕಾಲೇಜಿನ ಕ್ಯಾಂಪಸ್ಸಿನಲ್ಲಿ 72ನೇ ಗಣರಾಜ್ಯೋತ್ಸ ವನ್ನು ಸರಳವಾಗಿಆಚರಿಸಲಾಯಿತು.

ಇದನ್ನೂ ಓದಿ:ಸರ್ಕಾರಿ ಸೌಲಭ್ಯದಿಂದ ಆರ್ಥಿಕ ಸದೃಢರಾಗಿ

Advertisement

ಶಿಕ್ಷಣಶಿಲ್ಪಿ ಡಾ.ಎಚ್‌.ಎಂ. ಗಂಗಾ ಧರಯ್ಯ ವೃತ್ತದಲ್ಲಿ ಏರ್ಪಟ್ಟ ಕಾರ್ಯ ಕ್ರಮದಲ್ಲಿ ಪ್ರಾಂಶುಪಾಲರಾದ ಡಾ.ಎಂ. ಎಸ್‌. ರವಿಪ್ರಕಾಶ್ರವರು ಧ್ವಜಾರೋಹಣ ನೆರವೇರಿಸಿದರು.

ಪದವಿ ಕಾಲೇಜಿನಲ್ಲಿ ಧ್ವಜಾರೋಹಣ: ತುಮಕೂರಿನ ಸರಸ್ವತಿಪುರಂನಲ್ಲಿರುವ ಶ್ರೀ ಸಿದ್ಧಾರ್ಥ ಪ್ರಥಮದರ್ಜೆ ಮಹಾ ವಿದ್ಯಾಲಯದಲ್ಲಿ ಆಡಳಿತಾಧಿಕಾರಿ ಡಾ.ವೈ.ಎಂ.ರೆಡ್ಡಿಯವರು ಧ್ವಜಾರೋ ಹಣ ನೆರವೇರಿಸಿದರು. ಪ್ರಾಂಶುಪಾಲ ರಾದ .ಕೆ.ಎಸ್‌.ಕುಮಾರ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next