Advertisement
ನಾಲ್ಕು ಊರುಗಳ ಸಂಧಿಸುವ ವೃತ್ತಒಂದು ಕಡೆಯಿಂದ ಕುಂದಾಪುರ,ಮತ್ತೂಂದು ಕಡೆಯಿಂದ ಸಿದ್ದಾಪುರ,ಇನ್ನೊಂದು ಕಡೆಯಿಂದ ಶಂಕರ ನಾರಾಯಣ, ಕೊಲ್ಲೂರನ್ನು ಸಂಧಿಸುವ ಅಂಪಾರು ಪೇಟೆಯಲ್ಲಿ ವೃತ್ತ ನಿರ್ಮಾಣವಾಗುತ್ತಿರುವುದ ರಿಂದ ಬಹಳಷ್ಟು ಪ್ರಯೋಜನವಾಗಲಿದೆ. ಈ ಮೊದಲು ಇಲ್ಲಿ ಹೊಸದಾಗಿ ಬಂದವರಿಗೆ ಯಾವ ಕಡೆ ತೆರಳಬೇಕು ಎನ್ನುವ ಗೊಂದಲವಾಗುತ್ತಿತ್ತು. ಈಗ ವೃತ್ತ ನಿರ್ಮಾಣದೊಂದಿಗೆ ಮಾರ್ಗ ಸೂಚಿಗಳನ್ನು ಹಾಕಿದರೆ ಪ್ರಯಾಣಿಕರಿಗೆ ಸಹಾಯವಾಗಲಿದೆ.
10 ವರ್ಷಗಳ ಬೇಡಿಕೆ
ಅಂಪಾರಿನಲ್ಲಿ ಸರ್ಕಲ್ ನಿರ್ಮಾಣವಾಗಬೇಕು ಎನ್ನುವುದು ಇಂದು, ನಿನ್ನೆಯ ಬೇಡಿಕೆಯಲ್ಲ. ಕಳೆದ 10 ವರ್ಷಗಳಿಂದ ಈ ಕುರಿತ ಕೂಗು ಕೇಳಿ ಬಂದಿತ್ತು. ಕಡೆಗೂ ಸ್ಥಳೀಯಾಡಳಿತದ ಮುತುವರ್ಜಿಯಿಂದ ಅಂಪಾರು ಸರ್ಕಲ್ ನಿರ್ಮಾಣವಾಗುತ್ತಿದೆ.
ಸರ್ಕಲ್‌ನೊಂದಿಗೆ 150 ಮೀಟರ್ ರಸ್ತೆಯೂ ದ್ವಿಪಥವಾಗಲಿದೆ. ಮಧ್ಯದಲ್ಲಿ ರಸ್ತೆ ವಿಭಾಜಕಗಳ ನಿರ್ಮಾಣವಾಗಲಿದೆ. ಅಂಪಾರು ಭಜನ ಮಂದಿರದಿಂದ ಆರಂಭ ವಾಗಿ ಅಂಪಾರು ಪೇಟೆಯವರೆಗೆ ವಿಸ್ತರಣೆಗೊಳ್ಳಲಿದೆ. ಈಗಾಗಲೇ ಬಹುತೇಕ ಕಾಮಗಾರಿ ಪೂರ್ಣಗೊಂಡಿದೆ. ಪೇಟೆ ಬೆಳವಣಿಗೆಗೂ ಸಹಕಾರಿ
ಅಂಪಾರಿನಲ್ಲಿ ಸರ್ಕಲ್ ನಿರ್ಮಾಣವಾಗುತ್ತಿರುವುದರಿಂದ ಅಪಘಾತಗಳ ಸಂಖ್ಯೆಯೂ ನಿಯಂತ್ರಣವಾಗುವುದಲ್ಲದೆ, ಹೊಸದಾಗಿ ಬರುವ ವಾಹನ ಸವಾರರಿಗೂ ಅನುಕೂಲವಾಗಲಿದೆ. ಇದರೊಂದಿಗೆ ಶಿವಮೊಗ್ಗ, ವಿರಾಜಪೇಟೆಗಳಿಂದ ಬರುವಂತಹ ಜನರು ಹೆಚ್ಚಿನ ಸಂಖ್ಯೆಯಲ್ಲಿ ಬರುವುದರಿಂದ ವ್ಯಾಪಾರ, ವಹಿವಾಟುಗಳಿಗೂ ಅನುಕೂಲವಾಗಲಿದೆ. ಇದರಿಂದ ಅಂಪಾರಿನ ಅಭಿವೃದ್ಧಿ ದೃಷ್ಟಿಯಿಂದಲೂ ವೃತ್ತ ನಿರ್ಮಾಣ ಸಹಕಾರಿಯಾಗಲಿದೆ.
Related Articles
ಅಂಪಾರಿನಲ್ಲಿ ವೃತ್ತ ನಿರ್ಮಾಣದೊಂದಿಗೆ ಹೈಮಾಸ್ಟ್ ದೀಪ, ಒಳಚರಂಡಿ ಕಾಮಗಾರಿಯೂ ನಡೆಯುತ್ತಿದೆ. ಬಸ್ ನಿಲ್ದಾಣವನ್ನು ಅಭಿವೃದ್ಧಿಪಡಿಸಲಾಗುವುದು.4 ಕಡೆಗಳಲ್ಲಿಯೂ ರಸ್ತೆ ವಿಸ್ತರಣೆ ಮಾಡಲಾಗುವುದು.
– ಕೆ. ಭಾಸ್ಕರ ಶೆಟ್ಟಿ,
ಅಂಪಾರು ಗ್ರಾ.ಪಂ. ಪಿಡಿಒ
Advertisement
– ಪ್ರಶಾಂತ್ ಪಾದೆ