ಮುಂಬೈ: ಕೇವಲ 43 ಎಸೆತಗಳಲ್ಲಿ ಬ್ಯಾಟರೊಬ್ಬರು ಬರೋಬ್ಬರಿ 193 ರನ್ ಚಚ್ಚಿದ ಘಟನೆ ಯೂರೋಪಿಯನ್ ಟಿ10 ಲೀಗ್ ನಲ್ಲಿ ನಡೆದಿದೆ. ಹಮ್ಜಾ ಸಲೀಂ ದರ್ ಅವರೇ ಈ ಸಾಹಸ ಮಾಡಿದ ಬ್ಯಾಟರ್.
ಕ್ಯಾಟಲುನ್ಯಾ ಜಾಗ್ವಾರ್ ಮತ್ತು ಸೋಹಲ್ ಹಾಸ್ಪಿಟಲ್ಟೆಟ್ ತಂಡಗಳ ನಡುವಿನ ಪಂದ್ಯದಲ್ಲಿ ಈ ದಾಖಲೆಯಾಗಿದೆ.
ಬೌಲರ್ ಗಳನ್ನು ಮನ ಬಂದಂತೆ ದಂಡಿಸಿದ ಕ್ಯಾಟಲುನ್ಯಾ ಜಾಗ್ವಾರ್ ಬ್ಯಾಟರ್ ಹಮ್ಜಾ ತನ್ನ ಇನ್ನಿಂಗ್ಸ್ ನಲ್ಲಿ 22 ಸಿಕ್ಸರ್ ಮತ್ತು 14 ಬೌಂಡರಿ ಬಾರಿಸಿದರು. ಈ ದಾಖಲೆಯ ಸ್ಕೋರ್ ದಾಖಲೆ 449 ರ ಸ್ಟ್ರೈಕ್ ರೇಟ್ ನಲ್ಲಿ ಬಂತು.
ಹಮ್ಜಾ ಅವರ ಅಜೇಯ 193 ಈಗ ಟಿ10 ಇತಿಹಾಸದಲ್ಲಿ ಅತ್ಯಧಿಕ ಮೊತ್ತವಾಗಿದೆ, ಇದು ಹಿಂದಿನ ದಾಖಲೆಯ 163 ಅನ್ನು ಮೀರಿಸಿದರು.
ಹಮ್ಜಾ ಅವರು ಬ್ಯಾಟಿಂಗ್ ಪವರ್ ಗೆ ಸೋಹಲ್ ಹಾಸ್ಪಿಟಲ್ಟೆಟ್ ತಂಡದ ಬೌಲರ್ ಗಳು ಪತರುಗಟ್ಟಿದರು. ಅದರಲ್ಲೂ ಓರ್ವ ಬೌಲರ್ ಕೇವಲ ಎರಡು ಓವರ್ ಗಳಲ್ಲಿ 73 ರನ್ ನೀಡಿದರು. ಅಂದರೆ ಪ್ರತಿ ಓವರ್ ಗೆ 36.5ರಂತೆ.
ಹಮ್ಜಾ ಅವರ ದಾಖಲೆಯ 193 ರನ್ ನೆರವಿನಿಂದ ಕ್ಯಾಟಲುನ್ಯಾ ಜಾಗ್ವಾರ್ ತಂಡವು 10 ಓವರ್ ಗಳಲ್ಲಿ ವಿಕೆಟ್ ನಷ್ಟಕ್ಕೆ 257 ರನ್ ಗಳಿಸಿತು. ಎದುರಾಳಿ ಸೋಹಲ್ ಹಾಸ್ಪಿಟಲ್ಟೆಟ್ ತಂಡವು ಎಂಟು ವಿಕೆಟ್ ಕಳೆದುಕೊಂಡು ಕೇವಲ 104 ರನ್ ಗಳಿಸಿತು.