Advertisement
ಸುಮಾರು 3 ಎಕ್ರೆಯಷ್ಟು ವಿಸ್ತಾರವಿರುವ ಈ ಜಲಾಶಯವು ನಡುಬೈಲ್ ,ಎಣ್ಮಕಜೆ ಪ್ರದೇಶಗಳ ನೀರಿನ ಮೂಲಗಳಿಗೆ ಪ್ರಧಾನ ಆಶ್ರಯ.ಗ್ರಾಮಸ್ಥರಿಗೆ ತಮ್ಮ ಪ್ರಾಥಮಿಕ ಅವಶ್ಯಕತೆಗಳಿಗೆ ಹಾಗೂ ಕೃಷಿ ಅಗತ್ಯಗಳಿಗೆ ಇದರ ನೀರೆ ಆಧಾರ.ತಗ್ಗು ಪ್ರದೇಶಗಳಾದ ಇಲ್ಲಿ ಹಳ್ಳದಿಂದ ನೀರು ಹರಿದು ಬರುವ ಕಾರಣ ಭತ್ತದ ಕೃಷಿ,ತೆಂಗು ಕಂಗು ಬೆಳೆಗಳಿಗೂ ನೀರೂಣಿಸಲು ಸಾಧ್ಯವಾಗುತ್ತಿತ್ತು.ಎಣ್ಮಕಜೆ ಪ್ರದೇಶದಲ್ಲಿನ ಸುಮಾರು ಎರಡು ಎಕ್ರೆಯಷ್ಟು ಗದ್ದೆಗಳಿಗೆ ಈ ಹಳ್ಳವೆ ಪ್ರಧಾನ ನೀರಿನ ಮೂಲ ಎಂದು ಸ್ಥಳೀಯರಾದ ಸುಬ್ಬಣ್ಣ ಆಳ್ವ ಎಣ್ಮಕಜೆ ಹಾಗೂ ಸಾವೆರ್ ಡಿ ಸೋಜಾ ಹೇಳುತ್ತಾರೆ. ಒಂದೆರಡು ಮಳೆ ಬಂದಾಗಲೆ ಈ ಪ್ರದೇಶಗಳ ನೀರಿನ ಮೂಲಗಳಲ್ಲಿ ಜಲ ತುಂಬಿಕೊಳ್ಳುತ್ತದೆ. ಆದರೆ ಈಗ ಜಲಾಶಯದಲ್ಲಿ ನೀರು ಬೇಗ ಬರಿದಾಗುವ ಕಾರಣ ಕೃಷಿಕರು ಬೆಳೆ ಮಾಡುವುದನ್ನೆ ನಿಲ್ಲಿಸಿದ್ದಾರೆ.ಜನರಿಗೆ ಮಾತ್ರವಲ್ಲದೆ ಪ್ರಾಣಿ ಪಕ್ಷಿಗಳಿಗೂ ಈ ಜಲಾಶಯದ ನೀರು ಅಗತ್ಯ.
ಗ್ರಾಮದ ಪ್ರಧಾನ ನೀರಿನ ಸಂಪನ್ಮೂಲವಾದ ಬೆದ್ರಂಪಳ್ಳದ ಅಭಿವೃದ್ಧಿ ,ಸಂರಕ್ಷಣೆಗಾಗಿ ಪ್ರದೇಶವಾಸಿಗಳನ್ನು ಒಟ್ಟುಗೂಡಿಸಿ ಕ್ರಿಯಾ ಸಮಿತಿ ರಚಿಸುವುದಾಗಿ ಅಶ್ರಫ್ ಬೆದ್ರಂಪಳ್ಳ ಹೇಳಿದ್ದಾರೆ.
Related Articles
Advertisement
ಪ್ರಕೃತಿದತ್ತವಾದ ಇಂತಹ ಹಳ್ಳಗಳು ಪ್ರಕೃತಿ ನಮಗೆ ನೀಡಿದ ಮಹಾ ಕೊಡುಗೆ.ಆದರೆ ಮಾನವನ ನಿರ್ಲಕ್ಷದಿಂದ ಹಳ್ಳ ,ಕೆರೆ,ತೋಡುಗಳು ಮರೆಯಾಗುತ್ತಿವೆ.ಇವುಗಳ ಸಂರಕ್ಷಣೆ,ಅಭಿವೃದ್ಧಿ ಗಾಗಿ ಇನ್ನೂ ಎಚ್ಚೆತ್ತುಕೊಳ್ಳದಿದ್ದರೆ ಜಲಕ್ಷಾಮ ದುರಂತದ ಗಂಭೀರ ಪರಿಣಾಮ ಎದುರಿಸ ಬೇಕಾದೀತು.ಜನರ ಸಹಕಾರ ಹಾಗೂ ಸರಕಾರ ಮುತುವರ್ಜಿ ವಹಿಸಿ ಯೋಜನೆ ತಯಾರಿಸ ಬೇಕು.ಅನುದಾನ ಲಭಿಸಿದರೆ ಮಾತ್ರ ಸಾಲದು,ಅದರ ಸಮರ್ಪಕ ಅನುಷ್ಠಾನ ಕೂಡ ಆಗ ಬೇಕಾಗಿದೆ,
“ಸಂರಕ್ಷಣೆ ಅಗತ್ಯ’ಇದರ ಆಳ ವಿಸ್ತರಿಸಿ,ಬದಿಗಳನ್ನು ವೈಜ್ಞಾನಿಕ ರೀತಿಯಲ್ಲಿ ನಿರ್ಮಿಸಿದರೆ ಫಲಪ್ರದವಾದೀತು.ತಜ್ಞರಿಂದ ಯೋಜನೆ ತಯಾರಿಸ ಬೇಕಾಗಿದೆ.ಈ ಹಳ್ಳದ ಕೆಸರನ್ನು ಸುಮಾರು 20ವರ್ಷಗಳ ಮೊದಲೊಮ್ಮೆ ತೆಗೆದಿದ್ದರು.ನಂತರ ಇದರ ಸ್ವತ್ಛತೆ ನಡೆಯಲಿಲ್ಲ .ಸುಮಾರು ಎರಡು ಕಿ.ಮೀ.ಪ್ರದೇಶಗಳ ಜನರಿಗೆ ನೀರಿನ ಮೂಲವಾದ ಇದರ ರಕ್ಷಣೆ ಅತೀ ಅಗತ್ಯ ಎಂದು ಬೆಂದ್ರಪಳ್ಳದ ಅಶ್ರಫ್ ಹೇಳುತ್ತಾರೆ. ಈ ಬಗ್ಗೆ ಎಣ್ಮಕಜೆ ಪೆರ್ಲ ವಿಲೇಜ್ ಅಧಿಕಾರಿಯವರಲ್ಲಿ ಕೇಳಿದಾಗ ನಿರ್ಮಿತಿ ಕೇಂದ್ರದ ಅಧಿಕಾರಿಗಳು ಬಂದು ಪರಿಶೀಲಿಸಿದ್ದಾರೆ.ಯೋಜನೆಯ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲ ಎಂದು ಹೇಳುತ್ತಾರೆ.