Advertisement
ಅನಂತಸ್ವಾಮಿ ಧಾಟಿಯಲ್ಲಿ ನಾಡಗೀತೆ ಹಾಡುವುದನ್ನು ಕಡ್ಡಾಯಗೊಳಿಸಿ 2022ರ ಸೆ. 25ರಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹೊರಡಿಸಿದ್ದ ಆದೇಶವನ್ನು ಪ್ರಶ್ನಿಸಿ ಖ್ಯಾತ ಗಾಯಕ ಕಿಕ್ಕೇರಿ ಕೃಷ್ಣಮೂರ್ತಿ ಹೈಕೋರ್ಟ್ ಮೆಟ್ಟಿಲೇರಿದ್ದರು. ವಿಚಾರಣೆ ನಡೆಸಿದ ನ್ಯಾ| ಕೃಷ್ಣ ಎಸ್. ದೀಕ್ಷಿತ್ ಅವರ ನ್ಯಾಯ ಪೀಠವು ಕರ್ನಾಟಕ ಶಿಕ್ಷಣ ಕಾಯಿದೆ-1983ರಡಿ ನಾಡಗೀತೆಯನ್ನು ಇಂತಹದ್ದೇ ಧಾಟಿಯಲ್ಲಿ ಹಾಡುವಂತೆ ಆದೇಶ ನೀಡಲು ಸರಕಾರಕ್ಕೆ ಅಧಿಕಾರವಿದೆ ಎಂದು ಹೇಳಿ ಕಿಕ್ಕೇರಿ ಅರ್ಜಿಯನ್ನು ವಜಾ ಮಾಡಿದೆ.
Related Articles
-2022, ಸೆ. 25ರಂದುದಿ| ಅನಂತಸ್ವಾಮಿ ಧಾಟಿಯಲ್ಲಿ 2 ನಿಮಿಷ 30 ಸೆಕೆಂಡ್‌ಗಳಲ್ಲಿ ನಾಡಗೀತೆ ಹಾಡಲು ರಾಜ್ಯ ಸರಕಾರ ಆದೇಶ
-ಪೂರ್ಣ ಗೀತೆಗೆ ಅನಂತಸ್ವಾಮಿ ರಾಗ ಸಂಯೋಜಿಸಿಲ್ಲ. ಸಿ. ಅಶ್ವತ್ಥ್ ಧಾಟಿಯಲ್ಲಿ ಹಾಡಬೇಕು: ಕಿಕ್ಕೇರಿ ಕೃಷ್ಣಮೂರ್ತಿ ಅರ್ಜಿ
-ಸರಕಾರದ ಆದೇಶ ಸರಿಯಿದೆ: ತೀರ್ಪು
Advertisement
ತೀರ್ಪು ನನಗೆ ತೀವ್ರ ನಿರಾಶೆ ತಂದಿದೆ. ಆದೇಶದ ಪ್ರತಿ ಲಭಿಸಿದ ತತ್‌ಕ್ಷಣವೇ ವಿಭಾಗೀಯ ಪೀಠಕ್ಕೆ ಮೇಲ್ಮನವಿ ಸಲ್ಲಿಸುತ್ತೇನೆ. ನಾನು ಮೈಸೂರು ಅನಂತಸ್ವಾಮಿ ಅವರು ಸಂಪೂರ್ಣವಾಗಿ ರಾಗ ಸಂಯೋಜನೆ ಮಾಡಿರುವ ನಾಡಗೀತೆಯ ಪ್ರತಿ ನೀಡುವಂತೆ ಕೇಳಿದ್ದೆ. ನಾನು ಕೇಳಿರುವ ಪ್ರಶ್ನೆಯೇ ಬೇರೆ, ನನಗೆ ಸಿಕ್ಕಿದ ಉತ್ತರವೇ ಬೇರೆ. ನನ್ನ ವಾದ ಪ್ರಸ್ತುತಿಯನ್ನು ನ್ಯಾಯಾಲಯ ಶ್ಲಾ ಸಿರುವುದಕ್ಕೆ ನಾನು ನ್ಯಾಯಾಲಯಕ್ಕೆ ಕೃತಜ್ಞತೆ ಸಲ್ಲಿಸುತ್ತೇನೆ.-ಕಿಕ್ಕೇರಿ ಕೃಷ್ಣಮೂರ್ತಿ, ಅರ್ಜಿದಾರ