Advertisement

ಎ ಆ್ಯಂಡ್‌ ಜೆ ಹೆಲ್ತ್‌ ಕೇರ್‌: ಆಯುರ್ವೇದ ಸೇವೆಯಲ್ಲಿ ರಜತ ವರ್ಷ

11:57 AM Jan 24, 2018 | |

ಬೆಂಗಳೂರು: ಭಾರತದಲ್ಲೇ ಗರಿಷ್ಠ ಪ್ರಮಾಣದ ಆಯುರ್ವೇದ ಉತ್ಪನ್ನಗಳ ಪ್ರಖ್ಯಾತ ಮತ್ತು ಪ್ರತಿಷ್ಠಿತ ಬ್ರಾಂಡ್‌ಗಳ ವಿತರಕರೆಂದೇ ಖ್ಯಾತರಾದ ಬೆಂಗಳೂರಿನ ಎ ಆ್ಯಂಡ್‌ ಜೆ ಹೆಲ್ತ್‌ ಕೇರ್‌ ಸಂಸ್ಥೆಯ ರಜತ ವರ್ಷಾಚರಣೆಯ ಸಂಭ್ರಮ ಜ. 28ರಂದು ನಗರದ ಹೊರವಲಯ ಸರ್ಜಾಪುರದಲ್ಲಿರುವ ಸಂಸ್ಥೆಯ ಪ್ರಧಾನ ಕಚೇರಿಯಲ್ಲಿ ನಡೆಯಲಿದೆ.

Advertisement

ಸಂಸ್ಥೆಯ ರೂವಾರಿ ಮತ್ತು ಆಡಳಿತ ನಿರ್ದೇಶಕ ಸಿ. ಆರ್‌. ಜೋಶಿ ಅವರು ಕೇರಳದ ಶಂಕರ ಫಾರ್ಮಸಿಯ ದಿ.ಡಾ. ಕೆ.ಎಸ್‌. ಗಂಗಾಧರನ್‌ ಅವರ ಮಾರ್ಗದರ್ಶನದಲ್ಲಿ ಗ್ಯಾಸ್ಟ್ರಿಕ್‌ಗೆ ಪರಿಣಾಮಕಾರಿ ಔಷಧವಾದ ಅಲ್ಸೆಟ್‌ಅನ್ನು ಪ್ರಥಮವಾಗಿ ಮಂಗಳೂರಿನ ಮಾರುಕಟ್ಟೆಗೆ ಪರಿಚಯಿಸಿದರು. ಆಯುರ್ವೇದ ವಿತರಕ ಸಂಸ್ಥೆ ವಿವೇಕ್‌ ಟ್ರೇಡರ್ನ ಮಾಲಿಕ ದಿ. ಮಂಗಲ್ಪಾಡಿ ನಾಮದೇವ ಶೆಣೈ ಅವರ ಸಹಕಾರದಿಂದ ಮುಂದುವರಿಯಿತು.

ಬಳಿಕ ಆಯುರ್ವೇದ ಪರಂಪರೆಯ ಶಂಕರ ಫಾರ್ಮಸಿಯವರ ಆಯುರ್ವೇದ ಉತ್ಪನ್ನಗಳನ್ನು ರಾಜ್ಯದ ಜನತೆಗೆ ಪರಿಚಯಿಸಿದರು. ಇವರ ಅಮೃತ ಬಿಂದು ಮತ್ತು ಸಿರಪ್‌ ಅಸಿಡಿಟಿ ಮತ್ತು ಹೊಟ್ಟೆನೋವು ಹಾಗೂ ಉದರ ಸಂಬಂಧಿ ಇತರ ಕಾಯಿಲೆಗಳಿಗೆ ರಾಮಬಾಣವಾಗಿದೆ. ಈ ವಿತರಕ ಸಂಸ್ಥೆಯು ಕೇರಳ, ತಮಿಳುನಾಡು, ಗೋವಾ, ಆಂಧ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರ ರಾಜ್ಯಗಳಲ್ಲೂ ಈ ಆಯುರ್ವೇದ ಉತ್ಪನ್ನಗಳನ್ನು ಪರಿಚಯಿಸಿದೆ. ಇದೀಗ 25 ವರ್ಷಗಳನ್ನು ಪೂರ್ಣಗೊಳಿಸಿದೆ.   

ಆಯುರ್ವೇದ ಸಿದ್ಧಿಪೀಠಂನ ಮಹರ್ಷಿ ಡಾ. ಆನಂದ ಗುರೂಜಿ, ಆರೋಗ್ಯ ಸಚಿವ ಕೆ. ಆರ್‌. ರಮೇಶ್‌ ಕುಮಾರ್‌, ಮಹದೇವಪುರ ಶಾಸಕ ಅರವಿಂದ ಲಿಂಬಾವಳಿ, ರಾಜ್ಯಸಭಾ ಸದಸ್ಯ ಕುಪೇಂದ್ರ ರೆಡ್ಡಿ, ಬೊಮ್ಮನಹಳ್ಳಿ ಶಾಸಕ ಸತೀಶ್‌ ರೆಡ್ಡಿ, ಬೆಳ್ಳಂದೂರು ವಾರ್ಡಿನ ಕಾರ್ಪೋರೇಟರ್‌ ಆಶಾ ಸುರೇಶ್‌, ಜಿಗಣಿಯ ಕೌನ್ಸಿಲರ್‌ ಎ. ಕೃಷ್ಣ ರೆಡ್ಡಿ, ಆಯುರ್ವೇದ ಔಷಧ ತಯಾರಕ ಸಂಘದ ಪ್ರಧಾನ ಕಾರ್ಯದರ್ಶಿ ಡಾ.ಡಿ. ರಾಮನಾಥನ್‌ ಇತರರು ಭಾಗವಹಿಸಲಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next