Advertisement

2 ತಿಂಗಳ ಮಗುವನ್ನು ಸಾಹಸದಿಂದ ರಕ್ಷಿಸಿದ NDRF ಸಿಬ್ಬಂದಿ; watch

03:59 PM Aug 20, 2018 | Sharanya Alva |

ಕೊಡಗು/ಮಡಿಕೇರಿ: ವರುಣನ ಆರ್ಭಟಕ್ಕೆ ಕೊಡಗಿನಲ್ಲಿ ಮನೆ, ಮಠ ಕಳೆದುಕೊಂಡು ಜನರು ಕಂಗಾಲಾಗಿದ್ದರೆ, ಮತ್ತೊಂದೆಡೆ ಜನರ ರಕ್ಷಣೆಗೆ ಕಾರ್ಯಾಚರಣೆ ಬಿರುಸಿನಿಂದ ನಡೆಯುತ್ತಿದ್ದು, ಎನ್ ಡಿಆರ್ ಎಫ್ ಸಿಬ್ಬಂದಿಯೊಬ್ಬರು 2 ತಿಂಗಳ ಮಗುವನ್ನು ಎದೆಗವಚಿಕೊಂಡು ರಭಸದಿಂದ ಹರಿಯುತ್ತಿರುವ ತಂತಿ ಮೂಲಕ ಜಾರಿಕೊಂಡು ಬಂದು ರಕ್ಷಿಸಿರುವು ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

Advertisement

ಮಡಿಕೇರಿಯ ತಂತಿಪಾಲ ಎಂಬಲ್ಲಿ ಕಾರವಾರದಿಂದ ಬಂದ ರಕ್ಷಣಾ ಪಡೆಯ ಸಿಬ್ಬಂದಿ ಮಗುವಿನ ಪ್ರಾಣ ರಕ್ಷಿಸಿರುವುದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ದಡ ಸೇರಿದ ಬಳಿಕ ಮಗುವನ್ನು ಆಸ್ಪತ್ರೆಗೆ ಕರೆದೊಯ್ದು ತಪಾಸಣೆ ನಡೆಸಿದ ಮೇಲೆ ಪೋಷಕರಿಗೆ ಒಪ್ಪಿಸಲಾಗಿದೆ.

ಕೊಡಗು ಜಿಲ್ಲೆಯಲ್ಲಿ ಕಾರ್ಯಾಚರಣೆ ನಡೆಸಿ 2 ತಿಂಗಳ ಮಗುವನ್ನು ರಕ್ಷಿಸಿದ ಮಹತ್ವದ ಕ್ಷಣ ಎಂದು ಬರೆದು ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಈ ವಿಡಿಯೋವನ್ನು ಟ್ವೀಟ್ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next