Advertisement

ಎ. 2, 30: ಪೋಲಿಯೊ ಲಸಿಕಾ ದಿನ

08:59 AM Mar 31, 2017 | Team Udayavani |

ಉಡುಪಿ: ಪಲ್ಸ್‌ ಪೋಲಿಯೋ ರಾಷ್ಟ್ರೀಯ ಲಸಿಕಾ ದಿನವನ್ನು ಎ. 2 ಮತ್ತು 30ರಂದು ಆಯೋಜಿಸಲಾಗುವುದು ಎಂದು ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್‌ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಪಾಕಿಸ್ಥಾನ, ಅಫ್ಘಾನಿಸ್ಥಾನ ಮತ್ತು ನೈಜೀರಿಯಾಗಳಲ್ಲಿ ಪೋಲಿಯೊ ಪ್ರಕರಣಗಳು ಕಂಡುಬಂದಿದ್ದು, ಹರಡುವ ಸಾಧ್ಯತೆ ಇರುವುದರಿಂದ ಸಾರ್ವತ್ರಿಕ ಲಸಿಕೆ ಹಾಗೂ ಎಎಫ್ಸಿ ಸರ್ವೇಕ್ಷಣ ಕಾರ್ಯಕ್ರಮಗಳನ್ನು ಜವಾಬ್ದಾರಿಯುತವಾಗಿ ನಿರ್ವಹಿಸಬೇಕಾಗುತ್ತದೆ ಎಂದು ತಿಳಿಸಿದರು. 

Advertisement

83,562 ಮಕ್ಕಳಿಗೆ ಲಸಿಕೆ : ಎ.2 – 3 ರಂದು ಪಲ್ಸ್‌ ಪೋಲಿಯೋ ಕಾರ್ಯಕ್ರಮ ನಡೆಸಲಾಗುವುದು. ಮೊದಲ ದಿನ ಪೋಲಿಯೊ ಬೂತ್‌ಗಳಲ್ಲಿ ಹಾಗೂ ಅನಂತರ 2-3 ದಿನಗಳಲ್ಲಿ ಮನೆ-ಮನೆ ಭೇಟಿಯಲ್ಲಿ 5 ವರ್ಷದೊಳಗಿನ ಎಲ್ಲ ಮಕ್ಕಳಿಗೆ ಪೋಲಿಯೊ ಹನಿ ನೀಡಲಾಗುವುದು ಎಂದು ತಿಳಿಸಿದರು. ಜಿಲ್ಲೆಯಲ್ಲಿ 5 ವರ್ಷದೊಳಗಿನ 67,919 (ಗ್ರಾಮಾಂತರ), 15,643 (ನಗರ) ಒಟ್ಟು 83,562 ಮಕ್ಕಳಿಗೆ ಗ್ರಾಮಾಂತರ 560, ನಗರಗಳಲ್ಲಿ 88 ಒಟ್ಟು 648 ಲಸಿಕಾ ಕೇಂದ್ರಗಳ ಮೂಲಕ ಲಸಿಕೆ ಹಾಕಲಾಗುವುದು. 2,592 ಸ್ವಯಂ ಸೇವಕರು ಕಾರ್ಯನಿರ್ವಹಿಸಲಿದ್ದಾರೆ. 26 ಟ್ರಾನ್ಸಿಸ್ಟ್‌ ಬೂತ್‌ಗಳು, 15 ಮೊಬೈಲ್‌ ಟೀಮುಗಳು ಒಟ್ಟು 41 ತಂಡಗಳಲ್ಲಿ 164 ಮಂದಿ ಸ್ವಯಂ ಸೇವಕರು ಇದರಲ್ಲಿ ಕೆಲಸ ಮಾಡಲಿದ್ದಾರೆ ಎಂದರು. ಜಿಲ್ಲಾ ಆರೋಗ್ಯ ಅಧಿಕಾರಿ ಡಾ| ರೋಹಿಣಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next