ಜಕಾರ್ತಾ:ಬರೋಬ್ಬರಿ 16 ಅಡಿ ಉದ್ದದ ಹೆಬ್ಬಾವು ಮಹಿಳೆಯನ್ನು ನುಂಗಿದ್ದು, ಸ್ಥಳೀಯರು ಹೆಬ್ಬಾವಿನ ಹೊಟ್ಟೆಯನ್ನು ಸೀಳಿದಾಗ ಶವ ಪತ್ತೆಯಾಗಿರುವ ಭಯಾನಕ ಘಟನೆ ಇಂಡೋನೇಷ್ಯಾದ ಜಾಂಬಿ ಪ್ರದೇಶದಲ್ಲಿ ನಡೆದಿದೆ ಎಂದು ವರದಿ ತಿಳಿಸಿದೆ.
ಇದನ್ನೂ ಓದಿ:ದೇಶವಿರೋಧಿ ಶಕ್ತಿಗಳಿಗೆ ತಮಿಳುನಾಡು ಸ್ವರ್ಗವಾಗಿದೆ :ಅಣ್ಣಾಮಲೈ ಕಿಡಿ
ಜಹ್ರಾಹ್ (52ವರ್ಷ) ಎಂಬಾಕೆ ರಬ್ಬರ್ ತೋಟದಲ್ಲಿ ಟ್ಯಾಪಿಂಗ್ ಕೆಲಸ ಮಾಡಲು ತೆರಳುತ್ತಿದ್ದ ಸಂದರ್ಭದಲ್ಲಿ ಕಳೆದ ವಾರ ನಾಪತ್ತೆಯಾಗಿರುವುದಾಗಿ ಜಹ್ರಾಹ್ ಕುಟುಂಬದವರು ಪೊಲೀಸರಿಗೆ ದೂರು ನೀಡಿದ್ದರು.
ಭಾನುವಾರ ರಬ್ಬರ್ ಟ್ಯಾಪಿಂಗ್ ಕೆಲಸಕ್ಕೆ ಹೋದಾಕೆ ಸಂಜೆಯಾದರು ಮನೆಗೆ ಬಂದಿಲ್ಲ ಎಂದು ದೂರಿನಲ್ಲಿ ತಿಳಿಸಲಾಗಿತ್ತು ಎಂಬುದಾಗಿ ಸಿಎನ್ ಎನ್ ಇಂಡೋನೇಷ್ಯಾ ವರದಿ ಮಾಡಿದೆ. ಒಂದು ದಿನದ ಬಳಿಕ ಮಹಿಳೆಗಾಗಿ ಶೋಧ ಕಾರ್ಯ ನಡೆಸುತ್ತಿದ್ದ ಸ್ಥಳೀಯರಿಗೆ ಭಾರೀ ಗಾತ್ರದ ದೊಡ್ಡ ಹೊಟ್ಟೆಯ ಹೆಬ್ಬಾವು ಪತ್ತೆಯಾಗಿತ್ತು.
ಹೆಬ್ಬಾವಿನ ಹೊಟ್ಟೆಯನ್ನು ಗಮನಿಸಿದ ಸ್ಥಳೀಯರಿಗೆ ಮನುಷ್ಯನನ್ನು ನುಂಗಿರುವ ಬಗ್ಗೆ ಸಂಶಯಗೊಂಡು, ಹೆಬ್ಬಾವನ್ನು ಕೊಡಲಿಯಿಂದ ತುಂಡರಿಸಿದಾಗ ನಾಪತ್ತೆಯಾಗಿದ್ದ ಮಹಿಳೆಯ ಶವ ಪತ್ತೆಯಾಗಿರುವುದಾಗಿ ವರದಿ ವಿವರಿಸಿದೆ.
ಇಂತಹ ಘಟನೆಗಳು ನಡೆಯುವುದು ತುಂಬಾ ಅಪರೂಪ, ಆದರೆ ಇಂಡೋನೇಷ್ಯಾದಲ್ಲಿ ಇದು ಮೊದಲ ಘಟನೆಯಲ್ಲ, 2018ರಲ್ಲಿ 54 ವರ್ಷದ ಮಹಿಳೆಯ ಶವ 7 ಅಡಿ ಉದ್ದದ ಹೆಬ್ಬಾವಿನ ಹೊಟ್ಟೆಯಲ್ಲಿ ಪತ್ತೆಯಾಗಿರುವುದಾಗಿ ಜಾಂಬಿ ಪೊಲೀಸ್ ವರಿಷ್ಠಾಧಿಕಾರಿ ಎಕೆಪಿ ಹರೇಫಾ ಸ್ಥಳೀಯ ಮಾಧ್ಯಮವೊಂದಕ್ಕೆ ತಿಳಿಸಿರುವುದಾಗಿ ವರದಿಯಾಗಿದೆ.