Advertisement

ಗೇಮಿಂಗ್ ಉತ್ಸಾಹಿಗಳಿಗಾಗಿ ಒನ್ ಪ್ಲಸ್ ನಿಂದ 9 ಆರ್ 5ಜಿ ಮಾರುಕಟ್ಟೆಗೆ

04:49 PM Apr 12, 2021 | Team Udayavani |

ಬೆಂಗಳೂರು : ಮಿತವ್ಯಯದ ದರದಲ್ಲಿ ಫ್ಲಾಗ್ ಶಿಪ್‍ ಫೋನ್‍ಗಳನ್ನು ನೀಡುವುದಕ್ಕೆ ಹೆಸರಾದ ಒನ್ ಪ್ಲಸ್  ಕಂಪೆನಿ ಇತ್ತೀಚೆಗೆ ಒನ್ ಪ್ಲಸ್ 9 ಸರಣಿಯ ಸ್ಮಾರ್ಟ್ ಫೋನ್ ಗಳನ್ನು ಬಿಡುಗಡೆ ಮಾಡಿದ್ದು, ಇದರ ಮುಂದುವರಿದ ಭಾಗವಾಗಿ ಗೇಮಿಂಗ್ ಉತ್ಸಾಹಿಗಳ ಬೇಡಿಕೆಯನ್ನು ಗಮನದಲ್ಲಿಟ್ಟುಕೊಂಡು ವಿನ್ಯಾಸಗೊಳಿಸಲಾಗಿರುವ OnePlus 9R 5G ಸರಣಿಯ ಸ್ಮಾರ್ಟ್ ಫೋನ್ ಗಳನ್ನು ಮಾರುಕಟ್ಟೆಗೆ ತಂದಿದೆ. ಈ OnePlus 9R 5G ಪ್ರೀಮಿಯಂ ಸ್ಮಾರ್ಟ್ ಫೋನ್ ಅನುಭವವನ್ನು ಇನ್ನೂ ಹೆಚ್ಚಿನ ಬಳಕೆದಾರರಿಗೆ ಸುಲಭ ದರದಲ್ಲಿ ಲಭ್ಯವಾಗುವಂತೆ ಮಾಡುವ  ಉದ್ದೇಶ ಹೊಂದಿದೆ.

Advertisement

ಈ ಬಗ್ಗೆ ಮಾತನಾಡಿದ ಒನ್ ಪ್ಲಸ್ ನ ಸಿಇಒ ಪೀಟ್ ಲೌ, OnePlus 9R 5G ಅನ್ನು ಭಾರತದಲ್ಲಿ ಬಿಡುಗಡೆ ಮಾಡಲು ನಮಗೆ ಅತ್ಯಂತ ಸಂತಸವೆನಿಸುತ್ತಿದೆ. ಅತ್ಯುತ್ಕೃಷ್ಟ ಮಟ್ಟದ ಹಾರ್ಡ್ ವೇರ್ ಮತ್ತು ಸಾಫ್ಟ್ ವೇರ್ ಗಳ ತಡೆರಹಿತವಾದ ಸಮಗ್ರ ಸೌಲಭ್ಯಗಳನ್ನು ನೀಡುವ ಮೂಲಕ ಇನ್ನೂ ಹೆಚ್ಚು ಗೇಮಿಂಗ್ ಉತ್ಸಾಹಿಗಳನ್ನು ಆಕರ್ಷಿಸುವಂತೆ ಮಾಡಲಿದೆ ಎಂದರು.

ಸುಪೀರಿಯರ್ ಶಕ್ತಿ & ಕಾರ್ಯದಕ್ಷತೆ :

OnePlus 9R 5G  ಕ್ವಾಲ್ಕಂ ಸ್ನ್ಯಾಪ್ ಡ್ರ್ಯಾಗನ್ 870 ಪ್ರೊಸೆಸರ್‍ ಹೊಂದಿದೆ. ಇದು ಈ ಹಿಂದಿನ ಜನರೇಶನ್ ಗಿಂತ ಶೇ.12.6 ರಷ್ಟು ವೇಗವನ್ನು ನೀಡುತ್ತದೆ ಮತ್ತು ಡಿವೈಸ್ ಅನ್ನು ಗೇಮಿಂಗ್ ಪವರ್ ಹೌಸ್ ರೀತಿಯನ್ನಾಗಿ ಪರಿವರ್ತಿಸಲಿದೆ. 5ಜಿ ಸಂಪರ್ಕದ ವೇಗದೊಂದಿಗೆ OnePlus 9R 5G 875/ ಎಂಬಿ/ಎಸ್ ನವರೆಗೆ ಡೌನ್ ಲೋಡ್ ವೇಗಗಳನ್ನು ನೀಡುತ್ತದೆ

 ಸರಿಸಾಟಿಯಿಲ್ಲದ ಗೇಮಿಂಗ್

Advertisement

ಇದನ್ನು ಕ್ಯಾಶ್ಯುವಲ್ ಮತ್ತು ಹಾರ್ಡ್ ಕೋರ್ ಗೇಮರ್ ಇಬ್ಬರಿಗೂ ಹೊಂದಿಕೊಳ್ಳುವ ರೀತಿಯಲ್ಲಿ ವಿನ್ಯಾಸಗೊಳಿಸಲಾಗಿದೆ. OnePlus 9R 5G ಯ 240 Hz ಟಚ್ ಸ್ಯಾಂಪ್ಲಿಂಗ್ ದರವು ಬಳಕೆದಾರರು ಒಂದೇ ಬಾರಿ ಐದೂ ಬೆರಳುಗಳನ್ನು ಬಳಸಿ ತಮ್ಮ ಗೇಮಿಂಗ್ ಅನ್ನು ಅತ್ಯಂತ ವೇಗವಾಗಿ ಆಡಲು ಅನುವು ಮಾಡಿಕೊಡುತ್ತದೆ. ಇದರಲ್ಲಿನ ಎಕ್ಸ್-ಆಕ್ಸಿಸ್ ಲೀನಿಯರ್ ಮೋಟರ್ ಡೈನಾಮಿಕ್ ವೈಬ್ರೇಶನ್ ಅನ್ನು ಅತ್ಯದ್ಭುತವಾಗಿ ಆಗುವಂತೆ ನೋಡಿಕೊಳ್ಳಲಿದೆ. ಅದೇ ರೀತಿ ವಿವಿಧ ಮಾದರಿಯ ಇನ್-ಗೇಮ್ ವೈಬ್ರೇಷನ್ ಗಳಿಂದ ಅತ್ಯಾಕರ್ಷಕವಾದ ಗೇಮಿಂಗ್ ಅನುಭವವನ್ನು ನೀಡಲಿದೆ. ಇದರ ಶಕ್ತಿಶಾಲಿ ಡ್ಯುಯೆಲ್ ಸ್ಟೀರಿಯೋ ಸ್ಪೀಕರ್ ಗಳು 3ಡಿ ಸೌಂಡ್ ಸ್ಕೇಪ್ ಮತ್ತು ಡಾಲ್ಬಿ ಅಟ್ಮೋಸ್ ಆಡಿಯೋ ಅನುಭವವನ್ನು ನೀಡಲಿವೆ. OnePlus 9R 5G ಗೇಮಿಂಗ್ ಅನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ಯಲಿದ್ದು, ಇದರಲ್ಲಿನ ಮಲ್ಟಿ ಲೇಯರ್ ಕೂಲಿಂಗ್ ಸಿಸ್ಟಂನಿಂದಾಗಿ ಬಳಕೆದಾರರ ಅನುಭವವನ್ನು ಇಮ್ಮಡಿಗೊಳಿಸಲಿದೆ.

 120 Hz ಫ್ಲ್ಯುಯಿಡ್ ಅಮೋಲೆಡ್‍ ಡಿಸ್ ಪ್ಲೇ

OnePlus 9R 5G ಯ 6.55 ಫ್ಲ್ಯುಯಿಡ್ ಅಮೋಲ್ಡ್ ಡಿಸ್ ಪ್ಲೇ ಪ್ರತಿ ಫ್ರೇಂನಲ್ಲಿಯೂ ಅಲ್ಟ್ರಾ ಸ್ಮೂತ್ ಸ್ಕ್ರಾಲಿಂಗ್ ಅನ್ನು ನೀಡಲಿದೆ. ಇದರ ಕ್ರಿಸ್ಪ್ 120 Hz ಪ್ಯಾನಲ್‍, ಫ್ಲ್ಯಾಟ್ ಡಿಸ್ ಪ್ಲೇ ಉತ್ತಮ ದೃಶ್ಯದ ಅನುಭವವನ್ನು ನೀಡಲಿದೆ.

ಅಡ್ವಾನ್ಸ್ಡ್ ಕ್ವಾಡ್-ಕ್ಯಾಮೆರಾ ಸಿಸ್ಟಂ

ಮೇನ್ ಕ್ಯಾಮೆರಾದಲ್ಲಿ 48MP ಸೋನಿ IMX586 ಸೆನ್ಸಾರ್ ನಿಂದ ಕಸ್ಟಮೈಸ್ಡ್ ವೈಶಿಷ್ಟ್ಯತೆಯನ್ನು ಒಳಗೊಂಡಿದೆ. ಇದರಿಂದಾಗಿ ವೇಗ, ಅತ್ಯದ್ಭುತ ಕಲರ್ ನಿಖರತೆ ಮತ್ತು ರಾತ್ರಿ ವೇಳೆಯ ಫೋಟೋಗ್ರಾಫಿಯನ್ನು ಅತ್ಯುತ್ತಮವಾಗಿ ಮಾಡಬಹುದಾಗಿದೆ. ಇದರಲ್ಲಿ ನೈಟ್ ಸ್ಕೇಪ್ ಮೋಡ್ ಇರಲಿದ್ದು, ಇಂಟಲಿಜೆಂಟ್ ಮಲ್ಟಿ ಫ್ರೇಂ ಪ್ರೊಸೆಸಿಂಗ್ ಸಹ ಇರುವುದರಿಂದ ಸ್ಪಷ್ಟತೆ ಮತ್ತು ರಾತ್ರಿ ವೇಳೆ ನಿಮ್ಮ ನೆಚ್ಚಿನ ಸಿಟಿಸ್ಕೇಪ್ ಗಳನ್ನು ಕ್ಲಿಕ್ಕಿಸಬಹುದಾಗಿದೆ. 16 ಮೆಪಿ. ವೈಡ್, 5 ಮೆಪಿ ಮ್ಯಾಕ್ರೋ 2 ಮೆ.ಪಿ. ಮೊನೋಕ್ರೋಮ್‍ ಲೆನ್ಸ್ ಇದೆ. 16 ಮೆಪಿ. ಸೆಲ್ಫೀ ಕ್ಯಾಮರಾ ಹೊಂದಿದೆ.

ಆಕ್ಸಿಜನ್‍ 11 ಓಎಸ್‍ ಇದ್ದು, 4500

ಎಂಎಎಚ್‍ ಬ್ಯಾಟರಿ ಇದೆ. ಇದಕ್ಕೆ ವಾರ್ಪ್ ವೇಗದ ಚಾರ್ಜರ್‍ ನೀಡಲಾಗಿದೆ. ಇದು 39 ನಿಮಿಷದಲ್ಲಿ ಸಂಪೂರ್ಣ ಚಾರ್ಜ್ ಆಗುತ್ತದೆ. ಈ ಮೊಬೈಲ್‍ ಕಪ್ಪು, ನೀಲಿ ಬಣ್ಣದಲ್ಲಿ ದೊರಕುತ್ತದೆ. 8ಜಿಬಿ ರ್ಯಾಮ್‍ ಮತ್ತು 128 ಜಿಬಿ ಆಂತರಿಕ ಸಂಗ್ರಹದ ಆವೃತ್ತಿಗೆ 39,999 ರೂ. 12 ಜಿಬಿ+256 ಜಿಬಿ ಆವೃತ್ತಿಗೆ 43,999 ರೂ. ದರವಿದೆ. ಏ. 14ರಿಂದ ಅಮೆಜಾನ್‍ ಪ್ರೈಮ್‍ ಸದಸ್ಯರಿಗೆ, ಏ. 15ರಿಂದ ಅಮೆಜಾನ್‍.ಇನ್‍. ಒನ್‍ಪ್ಲಸ್‍.ಇನ್‍, ಒನ್‍ಪ್ಲಸ್‍ ಎಕ್ಸ್ ಕ್ಲುಸಿವ್‍ ಸ್ಟೋರ್ ಗಳಲ್ಲಿ ಎಲ್ಲ ಗ್ರಾಹಕರಿಗೆ ಲಭ್ಯ. ಎಸ್‍ಬಿಐ ಕ್ರೆಡಿಟ್‍ ಕಾರ್ಡ್‍ ಮೂಲಕ ಖರೀದಿಸಿದರೆ 2000 ರೂ. ರಿಯಾಯಿತಿ ಸಹ ದೊರಕುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next