ದೂರುದಾರರು ಫೇಸ್‌ಬುಕ್‌ನ ಮಾರ್ಕೆಟಿಂಗ್ ಪೇಜ್‌ನಲ್ಲಿ ಕುರ್ತಾ ಆರ್ಡರ್ ಮಾಡಿದ್ದು, ಮೇ 4ರಂದು ಅದು ಮನೆಗೆ ಬಂದಿದೆ. ಪರಿಶೀಲಿಸಿದಾಗ ಆರ್ಡರ್ ಮಾಡಿರುವ ಕುರ್ತಾದ ಬದಲು ಬೇರೆ ಯಾವುದೋ ಕುರ್ತಾ ಬಂದಿತ್ತು. ಅದನ್ನು ವಾಪಸು ಕಳುಹಿಸಲು ವೆಬ್‌ಸೈಟ್‌ನಲ್ಲಿ ನಮೂದಿಸಿರುವ ಕಸ್ಟಮರ್ ಕೇರ್ ದೂರವಾಣಿ ಸಂಖ್ಯೆಗೆ ಕರೆ ಮಾಡಿದ್ದು, ಕರೆ ಸ್ವೀಕರಿಸಿದ ವ್ಯಕ್ತಿ ತಾನು ಹಣವನ್ನು ರೀಫಂಡ್ ಮಾಡುತ್ತೇನೆ ಎಂದು ತಿಳಿಸಿದ್ದಾನೆ. ಬಳಿಕ ಲಿಂಕ್ ಕಳುಹಿಸಿ ಅದಕ್ಕೆ ವಿವರಗಳನ್ನು ಹಾಕಿ ಕಳುಹಿಸುವಂತೆ ತಿಳಿಸಿದ್ದಾನೆ. ಅದರಂತೆ ಕ್ಲಿಕ್ ಮಾಡಿ ಯುಪಿಐ ಐಡಿ ವಿವರವನ್ನು ದಾಖಲಿಸಿದ್ದಾರೆ. ಆಗ ಖಾತೆಯಿಂದ 1 ರೂ. ಡೆಬಿಟ್ ಆಗಿದೆ. ಮೇ 5ರಂದು ಸಂಜೆ ವೇಳೆ ಖಾತೆಯಿಂದ ಹಂತ ಹಂತವಾಗಿ ಒಟ್ಟು 99,980 ರೂ. ಡೆಬಿಟ್ ಆದ ಸಂದೇಶ ಬಂದಿದೆ.
Advertisement
ಯಾರೋ ಅಪರಿಚಿತರು ಆರ್ಡರನ್ನು ಹಿಂದಕ್ಕೆ ಪಡೆದು ಹಣವನ್ನು ರೀಫಂಡ್ ಮಾಡುವುದಾಗಿ ನಂಬಿಸಿ ಖಾತೆಯಿಂದ ಅನಧಿಕೃತವಾಗಿ ಹಣ ವರ್ಗಾಯಿಸಿ ಮೋಸ ಮಾಡಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ.