Advertisement

ಶೇ.99.30 ಅಮಾನ್ಯ ನೋಟುಗಳು ಬ್ಯಾಂಕುಗಳಿಗೆ ವಾಪಸ್‌ : ಆರ್‌ಬಿಐ ವರದಿ

12:24 PM Aug 29, 2018 | |

ಹೊಸದಿಲ್ಲಿ : 2016ರ ನವೆಂಬರ್‌ನಲ್ಲಿ ಕೈಗೊಂಡಿದ್ದ ಐತಿಹಾಸಿಕ ಕ್ರಮದಲ್ಲಿ ಅಮಾನ್ಯ ಗೊಂಡಿದ್ದ 500 ಮತ್ತು 1,000 ರೂ.ಗಳ ಕರೆನ್ಸಿ ನೋಟುಗಳ ಶೇ.99.30 ಪ್ರಮಾಣದ ನೋಟುಗಳು ಬ್ಯಾಂಕುಗಳಿಗೆ ಮರಳಿ ಬಂದಿವೆ ಎಂದು ಭಾರತೀಯ ರಿಸರ್ವ್‌ ಬ್ಯಾಂಕ್‌ ತನ್ನ ವಾರ್ಷಿಕ ವರದಿಯಲ್ಲಿ ತಿಳಿಸಿದೆ. 

Advertisement

2016ರ ನವೆಂಬರ್‌ 8ರಂದು ಅಮಾನ್ಯಗೊಳ್ಳುವ ಮುನ್ನ ದೇಶದಲ್ಲಿ 500 ಮತ್ತು 1,000 ರೂ.ಗಳ 15.41 ಲಕ್ಷ ಕೋಟಿ ರೂ. ಮೌಲ್ಯದ ನೋಟುಗಳು ಚಲಾವಣೆಯಲ್ಲಿ ಇದ್ದವು. ಈ ಪೈಕಿ 15.31 ಲಕ್ಷ ಕೋಟಿ ರೂ. ಮೌಲ್ಯದ ನೋಟುಗಳು ಬ್ಯಾಂಕುಗಳಿಗೆ ಮರಳಿ ಬಂದಿವೆ ಎಂದು ಆರ್‌ಬಿಐ ಹೇಳಿದೆ.

ಮರಳಿ ಬಂದ ಅಮಾನ್ಯ ನೋಟುಗಳ ಹೈ ಸ್ಪೀಡ್‌ ಕರೆನ್ಸಿ ವೆರಿಫಿಕೇಶನ್‌ ಮತ್ತು ಪ್ರೋಸೆಸಿಂಗ್‌ ಪ್ರಕ್ರಿಯೆಯ, ಪರ್ವತ ಗಾತ್ರದ ಗುರುತರ ಸವಾಲಿನ ಕೆಲಸವನ್ನು ಯಶಸ್ವಿಯಾಗಿ ಮುಗಿಸಲಾಗಿದೆ ಎಂದು ಆರ್‌ಬಿಐ ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next