Advertisement

99 ವರ್ಷದ ಭಾರತೀಯ ವೃದ್ಧೆಗೆ ಅಮೆರಿಕ ಪೌರತ್ವ

01:41 AM Apr 07, 2024 | Team Udayavani |

ವಾಷಿಂಗ್ಟನ್‌: ಅಮೆರಿಕ! ಇಲ್ಲಿನ ನಿವಾ ಸಿಗಳಾಗುವುದು ಜಗತ್ತಿನ ಅನೇಕ ಮಂದಿಯ ಕನಸು. ಅಮೆರಿಕದಲ್ಲಿ ಕೆಲಸ ಸಿಕ್ಕರೂ, ಅಲ್ಲಿನ ಪ್ರಜೆಗಳಾಗಿಯೇ ಉಳಿ ಯು ವುದಕ್ಕೆ ನಾನಾ ಕಾನೂನು, ಅಡತಡೆ ಗಳೂ ಇವೆ. ಇವೆಲ್ಲವನ್ನೂ ಮೀರಿ ಭಾರತ ಮೂಲದ 99ರ ವಯಸ್ಸಿನ ವೃದ್ಧೆ ಯೊಬ್ಬರು ಇದೀಗ ಅಮೆರಿಕದ ಪೌರತ್ವ ಪಡೆದಿದ್ದಾರೆ. ಈ ಬೆನ್ನಲ್ಲೇ ಅಮೆರಿಕದ ನಿವಾಸಿಗಳಾಗು ವವರ ಕನಸಿಗೆ ಅಮೆರಿಕ ಬೆಲೆ ನೀಡು ತ್ತಿಲ್ಲವೇ ಎನ್ನುವ ಪ್ರಶ್ನೆ ಜಾಲತಾಣದಲ್ಲಿ ಚರ್ಚೆಗೆ ಗ್ರಾಸವಾಗಿದೆ.

Advertisement

ಹೌದು, 1925ರಲ್ಲಿ ಭಾರತದಲ್ಲಿ ಜನಸಿದ ದೈಬೈ ಹೆಸರಿನ ವೃದ್ಧೆ ಕಳೆದ 20 ವರ್ಷಗಳಿಂದ ತಮ್ಮ ಪುತ್ರಿಯೊಂದಿಗೆ ಅಮೆ ರಿಕದ ಒರ್ಲ್ಯಾಂಡೋದಲ್ಲಿ ವಾಸ ವಿ ದ್ದರು. ಅಮೆರಿಕದ ಪೌರತ್ವಕ್ಕೆ ಬಹು ಕಾಲ ದಿಂದ ಬೇಡಿಕೆ ಮುಂದಿಟ್ಟಿದ್ದರು. ಅದನ್ನು ಪರಿಗಣಿಸಿದ ಅಮೆರಿಕ ಸರಕಾರ ಪೌರತ್ವ ನೀಡಿ, ಈ ವಿಚಾರ ವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದೆ. 20 ವರ್ಷಗಳ ಬೇಡಿಕೆಗೆ ಇಷ್ಟು ವಿಳಂಬವಾಗಿ ಮನ್ನಣೆ ಸಿಕ್ಕಿದ್ದರ ಬಗ್ಗೆ ನೆಟ್ಟಿಗರು ಚರ್ಚಿಸುತ್ತಿದ್ದಾರೆ. ಉದ್ಯೋಗಕ್ಕಾಗಿ ಅಮೆರಿಕದಲ್ಲಿರುವ ಭಾರತೀಯರಿಗೆ ಅಮೆರಿಕ ಪೌರತ್ವ ಸಿಗುವ ವೇಳೆ ಮಹಿಳೆಯ ವಯಸ್ಸೇ ಆಗಬಹುದೇನೋ ಎಂದು ಕಾಲೆಳೆದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next